Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮಗಳು’ | ಅಕ್ಟೋಬರ್ 25

    October 24, 2026

    ಬಂಗಾರಪ್ಪ ಪ್ರತಿಷ್ಠಾನದ ‘ಬಂಗಾರ ಪ್ರಶಸ್ತಿ’ ಪ್ರಕಟ

    October 24, 2026

    ‘ಡುಂಡಿರಾಜರ ದಂಡಯಾತ್ರೆ’ ಕೃತಿ ಪರಿಚಯ, ಸಂವಾದ ಕಾರ್ಯಕ್ರಮ | ಅಕ್ಟೋಬರ್ 25

    October 24, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಜೃಂಭಣೆಯಿಂದ ನೆರವೇರಿದ ಜಿಲ್ಲಾಮಟ್ಟದ ʼಕೊಂಕ್ಣಿ ಸಂಭ್ರಮ್ʼ ಕೊಂಕಣಿ ಸಮ್ಮೇಳನ
    Cultural

    ವಿಜೃಂಭಣೆಯಿಂದ ನೆರವೇರಿದ ಜಿಲ್ಲಾಮಟ್ಟದ ʼಕೊಂಕ್ಣಿ ಸಂಭ್ರಮ್ʼ ಕೊಂಕಣಿ ಸಮ್ಮೇಳನ

    October 24, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾರವಾರ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಕಾರವಾರ ಇದರ ಸಹಯೋಗದಲ್ಲಿ ಕಾರವಾರ ಬಾಡ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬಾಬಿ ಸಾಮಂತ ಸಭಾಭವನದಲ್ಲಿ ದಿನಾಂಕ 22 ಅಕ್ಟೋಬರ್ 2026ರಂದು ಉತ್ತರ ಕನ್ನಡ ಜಿಲ್ಲಾಮಟ್ಟದ ʼಕೊಂಕ್ಣಿ ಸಂಭ್ರಮ್ʼ ಕೊಂಕಣಿ ಸಮ್ಮೇಳನವು ವಿಜೃಂಭಣೆಯಿಂದ ನಡೆಯಿತು.

    ಸಮ್ಮೇಳನಾಧ್ಯಕ್ಷರಾಗಿ ಡಾ. ಉದಯ್ ರಾಯ್ಕರ್ರವರು ಉಪಸ್ಥಿತರಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿ “ಕೊಂಕಣಿ ನಮ್ಮ ಹೃದಯದ ಭಾಷೆ, ಆದರೆ ನಮ್ಮ ಈ ಮಾತೃಭಾಷೆಯ ಮೇಲೆ ಇತರ ಆಡುಭಾಷೆಗಳ ಪ್ರಭಾವ ಹೆಚ್ಚಿದೆ. ಹೀಗಾಗಿ ಕೊಂಕಣಿ ಭಾಷೆಯ ಶ್ರೀಮಂತಿಕೆ ದಿನದಿನವೂ ಕ್ಷೀಣಿಸುತ್ತಿದೆ. ಇದಕ್ಕೆ ಆಸ್ಪದ ಕೊಡದೆ ಕೊಂಕಣಿಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಲು ನಾವೆಲ್ಲರೂ ಬದ್ಧರಾಗಬೇಕು” ಎಂದು ಹೇಳಿದರು.

    ಕಾರ್ಯಕ್ರಮದ ಸಂಘಟಕರಾದ ಡಾ. ವಸಂತ್ ಬಾಂದೇಕರ್ರವರು ಸರ್ವರನ್ನು ಸ್ವಾಗತಿಸಿದರು. ಅಕಾಡೆಮಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಸದಸ್ಯರಾದ ಶ್ರೀ ಸುನಿಲ್ ಸಿದ್ಧಿ ಇವರು ಅಕಾಡೆಮಿಯ ಈವರೆಗಿನ ಕೆಲಸ ಕಾರ್ಯಗಳ ಪಕ್ಷಿನೋಟವನ್ನು ಸಭೆಯ ಮುಂದೆ ಮಂಡಿಸಿದರು. ಮುಖ್ಯ ಅತಿಥಿಗಳಾದ ಫಾ. ಥಾಮಸ್ ಫೆರ್ನಾಂಡಿಸ್ರವರು ಮಾತನಾಡಿ “ನಾವು ಕೊಂಕಣಿಗರು, ನಮ್ಮ ಮಾತೃಭಾಷೆ ಕೊಂಕಣಿ ಎಂದು ನಮಗೆಲ್ಲರಿಗೂ ಹೆಮ್ಮೆಯಿರಬೇಕು. ಕೊಂಕಣಿಗರು ಉಪ್ಪು ಇದ್ದ ಹಾಗೆ. ನಮ್ಮ ಜನಸಂಖ್ಯೆ ಕಡಿಮೆಯಿರಬಹುದು. ಆದರೆ ನಾವು ನಮ್ಮ ದೇಶಕ್ಕೆ, ಸಮಾಜಕ್ಕೆ ರುಚಿ ಕೊಡಲು ಅಗತ್ಯವಾಗಿದ್ದೇವೆ.” ಎಂದು ಹೇಳಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

    ವೇದಿಕೆಯಲ್ಲಿ ಖ್ಯಾತ ಸಂಗೀತ ಗುರುಗಳಾದ ಪಂಡಿತ್ ಚಂದ್ರಕಾಂತ ವಿಶ್ವನಾಥ ಗಡ್ಕರ್ ಹಾಗೂ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜೋರ್ಜ್ ಎಸ್. ಫೆರ್ನಾಂಡಿಸ್ರವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ‘ಕೊಂಕಣಿ ನಿನ್ನೆ, ಇಂದು ಮತ್ತು ನಾಳೆ’ ಎಂಬ ವಿಷಯದ ಮೇಲೆ ಡಾ. ಅರವಿಂದ ಶಾನಭಾಗ ಮತ್ತು ಶ್ರೀ ಸ್ಟೀವನ್ ಕ್ವಾಡ್ರಸ್ ಇವರಿಂದ ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದ ಕೊನೆಗೆ ಸಿದ್ಧಿ ದಮಾಮಿ ನೃತ್ಯ, ಕೊಂಕಣಿ ಖಾರ್ವಿ ನೃತ್ಯ, ಕೊಂಕಣಿ ಬಾವಲ್ಯಾ ಖೇಳ (ಗೊಂಬೆಯಾಟ) ಹಾಗೂ ಕೊಂಕಣಿ ಮಿಮಿಕ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ವಸಂತ್ ಬಾಂದೇಕರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.

    baikady Cultural dance folk Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 149’ | ಅಕ್ಟೋಬರ್ 24
    Next Article ಮಂಗಳೂರಿನ ಪುರಭವನದಲ್ಲಿ ‘ಜಲ ತರಂಗ’ ಜುಗಲಬಂಧಿ ಮತ್ತು ನೃತ್ಯ ಪ್ರದರ್ಶನ | ಅಕ್ಟೋಬರ್ 25
    roovari

    Add Comment Cancel Reply


    Related Posts

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮಗಳು’ | ಅಕ್ಟೋಬರ್ 25

    October 24, 2026

    ಬಂಗಾರಪ್ಪ ಪ್ರತಿಷ್ಠಾನದ ‘ಬಂಗಾರ ಪ್ರಶಸ್ತಿ’ ಪ್ರಕಟ

    October 24, 2026

    ‘ಡುಂಡಿರಾಜರ ದಂಡಯಾತ್ರೆ’ ಕೃತಿ ಪರಿಚಯ, ಸಂವಾದ ಕಾರ್ಯಕ್ರಮ | ಅಕ್ಟೋಬರ್ 25

    October 24, 2026

    ಎಸ್‌.ಡಿ.ಎಂ. ಕಾಲೇಜಿನಲ್ಲಿ 35ನೇ ವರ್ಷದ ‘ಯಕ್ಷೋತ್ಸವ’ ಉದ್ಘಾಟನೆ

    October 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.