Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17

    October 16, 2026

    ಯಕ್ಷ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ನಿಧನ

    October 16, 2026

    ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’

    October 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಆಲೂರು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಿ. ಸುಜಲಾದೇವಿ ಆಯ್ಕೆ
    Literature

    ಆಲೂರು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಡಿ. ಸುಜಲಾದೇವಿ ಆಯ್ಕೆ

    October 16, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಆಲೂರು : ಆಲೂರು ತಾಲೂಕು ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸೃಜನಶೀಲ ಸಾಹಿತಿ, ಶಿಕ್ಷಕಿ, ಪತ್ರಕರ್ತೆ, ಆಕಾಶವಾಣಿ ಉದ್ಘೋಷಕಿಯಾದ ಡಿ. ಸುಜಲಾದೇವಿ ಕುಂದೂರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷರಾದ ಎಸ್.ವಿ. ಕೃಷ್ಣೇಗೌಡ ಮಣಿಪುರ ತಿಳಿಸಿದ್ದಾರೆ.

    ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರಾದ ವಾಸು ಸಮುದ್ರವಳ್ಳಿ ಇವರ ಸಲಹೆ ಮೇರೆಗೆ ತಾಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಈ. ಜಯರಾಜ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಉಪಾಧ್ಯಕ್ಷ ಟಿ.ಕೆ. ನಾಗರಾಜ್, ಕಾರ್ಯದರ್ಶಿ ಧರ್ಮ ಕೆರಲೂರು, ಸಂಘಟನಾ ಕಾರ್ಯದರ್ಶಿ ಡಿ.ಸಿ. ಬಸವರಾಜ್, ಮಹಿಳಾ ಕಾರ್ಯದರ್ಶಿ ಚಂದ್ರಕಲಾ ಎಂ. ಮುಂತಾದವರನ್ನೊಳಗೊಂಡ ಸಮಿತಿ ಡಿ. ಸುಜಲಾದೇವಿಯವರ ಸಾಹಿತ್ಯಿಕ ಹಾಗೂ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಆಲೂರು ತಾಲೂಕು ನಾಲ್ಕನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

    ಸಮ್ಮೇಳನಾಧ್ಯಕ್ಷರ ಪರಿಚಯ : ಡಿ. ಸುಜಲಾದೇವಿಯವರು 1975 ಸೆಪ್ಟಂಬರ್ 19ರಂದು ಹಾಸನ ಜಿಲ್ಲೆ ಆಲೂರು ತಾಲೂಕು ಕುಂದೂರಿನಲ್ಲಿ ಜನಿಸಿದರು. ತಂದೆ ಧರಣೇಂದ್ರರಾಜ್, ತಾಯಿ ಆರ್. ಜಯಪದ್ಮ. ಇವರು ಎಂ.ಎ. ಕನ್ನಡ ಪದವಿ, ಪತ್ರಿಕೋದ್ಯಮ ಸ್ನಾತಕೋತ್ತರ, ಸ್ನಾತಕೋತ್ತರ ಜರ್ನಲಿಸಂ ಅಂಡ್ ಮಾಸ್ ಕಮ್ಯುನುಕೇಶನ್, ಹಿಂದಿ ಬಿ.ಎಡಿ, ಡಿಪ್ಲೋಮೋ ಇನ್ ಜರ್ನಲಿಸಂ ಪದವಿ ಪಡೆದಿದ್ದಾರೆ. ಇವರು 2010ರಿಂದ 2026ರವರೆಗೆ ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾದ್ಯಾಯರಾಗಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ನೃತ್ಯ, ಸಾಹಿತ್ಯ, ಸಂಗೀತ, ನಾಟಕ ಎಲ್ಲಾ ರಂಗಗಳಲ್ಲೂ ಆಸಕ್ತಿ ಹೊಂದಿದ್ದು, ಶಿಕ್ಷಕಿಯಾಗಿ ಆಲೂರು ತಾಲೂಕಿನ ವಿವಿಧ ಶಾಲೆಗಳಲ್ಲಿ ಆರು ವರ್ಷಗಳಿಗೂ ಅಧಿಕ ಸೇವೆ. ನಂತರ ಹಾಸನದಲ್ಲಿ ಮೂರು ವರ್ಷಗಳ ಸೇವೆ. ನಂತರ ಕಳೆದ ಹದಿನೇಳು ವರ್ಷಗಳಿಂದ ಹಾಸನ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಸನದ ಜನತಾ ಮಾಧ್ಯಮ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಹವ್ಯಾಸಿ ಪತ್ರಕರ್ತೆಯಾಗಿ ಇಂದಿಗೂ ಕರ್ತವ್ಯ ನಿರ್ವಹಣೆ. ಆಲೂರು ತಾಲೂಕು ಹರಿಹಳ್ಳಿಯಲ್ಲಿ ಮಂಗಳ ಕಲಾಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆಯಾಗಿ ಕಾರ್ಯದರ್ಶಿಯಾಗಿ ಅತ್ಯಂತ ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದರ ಜೊತೆಗೆ ‘ಶ್ರೀಮಾತಾ’ ಹಾಗೂ ‘ಸಾಹಿತ್ಯಶ್ರೀ’ ಎಂಬ ಎರಡು ಕೃತಿಗಳ ಸಂಪಾದಕಿಯಾಗಿ ಹಾಗೂ ಮೈಸೂರಿನ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಕೊಡಗಿನಲ್ಲಿ ರಚಿತವಾದ ‘ಜೇನುನುಡಿ ಕಲಿಯಾಕು’ ಎಂಬ ಸಾಕ್ಷರತಾ ಪಠ್ಯಪುಸ್ತಕದ ಲೇಖಕಿಯಾಗಿ ದುಡಿದಿದ್ದಾರೆ. ಹಾಸನ ಜಿಲ್ಲಾ ಅಕ್ಷರ ಅಭೀಷೇಕ ಸಾಕ್ಷರತಾ ಕಾರ್ಯದಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಆಲೂರು ತಾಲೂಕಿನ ಪ್ರತಿನಿಧಿಯಾಗಿ ಸೇವೆಸಲ್ಲಿಸಿರುತ್ತಾರೆ.

    2022ರ ಮಹಿಳಾ ದಿನಾಚರಣೆಯಲ್ಲಿ ದ ನ್ಯೂಸ್ ಪೇಪರ್ ಅಸೋಶಿಯೇಶನ್ ಆಫ್ ಕರ್ನಾಟಕ ಹಾಗೂ ಪ್ರೆಸ್ ಕ್ಲಬ್ ವತಿಯಿಂದ ನ್ಯಾಷನಲ್ಸ್ ವುಮೆನ್ಸ್ ಅಚಿವರ್ ಅವಾರ್ಡ್-2022 ಪ್ರಶಸ್ತಿ, ಬೇಲೂರಿನ ಸಂವಹನ ವೇದಿಕೆಯಿಂದ ರಾಜ್ಯಮಟ್ಟದ ‘ಚುಟುಕುಕವಿ’ ಪ್ರಶಸ್ತಿ. ಹಾಗೆಯೇ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ್ದ ಸೇವೆಯಿಂದ ‘ಶಿಕ್ಷಕರತ್ನ’ ಪ್ರಶಸ್ತಿ ಹಾಗೂ 2022ರಲ್ಲಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗಳನ್ನು ಬೆಂಗಳೂರಿನ ಸುರ್ವೆ ಪ್ರತಿಷ್ಠಾನದ ವತಿಯಿಂದ ಪಡೆದಿರುತ್ತಾರೆ. 2022ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆ ಬಡ್ಲಿ (ಬೈಲಹೊಂಗಲ) ಗ್ರಾಮದಲ್ಲಿ ನೀಡಲಾದ ‘ಶ್ರೀ ಜ್ಞಾನೇಶ್ವರ ಆದರ್ಶ ಜೈನ ಶಿಕ್ಷಕ’ ಹಾಗೂ ಕರ್ನಾಟಕ ಜೈನ ಶಿಕ್ಷಕರ ವೇದಿಕೆಯಿಂದ ಜ್ಞಾನಶ್ರೀ ಆದರ್ಶಶಿಕ್ಷಕಿ ಪ್ರಶಸ್ತಿಯೂ ದೊರೆತಿರುತ್ತದೆ. 2025ರಲ್ಲಿ ಹಾಸನದ ಮಾಣಿಕ್ಯ ಪ್ರಕಾಶನವು ರಾಜ್ಯಮಟ್ಟದ ‘ಜನ್ನಕಾವ್ಯ’ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ. ಕರ್ನಾಟಕ ಸರ್ಕಾರದ ಹಾಸನ ಜಿಲ್ಲಾಡಳಿತವು 70ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಹಿತ್ಯ ಸೇವೆಯನ್ನು ಗುರುತಿಸಿ ಗೌರವಿಸಿ ಪುರಸ್ಕರಿಸಿರುತ್ತದೆ. ಕೊಡಗು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು 2026ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಲವಾರು ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿಯಾಗಿ, ಕೊಡಗಿನ ಪತ್ರಿಕೆಗಳೂ ಸೇರಿದಂತೆ ರಾಜ್ಯಮಟ್ಟದ ಹಲವಾರು ದೈನಿಕ, ಸಾಪ್ತಾಹಿಕ, ಮಾಸಿಕ ಪತ್ರಿಕೆಗಳಲ್ಲಿ ಲೇಖನ, ಕವನ, ಕತೆಗಳು ಪ್ರಕಟಗೊಂಡಿವೆ. ನೂರಾರು ಕರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ಉಪನ್ಯಾಸಕಿಯಾಗಿ ಭಾಗವಹಿಸುವಿಕೆ. ಪ್ರೌಢಶಾಲೆಯಿಂದಲೇ ಬರವಣಿಗೆ ಪ್ರಾರಂಭಿಸಿ,‘ಭಾವನಾಂತರಂಗ’ ಎಂಬ ಕವನ ಸಂಕಲನವನ್ನು ಹಾಗೂ ‘ಯೆಸ್ ಸರ್ ನೋ ಸರ್’ ಎಂಬ ಮಕ್ಕಳ ಕಥಾಸಂಕಲನವನ್ನು ಹಿಂದೀಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಒಂದು ಮಕ್ಕಳ ಹಿಂದಿಯಿಂದ ಅನುವಾದಗೊಂಡಿರುವ ಕಥಾಸಂಕಲನ, ಒಂದು ಲೇಖನಗಳ ಸಂಗ್ರಹ ಹಾಗೂ ಒಂದು ಕಥಾಸಂಕಲನವೂ ಸೇರಿದಂತೆ ಒಟ್ಟು ಮೂರು ಹಸ್ತ ಪ್ರತಿಗಳು ಪ್ರಕಟಣೆಯ ಹಂತದಲ್ಲಿವೆ.

    ಹಾಸನ ಹಾಗೂ ಮಡಿಕೇರಿ ಆಕಾಶವಾಣಿಯಲ್ಲಿ ಯುವವಾಣಿಯೂ ಸೇರಿದಂತೆ ಮಹಿಳಾವಾಣಿ ಹಾಗೂ ಭಾಷಣ ವಿಭಾಗದಲ್ಲೂ ಇವರ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಪದವಿ ತರಗತಿಗೆ ಇವರು ಬರೆದ ‘ನಮ್ಮ ಮಹಿಳೆ ನಮ್ಮ ಹೆಮ್ಮೆ’ ವಿಭಾಗದಲ್ಲಿ ಇವರು ಬರೆದ ಲೇಖನ ಪಠ್ಯವಾಗಿದೆ. ರಾಜ್ಯಮಟ್ಟದ ಹಲವಾರು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿರುತ್ತಾರೆ. ರಾಜ್ಯ ಹಾಗೂ ಜಿಲ್ಲಾ ಹಂತದಲ್ಲಿ ಹಲವಾರು ಉಪನ್ಯಾಸಗಳನ್ನು ನೀಡುವುದರ ಜೊತೆಗೆ ಕವಿಗೋಷ್ಠಿಗಳಲ್ಲಿಯೂ ಭಾಗವಹಿಸಿರುತ್ತಾರೆ. ಹಾಸನ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ನಿರೂಪಕಿಯಾಗಿ, ಹೊಯ್ಸಳ ಮಹೋತ್ಸವವೂ ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಹಿಂದೀ ಹಾಗೂ ಕನ್ನಡ ಭಾಷೆಗಳಲ್ಲಿ ನಿರೂಪಕಿಯಾಗಿ ಕಾರ್ಯಕ್ರಮ ನಿರ್ವಾಹಕರಾಗಿ (ಕಂಪೈರಿಂಗ್) ಕರ್ತವ್ಯ ನಿರ್ವಹಣೆ. ಪ್ರಸ್ತುತ ಕಳೆದ ಹದಿನಾಲ್ಕು ವರ್ಷಗಳಿಂದ ಕೊಡಗಿನ ಶನಿವಾರಸಂತೆಯಲ್ಲಿ ನೆಲೆಸಿದ್ದು ‘ಸುಪ್ರಜಗುರುಕುಲ’ ಎಂಬ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆಯಾಗಿ, ಪ್ರಾಂಶುಪಾಲೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಕರ್ನಾಟಕ ಜನಪದ ಪರಿಷತ್ತಿನ ಶನಿವಾರಸಂತೆ ಹೋಬಳಿಯ ಅಧ್ಯಕ್ಷೆಯಾಗಿ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ಬಾಲ್ಯದಿಂದಲೂ) ಹವ್ಯಾಸ :-ದೇಶ–ವಿದೇಶಗಳ ನಾಣ್ಯ-ಕರೆನ್ಸಿಗಳ ಹಾಗೂ ಅಂಚೆ ಚೀಟಿಗಳ ಸಂಗ್ರಹ, ಗಾದೆಗಳ ಸಂಗ್ರಹ ಮತ್ತು ಓದುವಿಕೆ, ಪುಸ್ತಕಗಳ ಸಂಗ್ರಹ, ಪ್ರವಾಸ, ಹಾಡುವುದು ಹಾಗೂ ನೃತ್ಯ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ತಾಳಮದ್ದಲೆ ‘ಶರಸೇತು ಬಂಧ’
    Next Article ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 31
    roovari

    Add Comment Cancel Reply


    Related Posts

    ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17

    October 16, 2026

    ಯಕ್ಷ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ನಿಧನ

    October 16, 2026

    ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’

    October 16, 2026

    ‘ಕೇಶವ ಪ್ರಶಸ್ತಿ’ಗೆ ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆ

    October 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.