ಮಂಗಳಾದೇವಿ : ಸಂಗೀತ ಪರಿಷತ್ ಮಂಗಳೂರು, ಭಾರತೀಯ ವಿದ್ಯಾಭವನ ಮತ್ತು ಮಂಗಳೂರಿನ ರಾಮಕೃಷ್ಣ ಮಠದ ಸಂಯುಕ್ತ ಆಶ್ರಯದಲ್ಲಿ ನಗರದ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳ ‘ಮಂಗಳೂರು ಸಂಗೀತೋತ್ಸವ-2023’ವು ದಿನಾಂಕ 22-11-2023ರಂದು ಉದ್ಘಾಟನೆಗೊಂಡಿತು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಶರವು ರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ, ಡಾ. ಸಿ.ಆರ್ ಬಲ್ಲಾಳ್, ಎಂ.ವಿ. ಪ್ರದೀಪ್ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ದ್ವಂದ್ವ ವೀಣಾವಾದನವನ್ನು ಗೀತಾ ರಮಾನಂದ್ ಮತ್ತು ವಿ.ಗೋಪಾಲ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಾಂತಾ ನರಸಿಂಹನ್ ಮತ್ತು ಶ್ರೀ ಸುನಾದಕೃಷ್ಣ ಅಮೈ ಇವರುಗಳಿಗೆ ಗೌರವಾರ್ಪಣೆ ಮಾಡಲಾಯಿತು.
ದಿನಾಂಕ 23-11-2023ರಂದು ಶ್ರೀಮತಿ ರಮ್ಯಾ ಕಿರಣ್ಮಯಿ ಚಗಂಟಿಯವರಿಂದ ಹಾಡುಗಾರಿಕೆ, ದಿನಾಂಕ 24-11-2023ರಂದು ಬೆಂಗಳೂರಿನ ಶ್ರೀ ಹೇಮಂತ್ ಮತ್ತು ಶ್ರೀ ಹೇರಂಬ ಇವರಿಂದ ಕೊಳಲುವಾದನ, ದಿನಾಂಕ 25-11-2023ರಂದು ಚೆನ್ನೈಯ ಶ್ರೀ ಅನಿರುದ್ಧ್ ಸುಬ್ರಮಣಿಯನ್ ಹಾಗೂ ಪುತ್ತೂರಿನ ಶ್ರೀಮತಿ ಸುಚಿತ್ರಾ ಹೊಳ್ಳ ಇವರಿಂದ ಹಾಡುಗಾರಿಕೆ, ದಿನಾಂಕ 26-11-2023ರಂದು ಚೆನ್ನೈಯ ಶ್ರೀ ಪಾಲ್ಘಾಟ್ ಆರ್. ರಾಮ್ ಪ್ರಸಾದ್ ಮತ್ತು ಕಿನ್ನಿಗೋಳಿಯ ಕು. ಆಶ್ವೀಜಾ ಉಡುಪ ಇವರಿಂದ ಹಾಡುಗಾರಿಕೆ ಹಾಗೂ ಚೆನ್ನೈಯ ಪದ್ಮಶ್ರೀ ಎ. ಕನ್ಯಾಕುಮಾರಿ ಇವರಿಂದ ಪಿಟೀಲು ವಾದನ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಸಂಗೀತ ರತ್ನ ಶ್ರೀಮತಿ ಶಕುಂತಲಾ ಕೆ. ಭಟ್ ಕಂಚಿನಡ್ಕ ಇವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಅನಂತಕೃಷ್ಣ ಉಡುಪ, ವಸಂತ ಹೇರಳೆ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ, ಯೋಗೀಶ್ ನಾಯಕ್, ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಎಂ.ವಿ. ಪ್ರದೀಪ್, ಸಂಗೀತ ಪರಿಷತ್ತಿನ ಗೌರವಧ್ಯಕ್ಷರಾದ ಡಾ. ಸಿ.ಆರ್. ಬಲ್ಲಾಳ್ ಉಪಸ್ಥಿತರಿದ್ದರು.