ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 15, 16, 22 ಮತ್ತು 23 ಆಗಸ್ಟ್ 2026ರಂದು (ಶನಿವಾರ ಮತ್ತು ಭಾನುವಾರ) ಸಂಜೆ 8-00 ಗಂಟೆಯಿಂದ 9-15ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ಶೆರ್ತಲ್ಲೆ ಡಾ. ಕೆ.ಎನ್. ರೆಂಗನಾಥ ಶರ್ಮ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ತ್ಯಾಗರಾಜ ಸ್ವಾಮಿ ಮತ್ತು ಮುತ್ತುಸ್ವಾಮಿ ದೀಕ್ಷಿತರ ಪದಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

