ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಶಿವಮೊಗ್ಗ ಇವರ ಜಂಟಿ ಆಶ್ರಯದಲ್ಲಿ ಮೈಸೂರು ರಂಗಾಯಣ ಪ್ರಸ್ತುತ ಪಡಿಸುವ ‘ಮೈ ಫ್ಯಾಮಿಲಿ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 13 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸತೀಶ್ ತಿಪಟೂರು ರಚಿಸಿರುವ ಈ ಕನ್ನಡ ನಾಟಕಕ್ಕೆ ಗಣೇಶ್ ಮಂದಾರ್ತಿ ಇವರು ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ನೀಡಿರುತ್ತಾರೆ.