ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ನಾಮ ಸಂಕೀರ್ತನೆ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿಯು ಸುರತ್ಕಲ್ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ದಿನಾಂಕ 18, 19, 25 ಮತ್ತು 26 ಜುಲೈ 2026ರಂದು ಪ್ರತಿದಿನ ಸಂಜೆ ಗಂಟೆ 5-30ರಿಂದ 7-00ರವರೆಗೆ ನಡೆಯಲಿದೆ.
ಶ್ರೀ ಪಿ. ನಿತ್ಯಾನಂದ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಎಲ್ಲಾ ವಯಸ್ಸಿನವರಿಗೆ ಭಾಗವಹಿಸಲು ಅವಕಾಶವಿದೆ. 25 ವರ್ಷಕ್ಕೆ ಕೆಳಗಿನವರಿಗೆ ದಿನಾಂಕ 02 ಆಗಸ್ಟ್ 2026ರಂದು ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ದಿನಾಂಕ 15 ಆಗಸ್ಟ್ 2026ರಂದು ಬೆಳಗ್ಗೆ 9-30 ಗಂಟೆಗೆ ನಾಮ ಸಂಕೀರ್ತನ ಸಂಗೀತ ಕಾರ್ಯಕ್ರಮ ಹಾಗೂ ಕುಮಾರಿ ಶರಣ್ಯ ಕೆ.ಎನ್. ಮತ್ತು ಕುಮಾರಿ ಸುಮೇಧ ಕೆ.ಎನ್. ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತಗೊಳ್ಳಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಘಟಕ ಪಿ. ನಿತ್ಯಾನಂದ ರಾವ್ (97427 92669) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

