ಬೆಂಗಳೂರು : ವೇದಿಕೆ ಫೌಂಡೇಷನ್ ಅಭಿನಯಿಸುವ ಟಿ.ಪಿ. ಕೈಲಾಸಂರವರ ‘ನಂಕಂಪನಿ’ ನಾಟಕ ಪ್ರದರ್ಶನವನ್ನು ದಿನಾಂಕ 21 ಮಾರ್ಚ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿ ಎನ್.ಆರ್. ಕಾಲೋನಿಯಲ್ಲಿರುವ ಸಿ. ಅಶ್ವಥ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಂಪನಿ ಶೈಲಿಯ ಸಂಗೀತಮಯ ಹಾಸ್ಯ ನಾಟಕಕ್ಕೆ ವಿ. ಮನೋಹರ ಸಂಗೀತ ಹಾಗೂ ಋತ್ವಿಕ್ ಸಿಂಹ ನಿರ್ದೇಶನ ಮಾಡಿದ್ದಾರೆ.

