ಬ್ರಹ್ಮಾವರ : ಚೌಕಿಮನೆಯ ಭೀಷ್ಮ ದಿ. ಬಾಲಕೃಷ್ಣ ನಾಯಕ್ ಹಂದಾಡಿ (ಬಲ್ಲಣ್ಣ) ಇವರ ಪ್ರಥಮ ಸಂಸ್ಮರಣೆ, ಪುತ್ಥಳಿ ಅನಾವರಣ, ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ‘ನೆನಪು’ ಚೌಕಿಮನೆಯ ಬೆಳಕಿನಲಿ ದಿನಾಂಕ 09 ಆಗಸ್ಟ್ 2025ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಸಂಜೆ 3-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ರಾಜೇಶ್ ಶ್ಯಾನುಭೋಗ್ ಇವರಿಂದ ಭಾವ ನಮನ, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ಶೆಟ್ಟಿ ಬಿರ್ತಿ ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ ಆಚಾರ್ಯ ಇವರನ್ನು ಸನ್ಮಾನಿಸಲಾಗುವುದು. ನಾಗಾನಂದ ವಾಸುದೇವ ಆಚಾರ್ಯ ಇವರು ಪುತ್ಥಳಿ ಅನಾವರಣಗೊಳಿಸಲಿದ್ದು, ಮುರಳಿ ಕಡೇಕಾರ್, ಪ್ರಸಾದ್ ಕುಮಾರ್ ಮೊಗೆಬೆಟ್ಟು, ನಾಗರಾಜ ಉಪಾಧ್ಯಾಯ, ನಾಗಭೂಷಣ್ ನಾಯಕ್ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದವರಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.