ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ಇವರ ವತಿಯಿಂದ ನಡೆಯುವ ‘ಮಂಗಳೂರು ದಸರಾ 2026’ ಇದರ ಪ್ರಯುಕ್ತ ‘ಕವನ ಸ್ಪರ್ಧೆ 2026’ಯನ್ನು ಆಯೋಜಿಸಲಾಗಿದೆ.
ನಿಯಮಗಳು :
* ಸ್ಪರ್ಧೆಗೆ ಕಳುಹಿಸುವ ಕವನಗಳು ಸ್ವತಂತ್ರ ರಚನೆಯಾಗಿರಬೇಕು, ಎಲ್ಲಿಯೂ ಪ್ರಕಟಗೊಂಡಿರಬಾರದು.
* ತುಳು ಮತ್ತು ಕನ್ನಡ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಎರಡೂ ವಿಭಾಗದಲ್ಲೂ ಭಾಗವಹಿಸಲು ಅವಕಾಶವಿದೆ. ಆದರೆ ಒಂದು ವಿಭಾಗದಲ್ಲಿ ಒಂದು ಕವನವನ್ನು ಮಾತ್ರ ಕಳುಹಿಸಿಕೊಡಬೇಕು. ಪ್ರವೇಶಗಳ ಲಕೋಟೆಯ ಮೇಲೆ ಸ್ಪರ್ಧೆಯ ವಿಭಾಗವನ್ನು ಸ್ಪಷ್ಟವಾಗಿ ನಮೂದಿಸಬೇಕು.
* ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗಿರಕೂಡದು.
* ಕವನಗಳನ್ನು ಅಂದವಾದ ಕೈಬರಹ ಅಥವಾ ಟೈಪ್ ಮಾಡಿ ಕಳುಹಿಸಬಹುದು.
* ಕವನಗಳನ್ನು ಅಂಚೆ ಮೂಲಕ ಮಾತ್ರ ಕಳುಹಿಸಬೇಕು. ಕವನಗಳನ್ನು ಕಳುಹಿಸುವವರು ಕವನದ ಮೂರು ಪ್ರತಿಗಳನ್ನು ಜೊತೆಯಲ್ಲಿ ಲಗತ್ತಿಸಿರತಕ್ಕದ್ದು.
* ಕವನ ಇರುವ ಪುಟದಲ್ಲಿ ಹೆಸರು, ವಿಳಾಸ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಪೂರ್ಣ ವಿಳಾಸ, ಫೋನ್ ಸಂಖ್ಯೆ ಒದಗಿಸಬೇಕು.
* ಪ್ರಥಮ ಬಹುಮಾನ ರೂ.5,000/- ನಗದು ಹಾಗೂ ದ್ವಿತೀಯ ರೂ.3,000/- ನಗದು ಹಾಗೂ ಪ್ರಮಾಣ ಪತ್ರ.
* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರವೇಶಗಳು ತಲುಪಲು ಕೊನೆಯ ದಿನಾಂಕ 25 ಸೆಪ್ಟೆಂಬರ್ 2026.
* ಪ್ರವೇಶಗಳನ್ನು ಕಳುಹಿಸಿದ ನಂತರ ಸಂಪರ್ಕ ಸಂಖ್ಯೆಗೆ ಮಾಹಿತಿ ನೀಡುವುದು.
* ವಿಜೇತರಿಗೆ 12/10/2026ರ ದಸರಾ ಕವಿಗೋಷ್ಠಿಯಂದು ಬಹುಮಾನ ನೀಡಲಾಗುವುದು.
ಪ್ರವೇಶಗಳನ್ನು ಕಳುಹಿಸಬೇಕಾಗಿರುವ ವಿಳಾಸ : ಮಂಗಳೂರು ದಸರಾ ಕವನ ಸ್ಪರ್ಧೆ ‘ಸಾಹಿತ್ಯ ವಿಭಾಗ”, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು-575003 ಸಂಪರ್ಕ ಸಂಖ್ಯೆ : 89716 89755.

