ತೆಕ್ಕಟ್ಟೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಧನ ಸಹಾಯ ಯೋಜನೆಯಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರು ದಿನಾಂಕ 27 ಜುಲೈ 2026ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಪ್ರಸಂಗ ಪದ್ಯ ಕಥಾ ಸಾರ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮಾತನಾಡಿ “ಕಲಿಕೆಯ ಹಂತದಲ್ಲಿರುವ ಕಲಾವಿದರಿಗೆ ಆಗಾಗ ವೇದಿಕೆಯು ಸಿಕ್ಕಾಗ ಮಾತ್ರ ಕಲಿಕೆಯ ಹಾದಿ ಸುಗಮವಾಗುತ್ತದೆ. ರಂಗವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದಲೇ ಇನ್ನಷ್ಟು ಕಲಿಯುವ ತವಕ ವೃದ್ಧಿಸುತ್ತದೆ. ಗುರುಮುಖೇನ ಕಲಿತ ವಿದ್ಯೆ ನಿರರ್ತಕವಾಗಬಾರದು. ತಪ್ಪು ಒಪ್ಪುಗಳನ್ನು ಬದಿಗಿರಿಸಿ ನಮ್ಮೊಳಗಿನ ಚಿಕ್ಕ ವೇದಿಕೆಯಲ್ಲಿ ಪ್ರತಿಭೆ ತೋರಿಸಿ ಬೆಳೆದರೆ ಮತ್ತಷ್ಟು ಆತ್ಮಸ್ಥೈರ್ಯ ಬರುವುದಕ್ಕೆ ಸಾಧ್ಯ” ಎಂದು ಹೇಳಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಆ್ಯಂಡ್ರ್ಯು ಡಿಸಿಲ್ವ, ಸುಧಾ ಮಣೂರು, ಡಾ. ಗಣೇಶ್ ಉಳ್ತೂರು, ಡಾ. ರಾಜೇಶ್, ಆದಿತ್ಯ ಹೆಗಡೆ, ಗಣಪತಿ ಭಟ್, ಭಾಗ್ಯಲಕ್ಷ್ಮೀ ವೈದ್ಯ, ಪಾರ್ವತಿ ಮೈಯ್ಯ, ಆದಿತ್ಯ ಕೋಣಿ ಉಪಸ್ಥಿತರಿದ್ದರು. ಬಳಿಕ ‘ಪ್ರಸಂಗ ಪದ್ಯ ಕಥಾ ಸಾರ’ ಕೃಷ್ಣ ಸಂಧಾನದ ಕಥಾನಕ ರಂಗ ಪ್ರಸ್ತುತಿಗೊಂಡಿತು.

