ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಶಾಲಾ ಮಟ್ಟದಲ್ಲಿ ನಡೆಸಿದ ಪ್ರಬಂಧ-ಚಿತ್ರಕಲೆ -ಭಾಷಣ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 14-02-2024ರ ಬುಧವಾರ ಬೆಳಿಗ್ಗೆ 9.30 ರಿಂದ ಪುತ್ತೂರಿನ ಪೆರ್ಲಡ್ಕದಲ್ಲಿರುವ ಬಾಲವನದಲ್ಲಿ ನಡೆಯಲಿದೆ.
ಪುತ್ತೂರು ತಾಲೂಕಿನ ಸುಮಾರು 77 ಶಾಲೆಗಳಿಂದ 670 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವವು ಮಾನ್ಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆಯಲಿದೆ. ಮಾನ್ಯ ಸಹಾಯಕ ಆಯುಕ್ತರು, ಮಾನ್ಯ ತಹಸಿಲ್ದಾರ್, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ‘ಸಾಹಿತ್ಯದ ನಡಿಗೆ ಕಾರಂತಜ್ಜನ ಮನೆಗೆ’ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕ.ಸಾ.ಪ. ಪುತ್ತೂರು ವೆಬ್ಸೈಟ್ ಮೊಬೈಲ್ ಆವೃತಿಯ ಲೋಕಾರ್ಪಣೆ ಹಾಗೂ ಶ್ರೀ ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯ ಪ್ರಹಸನ ಕಾರ್ಯಕ್ರಮ ನಡೆಯಲಿದೆ.