Subscribe to Updates

    Get the latest creative news from FooBar about art, design and business.

    What's Hot

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿಶೇಷ ಚಿಂತನ ಮಂಥನ ಕಾರ್ಯಕ್ರಮ

    July 13, 2026

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ

    July 13, 2026

    ಕನ್ನಡದ ವೈವಿಧ್ಯಮಯ ಸಂಗೀತ ಲೋಕವನ್ನು ತೆರೆದಿಟ್ಟ ‘ಕನ್ನಡ ಗಾನಗುಚ್ಛ’ ಕಾರ್ಯಕ್ರಮ

    July 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಧಾರವಾಡದ ಮನೋಹರ ಗ್ರಂಥ ಮಾಲಾದಲ್ಲಿ ರಂ. ಶಾ. ಲೋಕಾಪುರ ಇವರ ಜನ್ಮದಿನಾಚರಣೆ | ಜುಲೈ 13
    Literature

    ಧಾರವಾಡದ ಮನೋಹರ ಗ್ರಂಥ ಮಾಲಾದಲ್ಲಿ ರಂ. ಶಾ. ಲೋಕಾಪುರ ಇವರ ಜನ್ಮದಿನಾಚರಣೆ | ಜುಲೈ 13

    July 13, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಧಾರವಾಡ ಇವರ ವತಿಯಿಂದ ರಂ. ಶಾ. ಲೋಕಾಪುರ ಇವರ 94ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2026ರಂದು ಮುಂಜಾನೆ 11-30 ಗಂಟೆಗೆ ಧಾರವಾಡದ ಸುಭಾಸ ರಸ್ತೆ, ಲಕ್ಷ್ಮೀ ಭವನ, ಮನೋಹರ ಗ್ರಂಥ ಮಾಲಾ (ಅಟ್ಟ)ದಲ್ಲಿ ಹಮ್ಮಿಕೊಳ್ಳಲಾಗಿದೆ. ನಟ, ನಾಟಕಕಾರ ನಿರ್ದೇಶಕರಾದ ಡಾ. ಪ್ರಕಾಶ ಗರುಡ ಇವರು ‘ರಂ. ಶಾ. ಅವರ ನಾಟಕಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

    ರಂ. ಶಾ. ಲೋಕಾಪುರ : ರಂ. ಶಾ. ಎಂದು ಪ್ರಖ್ಯಾತರಾದ ರಂಗನಾಥ ಶಾಮಾಚಾರ್ಯ ಲೋಕಾಪುರ ಕನ್ನಡ ಮತ್ತು ಮರಾಠಿ ಸಾಹಿತ್ಯ ಲೋಕದಲ್ಲಿನ ಮಹತ್ವದ ಸಾಧಕರಾಗಿದ್ದಾರೆ.

    ಜೀವನ : ಸಾಹಿತ್ಯ ಲೋಕದಲ್ಲಿ ‘ರಂ. ಶಾ’ ಎಂದೇ ಪ್ರಸಿದ್ಧರಾಗಿರುವ ರಂಗನಾಥ ಶಾಮಾಚಾರ್ಯ ಲೋಕಾಪುರ ಅವರು 13 ಜುಲೈ 1932ರಂದು ಜಮಖಂಡಿ ತಾಲೂಕಿನ ಹುನ್ನೂರಿನಲ್ಲಿ ಜನಿಸಿದರು. ತಂದೆ ಶಾಮಾಚಾರ್ಯರು ಮತ್ತು ತಾಯಿ ಇಂದಿರಾಬಾಯಿಯವರು. ಲೋಕಾಪುರ ಅವರ ಪ್ರಾರಂಭಿಕ ಶಿಕ್ಷಣ ಬೆಳಗಾವಿಯಲ್ಲಿ ನೆರವೇರಿತು. ತಂದೆ ಹಳಗನ್ನಡ, ಛಂದಸ್ಸುಗಳಲ್ಲಿ ವಿದ್ವಾಂಸರಾಗಿದ್ದುದರ ದೆಸೆಯಿಂದಾಗಿ ಲೋಕಾಪುರರಿಗೆ ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಮೊಳೆಯಲು ಪ್ರೇರಣೆ ದೊರಕಿತ್ತು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಅವರಲ್ಲಿ ಕನ್ನಡ, ಸಂಸ್ಕೃತದಲ್ಲಿ ಆಸಕ್ತಿ ಹುಟ್ಟಿತು. ಅವರಿಗೆ ಪ್ರ.ಗೋ. ಕುಲಕರ್ಣಿಯವರಿಂದ ಹಳೆಗನ್ನಡ ಪಾಠವಾಯಿತು. ಬೆಳಗಾವಿಯಲ್ಲಿ ಇಂಟರ್ ಮೀಡಿಯೆಟ್ ಕಾಲೇಜು, ಕೊಲ್ಹಾಪುರದ ರಾಜಾರಾಂ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು. ಮುಂದೆ ರಂ.ಶಾ. ಅವರು ಉದ್ಯೋಗಕ್ಕಾಗಿ ಸೇರಿದ್ದು ಮುಂಬೈನ ಅಕೌಂಟೆಂಟ್ ಜನರಲ್ರವರ ಕಚೇರಿಯಲ್ಲಿ.

    ಕಾಲೇಜಿನ ದಿನಗಳಲ್ಲಿ ರಂ. ಶಾ. ಅವರಿಗೆ ಪ್ರಾಚಾರ್ಯರಾಗಿದ್ದ ವಿ. ಕೃ. ಗೋಕಾಕರ ಸಂಪರ್ಕ ಲಭಿಸಿತ್ತು. ಇಂಗ್ಲೀಷ್ ಸಾಹಿತ್ಯದ ಪರಿಚಯವೂ ಚೆನ್ನಾಗಿ ದೊರಕಿತು. ಇದಲ್ಲದೆ ಹಿಂದಿ ಭಾಷೆಯನ್ನೂ ಕಲಿತು ಹಿಂದಿ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಲ್ಲದೆ ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.

    ಸಾಹಿತ್ಯ ಲೋಕದಲ್ಲಿ
    • ಪಿ.ಜಿ. ವುಡ್ಹೌಸರ ಪುಸ್ತಕಗಳನ್ನೋದಿ ಪ್ರಭಾವಿತರಾದ ರಂ.ಶಾ. ಅವರು ಅಂದಿನ ದಿನಗಳಲ್ಲಿ ಸುಧಾ, ಮಯೂರ ಪತ್ರಿಕೆಗಳಲ್ಲಿ ಅನೇಕ ಹಾಸ್ಯ ಲೇಖನಗಳನ್ನು ಮೂಡಿಸಿದ್ದರು.
    • ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಇವರ ‘ಸಾವಿತ್ರಿ’ ಕಾದಂಬರಿಗೆ ಮೊದಲ ಬಹುಮಾನ ಸಂದಿತ್ತು. ಟಿ.ಎಸ್. ರಂಗಾ ಅವರು ಈ ಕಥೆಯನ್ನಾಧರಿಸಿ ಇದೇ ಹೆಸರಿನಿಂದ ಚಲನಚಿತ್ರವನ್ನು ಮೂಡಿಸಿದ್ದರು.
    • ರಂ. ಶಾ. ಅವರ ಎರಡನೆಯ ಕಾದಂಬರಿ ‘ತಾಯಿಸಾಹೇಬ’. ಈ ಕಥೆಯನ್ನು ಇದೇ ಹೆಸರಿನಿಂದ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿಸಿದರು. ಈ ಎರಡೂ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದವು.
    • ಮುಂದೆ ಇವರ ಮೂರನೆಯ ಕಾದಂಬರಿ ‘ನೂರು ತಲೆ ಹತ್ತು ಕಾಲು’ ಪ್ರಕಟಗೊಂಡಿತು.

    ಕನ್ನಡ ಮತ್ತು ಮರಾಠಿ ಕೊಂಡಿ : ರಂ. ಶಾ. ಅವರ ಹಲವಾರು ಸಣ್ಣಕಥೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆಯಲ್ಲದೆ ಕಥಾಸಂಕಲನಗಳಾಗಿಯೂ ಪ್ರಕಟಗೊಂಡಿವೆ. ರಂ. ಶಾ. ಅವರು ಅನಂತಮೂರ್ತಿಯವರ ‘ಸಂಸ್ಕಾರ’ ಮತ್ತು ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಗಳನ್ನು ಮರಾಠಿಗೆ ಅನುವಾದ ಮಾಡಿದ್ದಾರೆ. ವಿ. ಗ. ಕಾನಿಟ್ಕರರ ಪ್ರಸಿದ್ಧ ಮರಾಠಿ ಕಾದಂಬರಿ ‘ಹೋರಪಳ’ವನ್ನು ‘ಅಗ್ನಿದಿವ್ಯ’ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ.

    ರಂ. ಶಾ. ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ `ಜ್ಞಾನೇಶ್ವರಿ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿ ಪಡೆದಿದೆ. ಮರಾಠಿ ಸಂತ ಜ್ಞಾನೇಶ್ವರ ಅವರು 13ನೇ ಶತಮಾನದಲ್ಲಿ ರಚಿಸಿದ್ದ ಸಾಹಿತ್ಯವನ್ನು `ಕನ್ನಡ ಜ್ಞಾನೇಶ್ವರಿ’ ಎಂಬ ಕೃತಿ ರಚನೆ ಮೂಲಕ ಲೋಕಾಪುರರು ಕನ್ನಡಕ್ಕೆ ತಂದಿದ್ದಾರೆ. ಈ ಎಲ್ಲ ಸಾಧನೆಗಳ ಜೊತೆಗೆ ರಂ. ಶಾ. ಅವರು ಕನ್ನಡ-ಮರಾಠಿ ಭಾಷೆಗಳ ತೌಲನಿಕ ಅಧ್ಯಯನ ನಡೆಸಿದ ಫಲವಾಗಿ ‘ಹಳೆಗನ್ನಡ ಮತ್ತು ಮರಾಠಿ’ ಎಂಬ ಸಂಶೋಧನಾ ಗ್ರಂಥವನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮೂಲಕ 1994ರಲ್ಲಿ ಪ್ರಕಟಿಸಿದ್ದಾರೆ. ಇದೇ ಕೃತಿಯನ್ನು ಮರಾಠಿ ಭಾಷೆಯಲ್ಲಿ “ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೇವಾರ ಕನ್ನಡ ಪ್ರಭಾವ” ಎಂದು 3 ಸಂಪುಟಗಳಲ್ಲಿ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದ ಗ್ರಂಥೋತ್ತೇಜಕ ಸಂಸ್ಥೆಯಿಂದ ಈ ಕೃತಿಗೆ ಪುರಸ್ಕಾರ ಲಭಿಸಿದೆ. ಹೀಗೆ ರಂ. ಶಾ. ಅವರು ಕನ್ನಡ-ಮರಾಠಿ ಎರಡೂ ಭಾಷೆಗಳನ್ನು ಅಧ್ಯಯನ ಮಾಡಿ ಪರಸ್ಪರ ಕೊಡುಕ್ಕೊಳ್ಳುವಿಕೆಯ ತಿಳುವಳಿಕೆಯನ್ನು ನೀಡಿದ್ದಾರೆ.

    ನಾಟಕಗಳು : ಬ್ರೆಕ್ಟನ ನಾಟಕ ‘ಗುಡ್ ಪರ್ಸನ್ ಆಫ್ ಶೆಜುವಾನ್’ ಕೃತಿಯನ್ನು ‘ಸಂಕಾನ್ತೇಯ ಚಂದ್ರಿ’ ಎಂಬ ಹೆಸರಿನಿಂದ ಅನುವಾದ ಮಾಡಿದ್ದಾರೆ. ‘ನೆಳಲಿಯ ಪ್ರಸಂಗ’ ಎಂಬುದು ರಂ. ಶಾ. ಅವರ ಮತ್ತೊಂದು ನಾಟಕ.

    ಇತರ ಮಹತ್ವದ ಕೃತಿಗಳು : ರಂ. ಶಾ. ಅವರು ನಾಥ್ ಫೆಲೋಶಿಪ್ ಪಡೆದು ಸಂಪ್ರದಾಯದ ಬಗ್ಗೆ ಸಂಶೋಧನಾ ಗ್ರಂಥ ರಚನೆ ಮಾಡಿದ್ದಾರೆ. ‘ಕರ್ನಾಟಕದಲ್ಲಿ ಅವೈದಿಕ ಸಾಹಿತ್ಯ ಪರಂಪರೆಗಳು’ ರಂ. ಶಾ. ಅವರ ಮತ್ತೊಂದು ಮಹತ್ವದ ಕೃತಿ.

    ಪ್ರಶಸ್ತಿ ಗೌರವಗಳು : ಈ ಮಹಾನ್ ಸಾಧಕ ರಂ.ಶಾ. ಲೋಕಾಪುರ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ ಅಲ್ಲದೆ, ಜೋಳದ ರಾಶಿ ದೊಡ್ಡನಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Article‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ
    Next Article ಖ್ಯಾತ ರಂಗಕರ್ಮಿ, ನಾಟಕ ರಚನಾಕಾರ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು ನಿಧನ
    roovari

    Add Comment Cancel Reply


    Related Posts

    ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿಶೇಷ ಚಿಂತನ ಮಂಥನ ಕಾರ್ಯಕ್ರಮ

    July 13, 2026

    ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ‘ಅರ್ಥಾಂಕುರ-24’ ಸರಣಿ ತಾಳಮದ್ದಳೆ

    July 13, 2026

    ಕನ್ನಡದ ವೈವಿಧ್ಯಮಯ ಸಂಗೀತ ಲೋಕವನ್ನು ತೆರೆದಿಟ್ಟ ‘ಕನ್ನಡ ಗಾನಗುಚ್ಛ’ ಕಾರ್ಯಕ್ರಮ

    July 13, 2026

    ಪರಿಚಯ ಪ್ರತಿಷ್ಠಾನದ ನೂತನ ರಂಗ ಮಂದಿರದ ಶಿಲಾನ್ಯಾಸ ಸಮಾರಂಭ

    July 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.