Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಸೂರ್ಯನ ಕುದುರೆ’ | ಮಾರ್ಚ್ 22

    March 26, 2026

    ಸಾಹಿತಿ ರೇಮಂಡ್ ಡಿಕುನಾ ತಾಕೊಡೆ ಇವರ ‘ಬೊಳ್ಳಿಲು’ ಕೃತಿ ಬಿಡುಗಡೆ

    March 26, 2026

    ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 30

    March 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಆಳ್ವಾಸ್ ಕಾಲೇಜಿನಲ್ಲಿ ‘ಯಕ್ಷಗಾನ ಗೊಂಬೆ ಆಟದ ಕುರಿತ ಸಂಶೋಧನಾ ಅಧ್ಯಯನ ವರದಿ’ ಪುಸ್ತಕ ಅನಾವರಣ
    Book Release

    ಆಳ್ವಾಸ್ ಕಾಲೇಜಿನಲ್ಲಿ ‘ಯಕ್ಷಗಾನ ಗೊಂಬೆ ಆಟದ ಕುರಿತ ಸಂಶೋಧನಾ ಅಧ್ಯಯನ ವರದಿ’ ಪುಸ್ತಕ ಅನಾವರಣ

    March 26, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ಆಯುಕ್ತರ ಕಚೇರಿಯಿಂದ ರೂಪುಗೊಂಡ ‘ಯಕ್ಷಗಾನ ಗೊಂಬೆ ಆಟದ ಕುರಿತ ಸಂಶೋಧನಾ ಅಧ್ಯಯನ ವರದಿ’ ಪುಸ್ತಕ ಅನಾವರಣವು ದಿನಾಂಕ 25 ಮಾರ್ಚ್ 2026ರಂದು ಆಳ್ವಾಸ್ ಕಾಲೇಜಿನಲ್ಲಿ ನೆರವೇರಿತು.

    ಪುಸ್ತಕ ಬಿಡುಗಡೆಗೊಳಿಸಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಇವರು ಮಾತನಾಡಿ “ಯಕ್ಷಗಾನ ಗೊಂಬೆ ಆಟವು ಕರಾವಳಿ ಭಾಗದ ಆಕರ್ಷಕ ಕಲೆಯಾಗಿದ್ದು, ಪಪೆಟ್ (ಗೊಂಬೆ)ಗಳ ಮೂಲಕ ಯಕ್ಷಗಾನದ ಕಥಾವಸ್ತುಗಳನ್ನು ಪ್ರದರ್ಶಿಸುವ ಕಲಾರೂಪಕವಾಗಿದೆ. ಈ ಕಲೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಮಹತ್ವದ ಮಾಧ್ಯಮ. ಯಕ್ಷಗಾನ ಗೊಂಬೆ ಆಟಕ್ಕೆ ಸುಮಾರು 300ರಿಂದ 400 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಪುರಾತನ ಕಾಲದಲ್ಲಿ ಜನರಿಗೆ ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ಕಥೆಗಳನ್ನು ಸುಲಭವಾಗಿ ತಲುಪಿಸಲು ಈ ಕಲೆಯನ್ನು ಬಳಸಲಾಗುತ್ತಿತ್ತು. ಈ ಗೊಂಬೆಗಳನ್ನು ಸಾಮಾನ್ಯವಾಗಿ ಮರ, ಬಟ್ಟೆ ಮತ್ತು ಚರ್ಮದಿಂದ ತಯಾರಿಸಲಾಗುತ್ತದೆ. ಕಲಾವಿದರು ಬಿದಿರಿನ ಕಡ್ಡಿಗಳ ಅಥವಾ ದಾರಗಳ ಸಹಾಯದಿಂದ ಈ ಗೊಂಬೆಗಳನ್ನು ಚಲಾಯಿಸಿ ಜೀವಂತವಾಗಿರುವಂತೆ ಪ್ರದರ್ಶಿಸುತ್ತಾರೆ. ಆಧುನಿಕ ಯುಗದಲ್ಲಿ ಟಿ.ವಿ., ಸಿನೆಮಾ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಈ ಕಲೆ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಆದ್ದರಿಂದ, ಈ ಕಲೆ ಉಳಿಯಲು ಸರ್ಕಾರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ವಿಶೇಷ ಪ್ರೋತ್ಸಾಹ ನೀಡಬೇಕು” ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, “ಪ್ರತಿಯೊಂದು ಕಲಾರೂಪವೂ ತನ್ನದೇ ಆದ ವೈಶಿಷ್ಟ್ಯ ಮತ್ತು ಶ್ರೇಷ್ಠತೆಯನ್ನು ಹೊಂದಿದೆ. ಕಲೆಯ ಮೇಲಿನ ವಿಶೇಷ ಆಸಕ್ತಿ, ಶ್ರದ್ಧೆ ಮತ್ತು ತಾಳ್ಮೆಯಿದ್ದಾಗ ಮಾತ್ರ ಒಬ್ಬ ಕಲಾವಿದ ತನ್ನ ಪಾತ್ರವನ್ನು ಸಮರ್ಪಕವಾಗಿ ರೂಪಿಸಬಲ್ಲ. ನಿರಂತರ ಅಭ್ಯಾಸದಿಂದ ಕಲೆ ಅರಳಿ ಬೆಳೆಯಲು ಸಾಧ್ಯ. ಈ ಕಲೆಯನ್ನು ಪುನರುಜ್ಜೀವನಗೊಳಿಸಲು ಕೆಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಈ ವರದಿ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದರೆ, ಯಕ್ಷಗಾನ ಗೊಂಬೆ ಆಟಕ್ಕೆ ಹೊಸ ಚೈತನ್ಯ ದೊರೆಯುವ ಸಾಧ್ಯತೆ ಇದೆ” ಎಂದರು.

    ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ವಲಯದ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ., ಸಹಾಯಕ ಡಿಸೈನರ್ ಅಶ್ವಿನ್ ಕುಮಾರ್, ಆಳ್ವಾಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್ ಕೈರೋಡಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಪ್ರಿಯಾ ಭಾರದ್ವಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.

    baikady Book release Literature Puppetry roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಬಿ.ಸಿ. ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಕುಮಾರಿ ಆತ್ಮಿ ಶೆಟ್ಟಿ ಇವರ ‘ಭರತನಾಟ್ಯ ರಂಗಪ್ರವೇಶ’ | ಏಪ್ರಿಲ್ 04
    Next Article ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ನಾಟಕ ಪ್ರದರ್ಶನ | ಮಾರ್ಚ್ 27
    roovari

    Add Comment Cancel Reply


    Related Posts

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಸೂರ್ಯನ ಕುದುರೆ’ | ಮಾರ್ಚ್ 22

    March 26, 2026

    ಸಾಹಿತಿ ರೇಮಂಡ್ ಡಿಕುನಾ ತಾಕೊಡೆ ಇವರ ‘ಬೊಳ್ಳಿಲು’ ಕೃತಿ ಬಿಡುಗಡೆ

    March 26, 2026

    ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಏಪ್ರಿಲ್ 30

    March 26, 2026

    ಪುಸ್ತಕ ವಿಮರ್ಶೆ | ರೇವಣ ಸಿದ್ಧಪ್ಪನವರ ‘ಭವದ ಕಣ್ಣು’ ಕವನ ಸಂಕಲನ

    March 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.