Subscribe to Updates

    Get the latest creative news from FooBar about art, design and business.

    What's Hot

    ನೃತ್ಯಾಂತರಂಗದಲ್ಲಿ ಪ್ರೇಕ್ಷಕರ ಮನಮೆಚ್ಚಿದ ಶ್ರವಣ್ ರವರ ಏಕವ್ಯಕ್ತಿ ಪ್ರಸ್ತುತಿ

    August 4, 2026

    ಅಂಚೆ-ಕುಂಚ ಸ್ಪರ್ಧೆಗೆ ಚಿತ್ರಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    August 4, 2026

    ದೇವಿಕಾ ನಾಗೇಶ್ ಇವರ ‘ಬೊಲ್ಪುದ ಪಾಂತೆ’ ಕವನ ಸಂಕಲನ ಲೋಕಾರ್ಪಣೆ

    August 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬಹುಮುಖ ಪ್ರತಿಭೆ ಸಾನ್ವಿ ಎಂ. ಸುವರ್ಣ ಇವರಿಂದ ಏಕವ್ಯಕ್ತಿ ಪ್ರಸ್ತುತಿ
    Bharathanatya

    ಬಹುಮುಖ ಪ್ರತಿಭೆ ಸಾನ್ವಿ ಎಂ. ಸುವರ್ಣ ಇವರಿಂದ ಏಕವ್ಯಕ್ತಿ ಪ್ರಸ್ತುತಿ

    August 3, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ರಜತ ವರ್ಷದ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ-11’ ಕಾರ್ಯಕ್ರಮವು ಶ್ರೀ ಸಾಯಿ ನಮನ ಏಕವ್ಯಕ್ತಿ ಪ್ರಸ್ತುತಿ ಶಿರ್ಡಿ ಸಾಯಿಬಾಬಾ ಮಂದಿರ ಕೊಡಂಕೂರು, ಉಡುಪಿ ಇವರ ಸಹಯೋಗದೊಂದಿಗೆ ದಿನಾಂಕ 30 ಜುಲೈ 2026ರ ಗುರುವಾರ ಸಂಪನ್ನಗೊಂಡಿತು.

    ಬಹುಮುಖ ಪ್ರತಿಭೆ ಸಾನ್ವಿ ಎಂ. ಸುವರ್ಣ ಭರತನಾಟ್ಯ, ಕೂಚಿಪುಡಿ, ಕೀಬೋರ್ಡ್, ವಯೋಲಿನ್, ಕರ್ನಾಟಕ ಸಂಗೀತ, ಕರೋಕೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ಶಿರ್ಡಿ ಸಾಯಿಬಾಬಾ ಮಂದಿರ ಕೊಡಂಕೂರು, ಉಡುಪಿ ಇದರ ಮ್ಯಾನೇಜಿಂಗ್ ಟ್ರಸ್ಟಿ ಕೆ. ದಿವಾಕರ್ ಶೆಟ್ಟಿ ಇವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಉದ್ಘಾಟನೆಯ ನಂತರ ನಾಟ್ಯಾಲಯದ ವಿದ್ಯಾರ್ಥಿನಿ ವಿದ್ವಾನ್ ಕೆ. ಭವಾನಿ ಶಂಕರ್ ಇವರ ಶಿಷ್ಯ ಸಾನ್ವಿ ಎಂ. ಸುವರ್ಣ ಇವರಿಂದ ಸುಮಾರು ಒಂದುವರೆ ಗಂಟೆಗಳ ಕಾಲ ನೃತ್ಯ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಕಲಾವಿದೆಯ ಯಕ್ಷಗಾನ ಗುರುಗಳಾದ ಶ್ರೀ ರತ್ನಾಕರ ಆಚಾರ್ಯ, ಭರತನಾಟ್ಯ ಹಾಗೂ ಕೂಚಿಪುಡಿ ಗುರುಗಳಾದ ವಿದ್ವಾನ್ ಕೆ. ಭವಾನಿ ಶಂಕ‌ರ್, ಸಂಗೀತ ಗುರುಗಳಾದ ಶ್ರೀ ಸತೀಶ್ ಬನ್ನಂಜೆ, ಕರ್ನಾಟಕ ಸಂಗೀತ ಗುರುಗಳು ಶ್ರೀಮತಿ ಸಹನ ಭಟ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಉಧ್ಘಾಟಕರಾದ ತೋಟದಮನೆ ದಿವಾಕರ್ ಶೆಟ್ಟಿ, ಹಿರಿಯರಾದ ಸದಾಶಿವ ಕೆ. ಸುವರ್ಣ, ಶಾರದಾ ತಾರಾನಾಥ್, ಸಾನ್ವಿಯವರ ಮಾತಾಪಿತರಾದ ಮುರಳೀಧರ ಸುವರ್ಣ, ಭವ್ಯ ಮುರಳೀಧರ್ ಉಪಸ್ಥಿತರಿದ್ದರು. ಗುರುಗಳಾದ ವಿದ್ವಾನ್ ಕೆ. ಭವಾನಿಶಂಕರ್ ಪ್ರಸ್ತಾವಿಕದೊಂದಿಗೆ ಎಲ್ಲರನ್ನೂ ಸ್ವಾಗತಿಸಿ, ಮುರಳೀಧರ ಸುವರ್ಣ ವಂದನಾರ್ಪಣೆಗೈದು, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

    baikady bharatanatyam dance Kuchipudi Music roovari
    Share. Facebook Twitter Pinterest LinkedIn Tumblr WhatsApp Email
    Previous Articleಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿ ಪ್ರಕಟ
    Next Article ಕನ್ನಡ ಭವನದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ನೃತ್ಯಾಂತರಂಗದಲ್ಲಿ ಪ್ರೇಕ್ಷಕರ ಮನಮೆಚ್ಚಿದ ಶ್ರವಣ್ ರವರ ಏಕವ್ಯಕ್ತಿ ಪ್ರಸ್ತುತಿ

    August 4, 2026

    ಅಂಚೆ-ಕುಂಚ ಸ್ಪರ್ಧೆಗೆ ಚಿತ್ರಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    August 4, 2026

    ದೇವಿಕಾ ನಾಗೇಶ್ ಇವರ ‘ಬೊಲ್ಪುದ ಪಾಂತೆ’ ಕವನ ಸಂಕಲನ ಲೋಕಾರ್ಪಣೆ

    August 4, 2026

    ತೆಕ್ಕಟ್ಟೆ ಹಯಗ್ರೀವದಲ್ಲಿ ಒಡ್ಡೋಲಗ ಸರಣಿ ಕಾರ್ಯಕ್ರಮಗಳ ‘50ರ ಐಸಿರಿ’

    August 4, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.