ಧಾರವಾಡ : ಧಾರವಾಡದ ರಾಘವೇಂದ್ರ ‘ಪಾಟೀಲ ಸಾಹಿತ್ಯ ವೇದಿಕೆಯು ‘ರಾಘವೇಂದ್ರ ಪಾಟೀಲ ಕಥಾಪ್ರಶಸ್ತಿ’ಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸುತಿದ್ದು, ಈ ಪ್ರಶಸ್ತಿಯು ರೂಪಾಯಿ 20 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.
ಸ್ಪರ್ಧೆಗೆ ಲಿಂಗ, ವಯಸ್ಸು, ಜಾತಿ, ಧರ್ಮ, ಪ್ರದೇಶ ಇತ್ಯಾದಿ ಯಾವುದೇ ಕೃತಕ ಮಾನದಂಡಗಳು ಮತ್ತು ಯಾವುದೇ ಪ್ರವೇಶ ಶುಲ್ಕ ಇಲ್ಲ. ಕಥೆಗಳು ಈ ಮೊದಲು ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ (ಪ್ರಿಂಟ್ ಅಥವಾ ಡಿಜಿಟಲ್ ಮೀಡಿಯಾ)ದಲ್ಲಿ ಪ್ರಕಟವಾಗಿದ್ದರೂ ಪುಸ್ತಕರೂಪದಲ್ಲಿ ಪ್ರಕಟವಾಗಿರಬಾರದು. ಕನಿಷ್ಠ 5ರಿಂದ ಗರಿಷ್ಠ 20 ಅಪ್ರಕಟಿತ ಕಥೆಗಳನ್ನು ಕಳುಹಿಸಬಹುದು. ಎ-4 ಕಾಗದದಲ್ಲಿ 12 ಫಾಂಟ್ ಸೈಜಿನಲ್ಲಿ ತಪ್ಪಿಲ್ಲದಂತೆ ಟೈಪ್ ಮಾಡಿ, ಬೈಂಡ್ ಮಾಡಲಾದ, 120 ಪುಟಗಳಿಗೆ ಮೀರದ ಕಥೆಗಳ ನಾಲ್ಕು ಪ್ರತಿಗಳನ್ನು 25 ಅಕ್ಟೋಬರ್ 2024ರ ಒಳಗಾಗಿ ಸಾಹಿತ್ಯ ವೇದಿಕೆಯ ವಿಳಾಸಕ್ಕೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳ ಸಾಫ್ಟ್ ಕಾಪಿ ಸ್ವೀಕರಿಸಲಾಗುವುದಿಲ್ಲ. ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಲೇಖಕ/ಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ, ಒಂದು ಭಾವಚಿತ್ರವನ್ನು ಹಸ್ತಪ್ರತಿಯೊಡನೆ ಪ್ರತ್ಯೇಕವಾಗಿ ಲಗತ್ತಿಸಬೇಕು.
ವಿಳಾಸ: ವಿಕಾಸ ಹೊಸಮನಿ, ಸಂಚಾಲಕರು, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ -581 110. ಹೆಚ್ಚಿನ ಮಾಹಿತಿಗಾಗಿ 91106 87473
Subscribe to Updates
Get the latest creative news from FooBar about art, design and business.
Next Article ಲೋಕಾರ್ಪಣೆಗೊಂಡ ‘ಚುಟುಕಾಂ’ ಚುಟುಕುಗಳ ಸಂಕಲನ
Related Posts
Comments are closed.