ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮತ್ತು ಅರೆಹೊಳೆ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸುವ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನವನ್ನು ದಿನಾಂಕ 27 ಮೇ 2026ರಂದು ಸಂಜೆ ಗಂಟೆ 6-15ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೊಳುವಾರು ಮಹಮ್ಮದ್ ಕುಂಞು ಇವರ ಕಾದಂಬರಿ ಆಧಾರಿತ ನಾಟಕಕ್ಕೆ ನಟರಾಜ್ ಹೊನ್ನವಳ್ಳಿ ರಂಗಪಠ್ಯ ವಿನ್ಯಾಸ ಮತ್ತು ನಿರ್ದೇಶನ, ಗೋಮಾರದಹಳ್ಳಿ ಮಂಜುನಾಥ್ ನಾಟಕ ರೂಪಾಂತರ ಮತ್ತು ಸಲ್ಮಾ ದಂಡಿನ್ ಸಹ ನಿರ್ದೇಶನ ಮಾಡಿರುತ್ತಾರೆ.

