ಮೇಲುಕೋಟೆ : ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ, ಡಾ. ಪು.ತಿ.ನ. ಟ್ರಸ್ಟ್ (ರಿ.) ಮೇಲುಕೋಟೆ, ಕರ್ನಾಟಕ ಸಂಘ (ರಿ.) ಮಂಡ್ಯ ಮತ್ತು ಜನಪದ ಸೇವಾ ಟ್ರಸ್ಟ್ (ರಿ.) ಮೇಲುಕೋಟೆ ಇವರ ಸಹಯೋಗದೊಂದಿಗೆ 10ನೇ ವರ್ಷದ ‘ದೊಡ್ಡಮರದ ನೆರಲಿನಲಿ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ದಿನಾಂಕ 27 ಮೇ 2026ರಂದು ಸಂಜೆ 6-30 ಗಂಟೆಗೆ ಮೇಲುಕೋಟೆ ಡಾ. ಪು.ತಿ.ನ. ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ್ ಗೌಡರು ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಮಾಜ ಸೇವಕರಾದ ಅರವಿಂದ್ ರಾಘವನ್ ಇವರು ಉದ್ಘಾಟನೆ ಮಾಡಲಿದ್ದಾರೆ. ಅಂತರ ರಾಷ್ಟ್ರೀಯ ಜನಪದ ಗಾಯಕರಾದ ಅಪ್ಪಗೆರೆ ತಿಮ್ಮರಾಜುರವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶಿಬಿರದ ವಿದ್ಯಾರ್ಥಿಗಳಿಂದ ರೋಹನ್ ಮಂಡ್ಯ ನಿರ್ದಶನದಲ್ಲಿ ‘ಚೋರ ಚರಣದಾಸ’ ಮತ್ತು ಗಿರೀಶ್ ಕೆ.ಆರ್. ಮೇಲುಕೋಟೆ ಇವರ ನಿರ್ದೇಶನದಲ್ಲಿ ‘ಸುಮ್ ಸುಮ್ಕೆ’ ನಾಟಕ ಪ್ರದರ್ಶನ ನಡೆಯಲಿದೆ.


