ಲಿಂಗಸೂಗೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗಧ್ವನಿ (ರಿ.) ಜನರಂಗ (ರಿ.) – ಶ್ರೀ ವಿಜಯಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ (ರಿ.) ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘ (ರಿ.) ಲಿಂಗಸೂಗೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ‘ಆಟ – ಕೂಟ’ ಮಕ್ಕಳ ರಂಗ ಶಿಬಿರ 2026 ಸಮಾರೋಪ ಸಮಾರಂಭವನ್ನು ದಿನಾಂಕ 27 ಮೇ 2026ರಂದು ಸಂಜೆ 5-30 ಗಂಟೆಗೆ ಲಿಂಗಸೂಗೂರು ಶ್ರೀ ವೀರಶೈವ ವಿದ್ಯಾವರ್ಧಕ ಸಂಘ ಆವರಣ ಬಸವೇಶ್ವರ ಕಾಲೇಜು ಬಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಶ್ರೀ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿಯಾದ ಬಸವಂತಾರಾಯ ಕುರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶಂಕರಯ್ಯ ಆರ್. ಘಂಟಿ ಇವರ ನಿರ್ದೇಶನದಲ್ಲಿ ‘ಕೀರುಗೆಜ್ಜೆ ಘಲ್ ಘಲ್’ ಹಾಗೂ ವೀರೇಶ್ ಎಂ.ಪಿ. ಇವರ ನಿರ್ದೇಶನದಲ್ಲಿ ‘ಮೂರ್ಖರಾಜ’ ನಾಟಕ ಪ್ರದರ್ಶನಗೊಳ್ಳಲಿದೆ.

