ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ “ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು” ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 119ನೇ ತಿಂಗಳ ಕಾರ್ಯಕ್ರಮವು ದಿನಾಂಕ 24 ಮೇ 2026ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಜರುಗಿತು.
ಟಿ.ಎನ್.ಪ್ರಭು ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ, ಬ್ಯಾನರ್ ಕಲಾವಿದ ಕೆ.ಕೆ. ರಾಮನ್, ರಜನಿ ಎನ್. ಪ್ರಭು, ವಿಶ್ವನಾಥ್ ಶ್ಯಾನುಭಾಗ್, ಆಶಾಕಾರ್ಯಕರ್ತೆ ಜ್ಯೋತಿ ಪೂಜಾರಿ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖ್ಯಾತ ಬ್ಯಾನರ್ ಕಲಾವಿದ ಕೆ.ಕೆ. ರಾಮನ್ ಕುಂದಾಪುರ ಮತ್ತು ಶಾಲಿನಿ ಉಪ್ಪಿನಕುದ್ರು ಇವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ತದನಂತರ ‘ಯಕ್ಷೇಶ್ವರಿ ತಂಡ’ ಉಪ್ಪಿನಕುದ್ರು ಇವರಿಂದ ಕುಣಿತ ಭಜನೆ ಜರುಗಿತು. ರಾಜೇಂದ್ರ ಪೈಯವರು ನಿರೂಪಿಸಿದರು.

