ಬಂಟ್ವಾಳ : ಅಭಿರುಚಿ ಜೋಡುಮಾರ್ಗ ಇವರು ಪ್ರಸ್ತುತ ಪಡಿಸುವ ಅಯನ ಮೂಡುಬಿದಿರೆ ಅಭಿನಯಿಸುವ ‘ಊರ್ಮಿಳಾ’ ಏಕವ್ಯಕ್ತಿ ರಂಗ ಪ್ರಯೋಗವನ್ನು ದಿನಾಂಕ 30 ಅಕ್ಟೋಬರ್ 2026ರಂದು ಸಂಜೆ 6-30 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಇವರ ರಚನೆ, ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ವಿದುಷಿ ಅಯನಾ ವಿ. ರಮಣ್ ಇವರು ಈ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಡಲಿದ್ದಾರೆ. ನಿರ್ವಹಣೆ ಕೆ.ವಿ. ರಮಣ್ ಇವರದು. ಹೆಚ್ಚಿನ ಮಾಹಿತಿಗಾಗಿ 8792158946 ಸಂಖ್ಯೆಯನ್ನು ಸಂಪರ್ಕಿಸಿರಿ.


