Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07

    October 15, 2026

    ಪುಸ್ತಕ ವಿಮರ್ಶೆ | ‘ಯಾತ್ರೆ’ ಕಾದಂಬರಿಯ ವೈಶಿಷ್ಟ್ಯ

    October 15, 2026

    ಉಡುಪಿಯಲ್ಲಿ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಅಕ್ಟೋಬರ್ 25

    October 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಬಾಲರಂಗ’ ಸನಿವಾಸ ನಾಟಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ
    Camp

    ‘ಬಾಲರಂಗ’ ಸನಿವಾಸ ನಾಟಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ

    October 15, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಶ್ವಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ‘ವರ್ಧನಿ’ ಪ್ರಾಯೋಜಕ್ವದಲ್ಲಿ ಮತ್ತು ಸಾಧನಾ ಬಳಗ ಸಹಕಾರದೊಂದಿಗೆ ಆಯೋಜಿಸಿದ ‘ಬಾಲರಂಗ’ ಮಕ್ಕಳಿಗೆ ನಾಟಕ ತರಬೇತಿ ನೀಡುವ ಮೂರು ದಿವಸಗಳ ಉಚಿತ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 13 ಅಕ್ಟೋಬರ್ 2026ರಂದು ನಡೆಯಿತು.

    ಸಮಾರೋಪ ಸಮಾರಂಭದ ಆರಂಭದಲ್ಲಿ ಶಿಬಿರಾರ್ಥಿಗಳು ತಾವು ಶಿಬಿರದಲ್ಲಿ ಕಲಿತ ಗೀತ ಗಾಯನ ಹಾಗೂ ನೃತ್ಯ ಪ್ರದರ್ಶನ ಮಾಡಿದರು ಮತ್ತು ತಾವು ಕಲಿತ ನಾಟಕದ ಮೊದಲ ತುಣುಕು ಪ್ರದರ್ಶಿಸಲ್ಪಟ್ಟಿತು. ಈ ನಾಟಕವನ್ನು ಹೆಸರಾಂತ ನಾಟಕ ದಿಗ್ದರ್ಶಕ ಶ್ರೀ ಜಗನ್ ಪವಾರ ಮತ್ತು ರಚನಕಾರ – ಶ್ರೀ ಪ್ರಕಾಶ ಶೆಣೈ ಹಾಗೂ ಬಣ್ಣ ತುಂಬಿದ – ಶ್ರೀ ಅರುಣ ಪ್ರಕಾಶ ನಾಯಕ್, ವಿನ್ಯಾಸ – ಶ್ರೀ ಸತೀಶ್ ಪಿ. ನೀನಾಸಂ, ಸಂಗೀತ – ಶ್ರೀಮತಿ ಭಾವನಾ ಪ್ರಭು, ಆಟ – ಶ್ರೀಮತಿ ಪುಷ್ಪಲತಾ ಭಟ್, ನೃತ್ಯ – ಮಂಜುಳಾ ಕಾಮತ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ನೆರೆದ ಗಣ್ಯರನ್ನು ಉದ್ದೇಶಿಸಿ ಮಾತನಾಡುತ್ತಾ “ಬಾಲರಂಗ” ಶಿಬಿರವು ಮಕ್ಕಳ ಶಿಕ್ಷಣದೊಂದಿಗೆ ಅವರ ಮನಸ್ಸಿನ ಭಾವನೆಗಳನ್ನು ಹೊರ ತರುವುದಲ್ಲದೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುತ್ತದೆ. ಇದರಿಂದ ಎಳೆಯ ಮಕ್ಕಳಲ್ಲಿ ರಂಗಾಭಿನಯದ ಅಭಿರುಚಿ ಮೂಡಿ ಮಾತೃ ಭಾಷಾ ಅಭಿಮಾನವೂ ಜಾಗೃತಗೊಳ್ಳುವುದು. ಈ ನಿಟ್ಟಿನಲ್ಲಿ ತರಬೇತಿ ನೀಡುವ ಕಾರ್ಯಗಾರವನ್ನು ವಿಶ್ವ ಕೊಂಕಣಿ ಕೇಂದ್ರವು ಕೈಗೆತ್ತಿಕೊಂಡಿದೆ ಎಂದು ಮಕ್ಕಳಿಗೆ ಸ್ಪೂರ್ಥಿದಾಯಕ ಮಾತುಗಳಾನ್ನಾಡಿ, ಶಿಬಿರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳನ್ನು, ಸ್ವಯಂ ಸೇವಕರನ್ನು ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.

    ಶಿಬಿರಾರ್ಥಿಗಳು ಮೂರು ದಿವಸಗಳ ತಮ್ಮ ಅನುಭವಗಳನ್ನು ವೇದಿಕೆಯಲ್ಲಿ ಹಂಚಿ ಸಂತೋಷಪಟ್ಟರು. ಕೇಂದ್ರದ ಲಕ್ಷ್ಮೀ ಕಿಣಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಅಶೋಕ ನಾಯಕ್ ಧನ್ಯವಾದ ಸಮರ್ಪಣೆ ಮಾಡಿದರು. ಒಟ್ಟು ಮೂರು ದಿವಸಗಳ ಸನಿವಾಸದ ಈ ವಿಶೇಷ ‘ಬಾಲರಂಗ’ ಶಿಬಿರದಲ್ಲಿ ಸುಮಾರು 50 ಮಕ್ಕಳು ಉಚಿತ ಊಟೋಪಚಾರ, ವಸತಿ ಸೌಲಭ್ಯದೊಂದಿಗೆ ನಾಟಕದ ವಿವಿಧ ಕಲೆಗಳ ತರಬೇತಿ ಪಡೆದರು.

    baikady camp drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕಾಂತಾವರ ಕನ್ನಡ ಸಂಘದ 2026ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳ ಘೋಷಣೆ
    Next Article ಉಡುಪಿಯಲ್ಲಿ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಅಕ್ಟೋಬರ್ 25
    roovari

    Add Comment Cancel Reply


    Related Posts

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07

    October 15, 2026

    ಪುಸ್ತಕ ವಿಮರ್ಶೆ | ‘ಯಾತ್ರೆ’ ಕಾದಂಬರಿಯ ವೈಶಿಷ್ಟ್ಯ

    October 15, 2026

    ಉಡುಪಿಯಲ್ಲಿ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಅಕ್ಟೋಬರ್ 25

    October 15, 2026

    ಕಾಂತಾವರ ಕನ್ನಡ ಸಂಘದ 2026ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

    October 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.