Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07

    October 15, 2026

    ಪುಸ್ತಕ ವಿಮರ್ಶೆ | ‘ಯಾತ್ರೆ’ ಕಾದಂಬರಿಯ ವೈಶಿಷ್ಟ್ಯ

    October 15, 2026

    ಉಡುಪಿಯಲ್ಲಿ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಅಕ್ಟೋಬರ್ 25

    October 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ‘ಯಾತ್ರೆ’ ಕಾದಂಬರಿಯ ವೈಶಿಷ್ಟ್ಯ
    Article

    ಪುಸ್ತಕ ವಿಮರ್ಶೆ | ‘ಯಾತ್ರೆ’ ಕಾದಂಬರಿಯ ವೈಶಿಷ್ಟ್ಯ

    October 15, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬ್ರಾಹ್ಮಣರಲ್ಲಿ ಸಂಕೇತಿ ಎಂಬ ಬ್ರಾಹ್ಮಣ ಸಮುದಾಯವಿದೆ. ಇವರು 800 ವರ್ಷಗಳ ಹಿಂದೆ ತಮಿಳ್ನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದವರು. ಶೈವ ವೈಷ್ಣವ ಭಿನ್ನಮತದ ಪರಿಣಾಮವಾಗಿ ಆಚಾರ್ಯ ರಾಮಾನುಜರ ಕಾಲದಲ್ಲೇ ಮೈಸೂರು ಆಸುಪಾಸಿನಲ್ಲಿ ನೆಲೆ ನಿಂತು, ವೈದಿಕ ಮತ್ತು ಕೃಷಿಯನ್ನು ನೆಚ್ಚಿಕೊಂಡು ಇವರು ಬಾಳಿದರು. ಇವರ ಮಾತೃ ಭಾಷೆ ಸಂಕೇತಿ. ಇದು ತಮಿಳು ಮೂಲದ್ದು. ಕರ್ನಾಟಕದ ಸಂಪರ್ಕಕ್ಕೆ ಬಂದ ಮೇಲೆ ಸ್ವಲ್ಪ ರೂಪಾಂತರಗೊಂಡರೂ ಆ ಭಾಷೆಯ ಸತ್ವವನ್ನು ಈಗಲೂ ಉಳಿಸಿಕೊಂಡಿದ್ದಾರೆ. ಭಾಷೆಯೂ, ಸಂಸ್ಕೃತಿಯೂ ಒಂದೇ ನಾಣ್ಯದ ಎರಡು ಮುಖಗಳಂತೆ. ಭಾಷೆಯನ್ನು ಬಳಸುವವರು ಮಾತ್ರ ಅದನ್ನು ಉಳಿಸಬಲ್ಲರು. ಕೇವಲ 16 ಸಾವಿರ ಜನಸಂಖ್ಯೆಯುಳ್ಳ ಈ ಸಂಕೇತಿ ಬ್ರಾಹ್ಮಣರು ಸಂಕೇತ ಸಮುದಾಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಭಾಷೆಯನ್ನುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಒಂದು ಪ್ರಯತ್ನವನ್ನು ಆ ಭಾಷೆಯಲ್ಲಿ ಮೊತ್ತ ಮೊದಲ ಕಾದಂಬರಿ ಬರೆಯುವ ಮೂಲಕ ಡಾ. ಬಿ.ಎಸ್. ಪ್ರಣತಾರ್ತಿ ಹರನ್ ಅವರು ಶ್ಲಾಘ್ಯನೀಯವಾದ ಕೆಲಸವನ್ನು ಮಾಡಿದ್ದಾರೆ. ‘ಯಾತ್ರೆ’ ಎಂಬ ಈ ಕಾದಂಬರಿಯನ್ನು ತುಳುವಿಗೆ ಅನುವಾದಿಸಿ ಡಾ. ವಸಂತ ಕುಮಾರ್ ಪೆರ್ಲರು ಭಾಷೆ ಪ್ರೇಮ ಎಂದರೆ ಹೀಗಿರಬೇಕು ಎಂದು ತುಳುವರೂ ಅರಿತುಕೊಳ್ಳುವಂತೆ ಮಾಡಿದ್ದಾರೆ.

    ಈ ಕಾದಂಬರಿಯಲ್ಲಿ ಸಂಕೇತ ಸಮುದಾಯವು ಕೃಷಿ ಬದುಕಿನ ಜೊತೆಗೆ ವೇದಾಧ್ಯಯನ ಮಾಡುತ್ತಾ ಕಾಲ ಬದಲಾದಂತೆ ಪ್ರವಾಹ ವಿರುದ್ಧ ಈಜಲಾಗದೆ ಪರಿಸ್ಥಿತಿಗೆ ಹೊಂದಿಕೊಂಡು ಬಾಳಿದ ರೀತಿಯನ್ನು ಸುಂದರವಾಗಿ ಹೃದಯಕ್ಕೆ ಮುಟ್ಟುವಂತೆ ವರ್ಣಿಸಿದ್ದಾರೆ. ಹಿರಿ ತಲೆಮಾರಿನ ರಂಗಪ್ಪ, ಗುಂಡಪ್ಪಾವಧಾನಿ, ಗೋವಿಂದರಾಯ ಮುಂತಾದವರ ಪ್ರಾಮಾಣಿಕ ಬದುಕು ಆದರ್ಶ ಪ್ರಾಯವಾಗಿದೆ. ವಿಧವೆಯನ್ನು ತಲೆ ಬೋಳಿಸಿ ಮೂಲೆಗೆ ಕುಳ್ಳಿರಿಸಿದ ಮನೆತನವೇ ಮುಂದೆ ಕಿರಿ ತಲೆಮಾರು ಸಕೇಶಿಯನ್ನಾಗಿ ಉಳಿಸಿ ಮರು ಮದುವೆ ಮಾಡಿಸಿಕೊಡುವಲ್ಲಿವರೆಗಿನ ಹೃದಯವಂತಿಕೆಯನ್ನು ಬೆಳೆಸಿಕೊಂಡರು. ಆಧುನಿಕ ವಿದ್ಯೆ ಹಳೆಯದೆಲ್ಲವನ್ನೂ ತ್ಯಜಿಸುವ ಮೂರ್ಖತನ ಮಾಡದೆ ಆ ಕಾಲದ ಒಳ್ಳೆಯ ಸಂಪ್ರದಾಯಗಳನ್ನೂ ಉಳಿಸುವ ಪ್ರಜ್ಞೆಯನ್ನೂ ಬೆಳೆಸಿಕೊಳ್ಳಬೇಕೆಂಬ ಮಾದರಿಯನ್ನು ಈ ಕಾದಂಬರಿಯ ಪಾತ್ರಗಳು ನಮಗೆ ನೀಡುತ್ತವೆ. ಈ ಕಾದಂಬರಿಯಲ್ಲಿ ಬರುವ ನಾಚಾರಮ್ಮನ ವಿಗ್ರಹದ ಕತೆ, ಹೆಣ್ಣು ಮಕ್ಕಳು ಕುಟುಂಬವನ್ನು ಪೋಷಿಸುವಲ್ಲಿ ಅವರ ತ್ಯಾಗ ಸಹನೆ, ದಕ್ಷತೆಗಳೆಲ್ಲವೂ ಬಹಳ ಸೊಗಸಾಗಿ ವರ್ಣಿಸಲ್ಪಟ್ಟಿದೆ. ಸಂಸ್ಕೃತದಲ್ಲಿ ಎಂ.ಎ. ಮಾಡಿದ ಶಾರದಾ ಪಟ್ಟಣದಿಂದ ಹಳ್ಳಿ ಮನೆಗೆ ಮದುವೆಯಾಗಿ ಗುಂಡಪ್ಪಾವಧಾನಿಗಳ ಮನೆ ಬೆಳಗಿದ ರೀತಿಯೇ ವಿಶಿಷ್ಟವಾಗಿದೆ. ಹೊಸ ತಲೆಮಾರಿನ ಮಾಧುಗೆ ಕೆಲಸ ಸಿಕ್ಕಿದ ಸಂತೋಷದಲ್ಲಿ ಸಿದ್ಧೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲು ಯಾತ್ರೆ ಹೊರಡುವಲ್ಲಿಂದ ಪ್ರಾರಂಭವಾಗುವ ಈ ಕಾದಂಬರಿ ಅವರು ಹಿಂತಿರುಗಿ ಊರಿಗೆ ಮರಳುವವರೆಗಿನ ಕತೆಯಲ್ಲಿ ಸಂಕೇತಿ ಸಮುದಾಯದ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯ, ನಂಬಿಕೆ ಇತ್ಯಾದಿ ಎಲ್ಲವೂ ಎಳೆ ಎಳೆಯಾಗಿ ಚಿತ್ರಿಸಲ್ಪಟ್ಟಿವೆ. ಡಾ. ಹರನ್ ಅವರ ಈ ಭಾಷಾ ಪ್ರೇಮ ಮತ್ತು ಸಾಹಿತ್ಯ ಸಾಧನೆಯ ಕೌಶಲಕ್ಕೆ ಅಭಿನಂದನೆಗಳು ಸಲ್ಲಬೇಕು. ಹಾಗೆಯೇ ಆ ಕಾದಂಬರಿಯನ್ನು ತುಳುವಿಗೆ ಅನುವಾದಿಸಿದ ತುಳು ಕನ್ನಡದಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ ಡಾ. ವಸಂತ ಕುಮಾರ್ ಪೆರ್ಲರ ಸಾಹಿತ್ಯ ಪ್ರೀತಿಗೂ ಅಭಿನಂದನೆಗಳು ಸಲ್ಲಲೇಬೇಕು. ತುಳು ಭಾಷೆಯಲ್ಲಿ ವೈವಿಧ್ಯಗಳಿವೆ. ಪೆರ್ಲರ ತುಳು ಬ್ರಾಹ್ಮಣರ ತುಳು. ಅಲ್ಲಿ ಕೆಲವು ಕಡೆಗಳಲ್ಲಿ ಅವರಿಗರಿವಿಲ್ಲದಂತೆಯೇ ಕನ್ನಡ ಪದಗಳು ಸೇರಿಕೊಂಡದ್ದೂಂಟು. ಆದರೂ ತುಳು ಭಾಷೆಯ ಸತ್ವವನ್ನು ಭಟ್ಟಿ ಇಳಿಸಿದಂತೆ ಭಾಷೆಯ ಸೌಂದರ್ಯವನ್ನು ಉಳಿಸಿದ್ದಾರೆ. ವಿಶೇಷವಾಗಿ ನುಡಿಗಟ್ಟುಗಳು, ಗಾದೆಗಳು ನಮ್ಮದೇ ಮನೆಮಾತಿನಂತೆ ಭಾಸವಾಗುತ್ತವೆ. ‘ಯಾತ್ರೆ’ ಎಂಬ ಈ ಕಾದಂಬರಿ ತುಳು ಸಾಹಿತ್ಯದ ಪ್ರಚಾರಕ್ಕೂ, ಅಭಿವೃದ್ಧಿಗೂ ಪೂರಕವಾಗಿ ಕೆಲಸ ಮಾಡಿದ್ದರಿಂದ ಸಾಹಿತ್ಯಾಭಿಮಾನಿಗಳೆಲ್ಲರೂ ಪ್ರೀತಿಯಿಂದ ನಮಿಸುತ್ತಾರೆ.

    ವಿಮರ್ಶಕಿ : ಬಿ.ಎಂ. ರೋಹಿಣಿ

    ಲೇಖಕ : ಡಾ. ವಸಂತಕುಮಾರ ಪೆರ್ಲ

    ಡಾ. ಪೆರ್ಲ ಇವರು ಗಡಿನಾಡಾದ ಕಾಸರಗೋಡಿನವರಾಗಿದ್ದು, ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರ ದುಡಿಯುತ್ತಿದ್ದಾರೆ. ಸಾಹಿತ್ಯದ ನಾನಾ ವಿಭಾಗಗಳಲ್ಲಿ, ಕನ್ನಡ, ತುಳು, ಇಂಗ್ಲೀಷ್ ಮತ್ತು ಹವ್ಯಕ ಭಾಷೆಯಲ್ಲಿ ಇದುವರೆಗೆ 55ಕ್ಕೆ ಮೇಲ್ಪಟ್ಟು ಕೃತಿ ರಚನೆ ಮಾಡಿದ್ದು, ಸಾಹಿತ್ಯ ರಚನೆ, ಸಂಘಟನೆ, ಸಂವರ್ಧನೆ, ಕಿರಿಯರಿಗೆ ಪ್ರೋತ್ಸಾಹ ಹೀಗೆ ಕನ್ನಡ ನಾಡುನುಡಿಯನ್ನು ಕಟ್ಟುವ ಎಲ್ಲ ಕ್ಷೇತ್ರಗಳಲ್ಲಿ ದುಡಿದು ಓರ್ವ ಸಾಧಕರಾಗಿದ್ದಾರೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ – ಅಂದರೆ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರಬಂಧ, ವ್ಯಕ್ತಿಚಿತ್ರ, ಪ್ರವಾಸ ಕಥನ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಇವರ ಕೃತಿ ರಚನೆಯ ವ್ಯಾಪ್ತಿಯಿದ್ದು, ಇವರ ಕೆಲವು ರಚನೆಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಳಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿವೆ. ಪತ್ರಿಕೋದ್ಯಮ, ರೇಡಿಯೋ ಮತ್ತು ಟಿ.ವಿ., ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲೂ ದುಡಿದು ವ್ಯಾಪಕ ಅನುಭವ ಮತ್ತು ಲೋಕಜ್ಞಾನ ಗಳಿಸಿದ ಪ್ರತಿಭಾವಂತ ಮತ್ತು ಬಹುಮುಖಿ ವ್ಯಕ್ತಿತ್ವದ ಸಾಹಿತಿ ಹಾಗೂ ಒಳ್ಳೆಯ ವಾಗ್ಮಿಯೂ ಆಗಿದ್ದಾರೆ. ಡಾ. ಪೆರ್ಲ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳು ಬಂದಿವೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಅಕ್ಟೋಬರ್ 25
    Next Article ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07
    roovari

    Add Comment Cancel Reply


    Related Posts

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07

    October 15, 2026

    ಉಡುಪಿಯಲ್ಲಿ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ | ಅಕ್ಟೋಬರ್ 25

    October 15, 2026

    ‘ಬಾಲರಂಗ’ ಸನಿವಾಸ ನಾಟಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ

    October 15, 2026

    ಕಾಂತಾವರ ಕನ್ನಡ ಸಂಘದ 2026ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

    October 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.