Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷಮಂಜರಿ’ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ | ಮಾರ್ಚ್ 01ರಿಂದ 08

    February 25, 2026

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    ಮೇಘಮೈತ್ರಿ ದ್ವಿತೀಯ ಯುವ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ. ವೆಂಕಟೇಶ ಗುಡೆಪ್ಪನವರ ಆಯ್ಕೆ

    February 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶ್ರೇಯಾ ಬಾಲಾಜಿ ಇವರ ನೃತ್ಯ ಪ್ರದರ್ಶನ | ಮೇ 13  
    Bharathanatya

    ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶ್ರೇಯಾ ಬಾಲಾಜಿ ಇವರ ನೃತ್ಯ ಪ್ರದರ್ಶನ | ಮೇ 13  

    May 11, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email



    ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 13-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶ್ರೇಯಾ ಬಾಲಾಜಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

    ಶ್ರೇಯಾ ಬಾಲಾಜಿ ಇವರು ಭರತನಾಟ್ಯ ಅಭ್ಯಾಸವನ್ನು ತಮ್ಮ ಆರನೇ ವಯಸ್ಸಿನಲ್ಲಿ ವಿದುಷಿ ಕೆ. ಬೃಂದಾ ಮತ್ತು ವಿದುಷಿ ಅನನ್ಯ ಎಂ. ಇವರಿಂದ ಪ್ರಾರಂಭಿಸಿರುತ್ತಾರೆ. ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಇವರು ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿಯೂ ಕಾರ್ಯಕ್ರಮ ನೀಡಿರುತ್ತಾರೆ. ಪ್ರಸ್ತುತ ‘ಬೃಂದಾವನ ಕಲಾನಿಕೇತನ’ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ‘ಡಾ. ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ’, ‘ಚೈತ್ರಶ್ರೀ ಪ್ರಶಸ್ತಿ’, ‘ರಾಜೀವ್ ಗಾಂಧಿ ಪ್ರತಿಭಾ ಪುರಸ್ಕಾರ’, ಕಲಾ ಸ್ಪೂರ್ತಿ ಪ್ರಶಸ್ತಿ’, ‘ನಾಟ್ಯ ಮಯೂರಿ ಪ್ರಶಸ್ತಿ’, ‘ಅಂತರರಾಷ್ಟ್ರೀಯ ಆರ್ಯ ಭಟ್ಟ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಹಾಗೂ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಇವರು ಹಲವಾರು ನೃತ್ಯ ಕಾರ್ಯಕ್ರಮ ನೀಡಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನದಲ್ಲಿ ಯಕ್ಷಗಾನ ಹಾಗೂ ಸಾಧಕರಿಗೆ ಸನ್ಮಾನ
    Next Article ಸುಳ್ಯ ತಾಲೂಕು ಜಾನಪದ ಕೂಡುಕಟ್ಟು ವತಿಯಿಂದ ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರಿಗೆ ನುಡಿನಮನ
    roovari

    Add Comment Cancel Reply


    Related Posts

    ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ | ಮಾರ್ಚ್ 01

    February 25, 2026

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಪ್ರತಿಭಾನಂದಿನಿ’ | ಫೆಬ್ರವರಿ 25

    February 24, 2026

    ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.