ಬೆಂಗಳೂರು : ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದಲ್ಲಿ 3ರಿಂದ 15 ವರ್ಷದ ಮಕ್ಕಳಿಗೆ 2 ವಿಭಾಗಗಳಲ್ಲಿ ರಂಗ ತರಬೇತಿಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
‘ಮಂಗಳ ಅಂಗಳ’ ಮೊದಲ ವಿಭಾಗವು 3ರಿಂದ 8ನೇ ವರ್ಷದ ಮಕ್ಕಳಿಗಾಗಿದ್ದು, 4 ತಿಂಗಳ ಅವಧಿಯ ಈ ತರಗತಿಗಳಲ್ಲಿ ಅಭಿನಯ, ಆಟಗಳು, ಹಾಡುಗಳು, ಕಲೆ ಹಾಗೂ ಕರಕುಶಲದ ಬಗ್ಗೆ ಮಕ್ಕಳಿಗೆ ಪ್ರತಿಭಾವಂತ ನಿರ್ದೇಶಕರು ಮಾರ್ಗದರ್ಶನ ನೀಡಲಿದ್ದಾರೆ ಹಾಗೂ ಪ್ರತಿ 2 ತಿಂಗಳಿಗೊಮ್ಮೆ ಮಕ್ಕಳಿಂದ ವಿಶೇಷ ಪ್ರದರ್ಶನಗಳನ್ನು ನಡೆಸಲಾಗುವುದು. ಜೂನ್ 6ರಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು ಪ್ರತಿ ಮಂಗಳವಾರ ಸಂಜೆ 5ರಿಂದ 6.30ರವರೆಗೆ ನಡೆಯಲಿದೆ.
2ನೇ ವಿಭಾಗವು 8ರಿಂದ 15ನೇ ವರ್ಷದ ಮಕ್ಕಳಿಗೆ 8 ತಿಂಗಳ ಅವಧಿಯ ತರಗತಿಗಳಾಗಿದ್ದು ಇದರಲ್ಲಿ ನಟನೆ, ಆಟಗಳು, ಕಲೆ ಹಾಗೂ ಕರಕುಶಲ, ಹಾಡು, ನೃತ್ಯ, ಚಿತ್ರಕಥನ ಇವುಗಳಲ್ಲಿ ಮುಂದುವರೆಯಲು ಮಕ್ಕಳಿಂದ ವಿಶೇಷ ಪ್ರದರ್ಶನ ಹಾಗೂ ‘ಬೊಂಬೆ ಹಬ್ಬ’ ನಡೆಯಲಿರುವುದು. ಜೂನ್ 4ರಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು ಪ್ರತಿ ಶನಿವಾರ ಸಂಜೆ 4.30ರಿಂದ 6.30ರವರೆಗೆ ನಡೆಯಲಿದೆ.
ಈ ತರಗತಿಗಳ ದಾಖಲಾತಿ ಈಗಲೇ ಆರಂಭವಾಗಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 9845265967, 9844152967, 9880033018, 9845734967, 9844017881 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ವಿಜಯನಗರ ಬಿಂಬ 25
ರಂಗಭೂಮಿ ಎನ್ನುವುದು ಸಶಕ್ತ ಮಾಧ್ಯಮ. ತನ್ನ ತೆಕ್ಕೆಗೆ ಬಂದವರನ್ನು ಸಕಾರಾತ್ಮಕವಾಗಿ ಪ್ರಭಾವಿಸದೆ ಬಿಡುವುದಿಲ್ಲ. ನಟನಾಗಬೇಕು ಎಂಬ ಹಂಬಲದಿಂದ ಪ್ರಾರಂಭವಾಗುವ ತುಡಿತ ಕ್ರಮೇಣ ಆ ನಟನನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತದೆ, ಸಮಾಜಮುಖಿಯಾಗಿ ಮಾಡುತ್ತದೆ ಎಂದರೆ ತಪ್ಪಲ್ಲ. ಇಂಥ ಸಶಕ್ತ ಮಾಧ್ಯಮವನ್ನು ಮುಂದಿನ ಪೀಳಿಗೆಗೆ, ಯುವ ಪೀಳಿಗೆಗೆ ತಲುಪಿಸಬೇಕು ಎನ್ನುವ ಹಂಬಲದಿಂದ 1997ರ ಬೇಸಿಗೆಯಲ್ಲಿ ಶ್ರೀಮತಿ ಶೋಭಾ ವೆಂಕಟೇಶ್ ಅವರ ಒತ್ತಾಸೆಯ ಫಲವಾಗಿ ಪ್ರಾರಂಭವಾದ ಸಂಸ್ಥೆ ‘ವಿಜಯನಗರ ಬಿಂಬ’.
ಖ್ಯಾತ ನಾಟಕಕಾರರಾದ ಎ.ಎಸ್. ಮೂತಿ೯ಯವರ ಮಾಗ೯ದಶ೯ನದಲ್ಲಿ ಪ್ರಾರಂಭವಾದ ಈ ಸಂಸ್ಥೆ ಮೊದಲು ಹಮ್ಮಿಕೊಂಡದ್ದು ಮಕ್ಕಳ ರಂಗ ತರಬೇತಿ ಶಿಬಿರ. ಆ ಮೊದಲ ಶಿಬಿರಕ್ಕೆ ಶೋಭಾ ವೆಂಕಟೇಶ್ ಜೊತೆಗೆ ನಿಂತವರಲ್ಲಿ ಶ್ರೀಮತಿ ಗೌರಿ ದತ್ತು ಮತ್ತು ಎಸ್.ವಿ. ಸುಷ್ಮ, ಪ್ರಶಾಂತ್, ರಾಜ್ ಶೇಖರ್ ಮುಂತಾದವರು ಪ್ರಮುಖರು. ಆ ಮೊದಲ ಬೇಸಿಗೆ ಶಿಬಿರಕ್ಕೆ ಶ್ರೀಸಾಮಾನ್ಯರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತು. ಶಿಬಿರದಲ್ಲಿ ಮಕ್ಕಳು ನೀಡಿದ ಪ್ರದ೯ಶನ ಪ್ರೇಕ್ಷಕರ ಮನ ಗೆದ್ದಿತು. ಮಕ್ಕಳಲ್ಲಿ ರಂಗಭೂಮಿಯ ಪ್ರೀತಿ, ಆಸಕ್ತಿಗಳನ್ನು ಹೆಚ್ಚಿಸಿತು. ಅಲ್ಲದೆ ರಂಗಭೂಮಿಯಿಂದ ಮಕ್ಕಳ ಮನಸ್ಸಿನ ಮೇಲೆ ಆದ ಪರಿಣಾಮ ಸಕಾರಾತ್ಮಕವಾಗಿದ್ದುದ್ದನ್ನು ಪೋಷಕರು ಗಮನಿಸಿ ಈ ರಂಗಕ್ರಿಯೆ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು. ಹಾಗಾಗಿ ಪ್ರಾರಂಭವಾದದ್ದೇ ಮಕ್ಕಳ ರಂಗಶಾಲೆ.
ಮಕ್ಕಳ ರಂಗಶಾಲೆ
ಪ್ರತಿ ಶನಿವಾರ 4:30ಯಿಂದ 6:3೦ರವರೆಗೆ ತರಗತಿಗಳನ್ನು ಪ್ರಾರಂಭಿಸಲಾಯ್ತು. ಹಾಡು, ನಟನೆ, ಚಿತ್ರಕಲೆ, ಕ್ರಾಫ್ಟ್ ಮುಂತಾದವುಗಳ ತರಗತಿಗಳು ಶೋಭಾ ಮೇಡಂ ಅವರ ಮನೆಯಂಗಳದಲ್ಲಿಯೇ ಪ್ರಾರಂಭವಾಯ್ತು. ಹೀಗೆ ಮಕ್ಕಳ ರಂಗಶಾಲೆ ಅಸ್ತಿತ್ವಕ್ಕೆ ಬಂತು. ಜೂನ್
ಮೊದಲ ಶನಿವಾರದಿಂದ ಪ್ರಾರಂಭವಾಗಿ ಡಿಸೆಂಬರ್ ವರೆಗೂ 6 ತಿಂಗಳ ಕೋಸ್೯ ರೂಪಿಸಲಾಯ್ತು. ಡಿಸೆಂಬರ್ ಕೊನೆಯಲ್ಲಿ ವಿದ್ಯಾಥಿ೯ಗಳಿಂದಲೇ ಹೊಸದೊಂದು ನಾಟಕ ಪ್ರದಶ೯ನ ಹಮ್ಮಿಕೊಳ್ಳಲಾಗಿತ್ತು.
ಪ್ರಾರಂಭದಲ್ಲಿ ಪುಟ್ಟ ಮನೆಯಂಗಳದಲ್ಲಿ ಪ್ರಾರಂಭವಾದಾಗ ಮೊದಲ ವಷ೯ದ ಕೋಸ್೯ ಅನ್ನು ಉದ್ಘಾಟಿಸಿದವರು ಖ್ಯಾತ ಚಲನಚಿತ್ರ ನಿದೇ೯ಶಕರಾದ ಗಿರೀಶ್ ಕಾಸರವಳ್ಳಿ. ಮಕ್ಕಳ ಆ ಮುಗ್ಧಪ್ರೀತಿ, ಪೋಷಕರ ಪ್ರೀತಿಯ ಹಕ್ಕೊತ್ತಾಯ ಮತ್ತು ಸಾಹಿತಿ ಕಲಾವಿದರ ಬೆಂಬಲದಿಂದ ನಿರಂತರವಾಗಿ 24 ವಷ೯ಗಳನ್ನು ಸಾಥ೯ಕ ರಂಗ ಕಾಯಕ ಮಾಡುತ್ತಾ ಕ್ರಮಿಸಲು ವಿಜಯನಗರ ಬಿಂಬಕ್ಕೆ ಸಾಧ್ಯವಾಗಿದೆ.
ರಂಗ ತರಬೇತಿ ಕಾಯಾ೯ಗಾರ -ಚಿಣ್ಣರ ಚಾವಡಿ , ಚಿಣ್ಣರ ಚಿತ್ತಾರ
ಮಕ್ಕಳ ಮುಗ್ಧಮನಸ್ಸಿನ ಅರಳುವಿಕೆಗೆ ರಂಗಭೂಮಿ ಒಳ್ಳೆಯ ವಾತಾವರಣ ನೀಡಬಲ್ಲದು ಎಂದು ಮನಗಂಡ ಮೇಲೆ ಪ್ರಾರಂಭಿಕ ಹೆಜ್ಜೆಯಾಗಿ ವಿಜಯನಗರ ಬಿಂಬ ಮಾಡಿದ್ದುರಂಗ ತರಬೇತಿ ಕಾಯ೯ಗಾರ. ಈ ರಂಗ ತರಬೇತಿ ಕಾಯಾ೯ಗಾರ ರಂಗಭೂಮಿಗೆ ಮಾತ್ರ ಸೀಮಿತವಾಗಿಸದೆ ಬೇರೆ ಬೇರೆ ಸಮಾಜಮುಖಿಯಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದೆ, ಕಾರ್ಯಾಗಾರ ವಿವಿಧ ವಯೋಮಾನದ ಮಕ್ಕಳ ಮನಸ್ಸಿಗೆ ಅನುಗುಣವಾಗಿ ರೂಪಿಸಲಾಗಿದೆ. 3-8 ವಯೋಮಾನದ ಮಕ್ಕಳಿಗೆ ‘ಚಿಣ್ಣರ ಚಿತ್ತಾರ’. 8-14 ವಷ೯ದ ಮಕ್ಕಳಿಗೆ ‘ಚಿಣ್ಣರ ಚಾವಡಿ’. ಅಲ್ಲದೆ 16 ವಷ೯ದ ಮೇಲ್ಪಟ್ಟಿವರಿಗೆ ನಟನಾ ಶಿಬಿರ, ವಿಮರ್ಶೆ ಶಿಬಿರ, ಮುಂತಾದ 50ಕ್ಕೂ ಹೆಚ್ಚು ಕಾಯಾ೯ಗಾರಗಳನ್ನು ಈ 20 ವಷ೯ಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. ಕಾಯಾ೯ಗಾರದ ಮಕ್ಕಳಿಗೆ ರಂಗಭೂಮಿಯ ವಿವಿಧ ಆಯಾಮಗಳನ್ನೂ ಮತ್ತು ಸಾಹಿತ್ಯದ ವಿಷಯಗಳನ್ನು ತಿಳಿಹೇಳಲು ಹಿರಿಯರಾದ ಕೀ.ರಂ. ನಾಗರಾಜ್, ಬಿ.ವಿ. ರಾಜಾರಾಮ್ ಶ್ರೀನಿವಾಸ್ ಜಿ. ಕಪ್ಪಣ್ಣ, ಚೈತನ್ಯ ಮುಂತಾದವರು ಭಾಗವಹಿಸಿದ್ದರು.
‘ಬೊಂಬೆ ಹಬ್ಬ’ ಕಿರುನಾಟಕೋತ್ಸವ –
ರಂಗಭೂಮಿಯ ವಿಸ್ತಾರದ ಅರಿವು ಮಕ್ಕಳಿಗೆ ಮೂಡಿಸಲು ಹಮ್ಮಿಕೊಳ್ಳುವ ಕಾಯ್ರಕ್ರಮವೇ ಬೊಂಬೆ ಹಬ್ಬ. ಈ ಕಿರು ನಾಟಕೋತ್ಸವದಲ್ಲಿ ಮಕ್ಕಳು ತಾವೇ ನಾಟಕ ರಚಿಸಿ, ನಿದೇ೯ಶಿಸಿ ರಂಗ ಸಜ್ಜಕೆ , ತಾವೇ ಅನುವು ಮಾಡಿಕೊ೦ಡು, ಪ್ರಚಾರವನ್ನು ತಾವೇ ಮಾಡಿ, ಮುಖ್ಯ ಅತಿಥಿಗಳನ್ನು ಆಹ್ವಾನಿಸಿ, ಹೀಗೆ ಎಲ್ಲವನ್ನು ತಾವೇ ಆಯೋಜಿಸುತ್ತಾರೆ. ನಾಟಕ ರಚನೆಯ ಸೂಕ್ಷ್ಮಗಳನ್ನು ಹಿರಿಯದೊಂದಿಗೆ ಚಚಿ೯ಸಿ ಒನ್ ಲೈನ್ , ದಶ್ಯ ಜೋಡಣೆ, ಹೀಗೆ ಬೇರೆ ಬೇರೆ ಹಂತದಲ್ಲಿ ನಾಟಕ ರಚನೆಯನ್ನು ಮಕ್ಕಳೆ ಮಾಡುತ್ತಾರೆ. ನಾಟಕ ತಯಾರಾದ ನಂತರ ತಮ್ಮ ತಂಡದವರ ಜೊತೆ ಚಚಿ೯ಸಿ ತಾಲೀಮಿನ ವೇಳಾಪಟ್ಟಿ ತಯಾರಿಸಿ ಅದಕ್ಕೆ ತಕ್ಕಂತೆ ಹಾಲ್ ಬುಕ್ ಮಾಡಿ , ತಮ್ಮ ತಂಡದ ನಾಟಕವನ್ನು ಕಟ್ಟುತ್ತಾರೆ. ಜೊತೆ ಜೊತೆಗೆ ತಮ್ಮ ನಾಟಕದ ಪ್ರದಶ೯ನದಂದು ಮುಖ್ಯ ಅತಿಥಿಯನ್ನು ಆಹಾನಿಸುತ್ತಾರೆ. ಬಂದ ಪ್ರೇಕ್ಷಕರಿಗೆ ಅತಿಥಿಗಳನ್ನು ಪರಿಚಯಿಸುವ ಹೊಣೆಯನ್ನು ಹೊರುತ್ತಾರೆ. ಹೀಗೆ ನಾಟಕಕಾರ, ನಿದೇ೯ಶಕ ಮತ್ತುರಂಗೆ ಸoಘಟಕರ ಜವಾಬ್ದಾರಿಯನ್ನು ಅರಿತು ನಡೆಯುತ್ತಾರೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೇ ಎಲ್ಲೂ ಮಕ್ಕಳೇ ಆಯೋಜಿಸುವಂತಹ ಈ ರೀತಿಯ ನಾಟಕೋತ್ಸವ ನಡೆಯುವುದಿಲ್ಲ.
ಪ್ರದರ್ಶನಗಳು : ಕಳೆದ 20 ವಷ೯ಗಳಲ್ಲಿ 30ಕ್ಕೂ ಹೆಚ್ಚು ಹೊಸ ರಂಗ ಪ್ರಯೋಗಗಳನ್ನು ಮತ್ತು ಅವುಗಳ ಹಲವಾರು ಮರು ಪ್ರದಶ೯ನಗಳನ್ನು ರಂಗಕ್ಕೆ ಇತ್ತಿದೆಪ್ರಸ್ತುತ ಸಮಸ್ಯೆಗಳ ಬಗ್ಗೆ ಚಿಂತಿಸುವ, ಸಮಕಾಲೀನ ವಿದ್ಯಮಾನಗಳ ಬಗ್ಗೆ ಟೀಕಿಸುವ, ಯೋಚಿಸುವಂಥ ನಾಟಕ ರಂಗ ಪ್ರಯೋಗಗಳನ್ನು, ಬ್ಯಾಲೆಗಳನ್ನು, ಬೀದಿ ನಾಟಕಗಳನ್ನು, ಕಿರು ನಾಟಕಗಳನ್ನು ವಿಜಯನಗರ ಬಿಂಬ ಆಡುತ್ತಾ, ಆಡಿಸುತ್ತಾ ಬಂದಿದೆ.