ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇವರ ಜಂಟಿ ಆಶ್ರಯದಲ್ಲಿ 118ನೇಯ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 06 ಏಪ್ರಿಲ್ 2026ರಂದು ಮಧ್ಯಾಹ್ನ ಗಂಟೆ 1-30ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಪ್ರೊಫೆಸರ್ ಗೋಪಾಲಕೃಷ್ಣ ಕೆ. ಇವರು ವಹಿಸಲಿದ್ದು, ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಬಂಟ್ವಾಳದ ಎಸ್.ವಿ.ಎಸ್. ಟೆಂಪಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಕೆ.ಎನ್ .ಗಂಗಾಧರ ಆಳ್ವ, ಮಂಗಳೂರಿನ ಶಾರದಾ ಪಿ.ಯು. ಕಾಲೇಜ್ ಉಪ ಪ್ರಾಂಶುಪಾಲರಾದ ಶ್ರೀಮತಿ ಅರುಣ ಕುಮಾರಿ ಕೆ. ಮತ್ತು ವಿಜಯ ಕರ್ನಾಟಕ ದೈನಿಕ ಪತ್ರಿಕೆ ಪ್ರಧಾನ ವರದಿಗಾರರಾದ ಮುಹಮ್ಮದ್ ಆರಿಫ್ ಪಡುಬಿದ್ರಿ ಇವರುಗಳು ಭಾಗವಹಿಸುವರು. ನಿವೃತ್ತ ಪ್ರಶಸ್ತಿ ವಿಜೇತ ಶಿಕ್ಷಕಿ ಸುಧಾ ನಾಗೇಶ್, ಕನ್ನಡ ಉಪನ್ಯಾಸಕಿ ವಿಜಯಲಕ್ಷ್ಮಿ ಉಪಸ್ಥಿತರಿರುವರು ಎಂದು ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ತಿಳಿಸಿದ್ದಾರೆ.

