ಬೆಳ್ತಂಗಡಿ : ಕಲಾದೀಪ ದಂಪತಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾರವರ ಸಂಪೂರ್ಣ ರಾಮಾಯಣ ನೃತ್ಯ ಸಪ್ತಾಹದ ಐದನೆಯ ದಿನದ ಕಾರ್ಯಕ್ರಮ ಕೊಕ್ಕಡದ ಡಾ. ಮೋಹನ್ ದಾಸ್ ಗೌಡರ ಸ್ವಗೃಹದಲ್ಲಿ ದಿನಾಂಕ 30 ಮಾರ್ಚ್ 2026ರಂದು ನಡೆಯಿತು.
ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ. ತಾರಾ ಗಣೇಶ್ ಮಾಡಿದರು. ಹಾಗೆಯೇ ಓಂಕಾರ ನಾದ ಡಾ. ಬಿ. ಮೋಹನದಾಸ್ ಗೌಡ, ಶಂಖನಾದ ಧೃತಿ, ಪ್ರಾರ್ಥನೆಯನ್ನು ಶ್ರಾವ್ಯ ಜಿ.ಎಸ್., ಧೃತಿ ಟಿ.ಜಿ. ಹಾಗೂ ಹೃದ್ಯ ಟಿ.ಜಿ. ಇವರು ನೆರವೇರಿಸಿದರು. ಡಾ. ಬಿ. ಮೋಹನದಾಸ್ ಗೌಡರು ದೀಪ ಬೆಳಗಿಸಿ ಉದ್ಘಾಟನೆಗೈದರು. ಹಾಗೆಯೇ ಕಲಾವಿದರ ಪರಿಚಯವನ್ನು ಹರ್ಷಿತಾ ಕುಶಾಲಪ್ಪ, ಪಂಚಾಂಗ ಪಠಣ ಕುಮಾರಿ ಧೃತಿ ನೆರವೇರಿಸಿದರು.


ನಂತರ ಕಲಾದೀಪ ದಂಪತಿಗಳಿಂದ ಸುಮಾರು 70 ನಿಮಿಷಗಳ ಸುದೀರ್ಘ ರಾಮಾಯಣ ನೃತ್ಯ ರೂಪದಲ್ಲಿ ಭಾವಪೂರ್ಣವಾಗಿ ಪ್ರಸ್ತುತಗೊಂಡಿತು. ಕೊನೆಯಲ್ಲಿ ಪ್ರೇಕ್ಷಕರ ಪರವಾಗಿ ಶ್ರೀಮತಿ ಸುಪರ್ಣ ಮತ್ತು ಶ್ರೀಮತಿ ಪದ್ಮಶ್ರೀ ಅಲ್ಲದೆ ಮಕ್ಕಳ ಪರವಾಗಿ ಕುಮಾರಿ ಚಿರಂತನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಂದನಾರ್ಪಣೆಯನ್ನು ಕುಮಾರಿ ಶ್ರಾವ್ಯ ಜಿ.ಎಸ್. ಇವರು ಗೈದರು.


