ಮೈಸೂರು : ಸಿರಿಗನ್ನಡ ಸೇವಾ ಟ್ರಸ್ಟ್ (ನೋಂ) ಕರ್ನಾಟಕ ಇದರ 3ನೇ ವಾರ್ಷಿಕೋತ್ಸವ ಹಾಗೂ ಸಿರಿ ಸನ್ಮಾನ -2026 ಸಮಾರಂಭವನ್ನು ದಿನಾಂಕ 09 ಆಗಸ್ಟ್ 2026 ಮೈಸೂರು ಮೂಡಾ ಆಫೀಸ್ ಮುಂಭಾಗ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಡಾ. ಸಿದ್ಧ ಣ್ಣ ಬಾಡಗಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರದ ಗಣನೀಯ ಗಣ್ಯ ಸಾಧಕರಿಗೆ ‘ಗಾನ ಸಿರಿ’, ‘ಸಾಹಿತ್ಯ ಸಿರಿ’, ‘ಸಂಗೀತ ಸಿರಿ’, ‘ಕಲಾ ಸಿರಿ’, ‘ಕೌಶಲ್ಯ ಸಿರಿ’, ‘ಶಿಕ್ಷಕ ಸಿರಿ’, ‘ಸರ್ವೋತ್ತಮ ಸೇವಾ ಸಿರಿ’, ‘ನಾಟ್ಯ ಸಿರಿ’, ‘ವಿದ್ಯಾರ್ಥಿ ಸಿರಿ’, ಭಾರತ ಸೇವಾ ರತ್ನ ಮತ್ತು ವಿದ್ಯಾಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.

