ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಪಾಕ್ಷಿಕ ಸಮೂಹ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ 15ರ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2026ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ನಾಟ್ಯಾಂಜಲಿ ಕಲಾಸಂಗಮ ತಂಡದ ಕಲಾವಿದರಿಂದ ವಿದುಷಿ ಅಮೃತ ಶೆಟ್ಟಿ ಇವರ ನಿರ್ದೇಶನದಲ್ಲಿ ನೃತ್ಯಪ್ರದರ್ಶನ ನಡೆಯಲಿದೆ.

