ಮಂಡ್ಯ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಗಮ್ಯ (ರಿ.) ಶ್ರೀರಂಗಪಟ್ಟಣ ಇವರ ಸಹಯೋಗದಲ್ಲಿ ‘ಜಿಲ್ಲಾ ನಾಟಕೋತ್ಸವ’ವನ್ನು ದಿನಾಂಕ 09 ಆಗಸ್ಟ್ 2026ರಂದು ಸಂಜೆ 5-00 ಗಂಟೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ಕುಂತಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿಗಳಾದ ಡಾ. ಡಿ. ಗುರುಮೂರ್ತಿ ಹಾರೋಹಳ್ಳಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಗಮ್ಯ (ರಿ.) ಇದರ ಅಧ್ಯಕ್ಷರಾದ ನಾರಾಯಣ ಸ್ವಾಮಿ ಸಿ. ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀರಂಗ ಪಟ್ಟಣದ ಸಂಗೀತ ಸಂಚಯ ಇವರಿಂದ ರಂಗಗೀತೆಗಳ ಪ್ರಸ್ತುತಿ ಮತ್ತು 7-30 ಗಂಟೆಗೆ ಪಾಂಡವಪುರ ಕುವೆಂಪು ಕಲಾ ಸಂಘದವರಿಂದ ನಾರಾಯಣ ಸ್ವಾಮಿ ಸಿ. ಇವರ ನಿರ್ದೇಶನದಲ್ಲಿ ‘ಬಕ’ ನಾಟಕ ಪ್ರದರ್ಶನ ನಡೆಯಲಿದೆ.

