ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 22 ಫೆಬ್ರವರಿ 2026ರಂದು ಬೆಳಗ್ಗೆ 7-00 ಗಂಟೆಯಿಂದ ಕನ್ನಡ ಭವನದ ಬಯಲು ರಂಗಮಂದಿರದಲ್ಲಿ ಕಾಸರಗೋಡು- ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಚುಟುಕು ಯುವ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಬಹುದು. ಈ ವಿಭಾಗದಲ್ಲಿ ಭಾಗವಹಿಸುವವರು 18 ವರ್ಷಕ್ಕಿಂತ ಕೆಳಗಿನವರಾಗಿರಬೇಕು. ಒಬ್ಬರಿಗೆ ಮೂರು ಚುಟುಕು ವಾಚನಕ್ಕೆ ಅವಕಾಶ ಇದೆ. ಕವಿಗಳಿಗೆ ಮುಕ್ತ ಅವಕಾಶವಿದ್ದು ಆಸಕ್ತರು ತಮ್ಮ ಹೆಸರನ್ನು ವಿರಾಜ್ ಅಡೂರು : 9447490344ರಲ್ಲಿ ನೊಂದಾಯಿಸಬೇಕಾಗಿ ಸಂಸ್ಥೆಯ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

