Subscribe to Updates

    Get the latest creative news from FooBar about art, design and business.

    What's Hot

    ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    February 10, 2026

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’

    February 10, 2026

    ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ

    February 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಪುಸ್ತಕ ಬಿಡುಗಡೆ
    Book Release

    ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಪುಸ್ತಕ ಬಿಡುಗಡೆ

    February 10, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿ ಇದರ ವತಿಯಿಂದ ದಿನಾಂಕ 08 ಫೆಬ್ರವರಿ 2026ರಂದು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಎಂಬ ಪುಸ್ತಕ ಬಿಡುಗಡೆಗೊಂಡಿತು.

    ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಪುನರೂರು ಇವರು ಬಿಡುಗಡೆಗೊಳಿಸಿ ಮಾತನಾಡಿ “ಇಂದು ಎಷ್ಟೋ ಕಲಾವಿದರು ಅಸಾಮಾನ್ಯ ಪ್ರತಿಭೆಯಿದ್ದರೂ ಮಾಸಿ ಹೋಗುತ್ತಿದ್ದಾರೆ. ಅವರ ಸಾಧನೆ, ವಿಭಿನ್ನ ದೃಷ್ಟಿಯ ವೇಷಗಾರಿಕೆ, ಕಲಾ ವಲಯಕ್ಕೆ ಅವರದ್ದೇ ಆದ ಕೊಡುಗೆಗಳು ಗುರುತಿಸಲ್ಪಡಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಅದಕ್ಕೆ ಅನೇಕ ಆಯಾಮಗಳಿವೆ. ರವಿಯವರು ಅಳಿದ ಶ್ರೇಷ್ಠ ಕಲಾವಿದ ಸವ್ಯಸಾಚಿ ಪಿ.ವಿ. ಪರಮೇಶರ ಜೀವನಗಾಥೆಯನ್ನು ಪುಸ್ತಕದ ದಾಖಲೆಯಲ್ಲಿ ಮೂಡಿಸಿದ್ದಾರೆ. ವಾಸುದೇವ ಐತಾಳರ ಆರ್ಥಿಕ ಬೆಂಬಲದಿಂದ ಪ್ರಕಟಗೊಂಡ ಈ ಪುಸ್ತಕದಂತೆಯೇ ಎಲೆಮರೆಯ ಕಲಾವಿದರ ಕೃತಿಗಳೂ ಬರಲಿ” ಎಂದು ಹೇಳಿದರು.

    ಡಾ. ಎಂ. ಪ್ರಭಾಕರ ಜೋಷಿಯವರು “ಕಲಾ ವಲಯದಲ್ಲಿ ಪರಮೇಶರಿಗಿದ್ದ ಕೌಶಲತೆಯು ಅದ್ಭುತವಾದುದು. ಯಕ್ಷ ರಂಗದ ಪರಿಪೂರ್ಣ ಪರಿಚಯ, ಪ್ರಸಾದನಾ ವೇಗ, ಪೇಟಗಳ ರಚನೆ, ಬೇರೆ ಬೇರೆ ರಂಗಗಳ ದುಡಿಮೆ – ಎಲ್ಲವೂ ಮಿಳಿತವಾಗಿದ್ದ ಸರ್ವಾಂಗ ಸುಂದರ ಕಲಾವಿದ. ಪುಸ್ತಕದಿಂದಾಗಿ ದಾಖಲೆ ಆಯಿತು” ಎಂದು ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.

    ಶ್ರೀಮತಿ ಶೈಲಶ್ರೀ ನಂದಗೋಪಾಲ್ ಪ್ರಾರ್ಥಿಸಿದರು. ಶಶಿಧರ ಐತಾಳರು ಸ್ವಾಗತ – ಪರಿಚಯ ಮಾಡಿದರು. ಕಲಾ ಪೋಷಕ ಪಣಂಬೂರು ವಾಸುದೇವ ಐತಾಳರು ಪ್ರಸ್ತಾಪಿಸುತ್ತಾ, ‘ಯಕ್ಷ ಪರಮೇಶ’ ಕೃತಿಯ ಅಗತ್ಯತೆಯ ಬಗ್ಗೆ ಹೇಳಿದರು. ಹಿರಿಯ ಯಕ್ಷಗಾನ ಕಲಾವಿದ ಸೇರಾಜೆ ಜಿ.ಕೆ. ಭಟ್ ರವರು ಪಿ.ವಿ. ಪರಮೇಶರ ಸಂಸ್ಮರಣೆ ಮಾಡಿದರು. ರವಿಯವರು ಕೃತಿ ಪರಿಚಯ ಮಾಡಿದರು. ನಂದನೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಶೀಧರ ಪಿ.ಎಸ್., ನಿಕಟಪೂರ್ವ ಅಧ್ಯಕ್ಷ ಪಿ. ಅನಂತ ಐತಾಳ್, ಶ್ರೀಮತಿ ರಾಜಶ್ರೀ ಪರಮೇಶ್, ಎಚ್.ವಿ. ವೆಂಕಟ್ರಾವ್, ರಮಾ ವೆಂಕಟ್ರಾವ್ ಉಪಸ್ಥಿತರಿದ್ದರು. ಕೃತಿಕಾರ ವರ್ಕಾಡಿ ರವಿ ಅಲೆವೂರಾಯರನ್ನು ಗೌರವಿಸಲಾಯಿತು. ಕಲಾವಿದ, ಸಂಘಟಕ ಮಧುಕರ ಭಾಗವತರು ನಿರ್ವಹಿಸಿದರೆ, ಹರೀಶ್ ಹೆಬ್ಬಾರರು ಧನ್ಯವಾದವಿತ್ತರು. ಬಳಿಕ ಶ್ರೀ ನಂದನೇಶ್ವರ ಮಿತ್ರ ಮಂಡಳಿಯವರಿಂದ ಬಯಲಾಟ ಜರಗಿತು.

    baikady Book release Literature roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleನಾದನೃತ್ಯ ಕಲಾಶಾಲೆಯಲ್ಲಿ ‘ಪರೀಕ್ಷಾ ಪೆ ಚರ್ಚಾ’ ಪ್ರೇರಿತ ‘ಗೊಂಬೆ ಲಲಿತಜ್ಜಿಯ ಕತೆ-ಹರಟೆ’
    Next Article ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ
    roovari

    Add Comment Cancel Reply


    Related Posts

    ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    February 10, 2026

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’

    February 10, 2026

    ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ

    February 10, 2026

    ಸನಾತನ ನೃತ್ಯಾಲಯದ ಶಾರದಾಮಣಿಗೆ ‘ನಾಟ್ಯಶ್ರೀ’ ಪ್ರಶಸ್ತಿ

    February 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.