Subscribe to Updates

    Get the latest creative news from FooBar about art, design and business.

    What's Hot

    ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    February 10, 2026

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’

    February 10, 2026

    ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ

    February 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ
    Book Release

    ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ

    February 10, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಲ್ಕಿ : ಕಿಲ್ಪಾಡಿಯ ಆದಿ ಕಿಲ್ಲಾಡಿ ಬಬ್ಬುಸ್ವಾಮಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಮತ್ತು ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕವಿ ಹಾಗೂ ಲೇಖಕ ಶಂಕರ್ ಪಡಂಗ ಕಿಲ್ಪಾಡಿಯವರ ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯು ದಿನಾಂಕ 08 ಫೆಬ್ರವರಿ 2026ರಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ನಡಿಕುದ್ರು ವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಮಕ್ಕಳಲ್ಲಿ ಮೊಬೈಲ್ ಬಂದ ನಂತರ ಓದುವ ಹವ್ಯಾಸ ಕಡಿಮೆಯಾಗಿದೆ, ಕನ್ನಡಮ್ಮನ ಸೇವೆ ಮಾಡುವ ಮೂಲಕ ಮಾತೃಭಾಷೆಗೆ ಪ್ರೋತ್ಸಾಹ ನೀಡಬೇಕು ಕನ್ನಡ ಉಳಿಸಿ ಬೆಳೆಸಬೇಕು” ಎಂದರು.

    ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ ಭಟ್ ಪರೆಂಕಿಲ ಆಶೀರ್ವಚನ ನೀಡಿದರು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿಯವರು ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ದ.ಕ. ಜಿಲ್ಲಾ ಕ.ಸಾ.ಪ. ಮುಲ್ಕಿ ತಾಲೂಕು ಘಟಕದ ಅಧ್ಯಕ್ಷ ಮಿಥುನ್ ಕೊಡೆತ್ತೂರು ಮಾತನಾಡಿ “ಮಾರ್ಚ್ 1ರಂದು ಕಟೀಲಿನಲ್ಲಿ ಮುಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕವಿಗಳಿಗೆ ಮುಕ್ತ ಅವಕಾಶವಿದೆ. ಪುಸ್ತಕಗಳನ್ನು ಕೊಂಡು ಓದಿ” ಎಂದರು.

    ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಿರೀಶ್, ಮುಲ್ಕಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಮುಲ್ಕಿ ನ. ಪಂ. ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಮಾಜೀ ಸದಸ್ಯ ಪುತ್ತು ಬಾವ, ಬಬ್ಬುಸ್ವಾಮಿ ಯುವಕ ಮಂಡಲದ ಅಧ್ಯಕ್ಷ ರಂಜನ್ ಬಿ. ಶೆಟ್ಟಿ, ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ವಸಂತ ವಿ.ಎಸ್., ಬಬ್ಬುಸ್ವಾಮಿ ಮಹಿಳಾ ಮಂಡಲದ ಅಧ್ಯಕ್ಷೆ ಭಾರತಿ ವಿ. ಪೂಜಾರಿ, ಕವಿ ಹಾಗೂ ಲೇಖಕ ಶಂಕರ್ ಪಡಂಗ ಉಪಸ್ಥಿತರಿದ್ದರು. ಗೋಪಿನಾಥ ಪಡಂಗ ಸ್ವಾಗತಿಸಿ, ಕವಿ ಪ್ರೇಮಾ ಆರ್. ಶೆಟ್ಟಿ ಧನ್ಯವಾದ ಅರ್ಪಿಸಿ, ಚಿದಾನಂದ ಕೊಲಕಾಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕವನ ಸಂಕಲನ ಪ್ರಕಟಣೆಗೆ ಸಹಕಾರ ನೀಡಿದ ಕವಿ ಹಾಗೂ ಲೇಖಕರಾದ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಅಶೋಕ್ ಸುವರ್ಣ, ಪ್ರೇಮಾ ಶೆಟ್ಟಿಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಮೊದಲು ವಿವಿಧ ಕವಿಗಳಿಂದ ಕವಿಗೋಷ್ಠಿ ನಡೆಯಿತು.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಪುಸ್ತಕ ಬಿಡುಗಡೆ
    Next Article ಸನಾತನ ನೃತ್ಯಾಲಯದ ಶಾರದಾಮಣಿಗೆ ‘ನಾಟ್ಯಶ್ರೀ’ ಪ್ರಶಸ್ತಿ
    roovari

    Add Comment Cancel Reply


    Related Posts

    ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    February 10, 2026

    ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಂಕಣಿ ಸಂಭ್ರಮ್’

    February 10, 2026

    ಶತಾವಧಾನಿ ಡಾ‌. ಆರ್. ಗಣೇಶ್ ಇವರಿಂದ ವಿಶೇಷ ಉಪನ್ಯಾಸ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ

    February 10, 2026

    ಸನಾತನ ನೃತ್ಯಾಲಯದ ಶಾರದಾಮಣಿಗೆ ‘ನಾಟ್ಯಶ್ರೀ’ ಪ್ರಶಸ್ತಿ

    February 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.