ಶಿರೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 08 ಫೆಬ್ರವರಿ 2026ರಂದು ಶಿರೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಕೊಂಕಣಿ ಸಂಭ್ರಮ್’ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಆಚಾರ್ ಇವರು ಉದ್ಘಾಟಿಸಿ “ಕೊಂಕಣಿ ಭಾಷಾಭಿಮಾನದೊಂದಿಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳಗಿಸುವುದರಲ್ಲಿ ಕೊಂಕಣಿಗರು ಒಂದಾಗಿ ಸಾಮರಸ್ಯದಿಂದ ಬಾಳಿರಿ” ಎಂದು ಶುಭ ಹಾರೈಸಿದರು.
ಸಭಾ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ಸ್ವಾಗತಿಸಿ ಕೊಂಕಣಿ ಭಾಷೆಯನ್ನು ಮನೆಮನೆಗಳಲ್ಲಿ ಮಾತಾಡುವ ಮುಖಾಂತರ ಎಲ್ಲರೂ ಸಮಾನತೆಯ ಭಾವನೆಯನ್ನು ಹೊಂದಿ ಅಕಾಡೆಮಿ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾಮ ಪಂಚಾಯತ್ ಸದಸ್ಯರಾದ ಶಂಕರ ಡಿ. ಮೇಸ್ತ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಕಾಪ್ಸಿ ನೂರು ಮಹಮದ್, ಪೇಚೆ ಶ್ರೀ ವೆಂಕಟರಮಣ ದೇವಸ್ಥಾನ ಶಿರೂರು ಪದಾಧಿಕಾರಿಗಳು ಶ್ರೀ ಪ್ರಸಾದ ಪ್ರಭು, ಶಿರೂರು ದೈವಜ್ಞ ಬ್ರಾಹ್ಮಣ ಸಮಾಜ ಸದಸ್ಯರಾದ ಶ್ರೀ ಮೋಹನ್ ರೇವಣ್ಕರ್, ಹಡವಿನ ಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಕಚ್ಚಿ ಮೊಹಮ್ಮದ್ ಮುಸ್ತಾಕ್, ಶಿರೂರು ಉದ್ಯಮಿ ಶ್ರೀ ಬಾಬುರಾವ್ ಕಾಮತ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಶ್ರೀ ಮಾಮ್ದು ಯಾಕೂಬ್, ಹೊಸೂರು ಮರಾಠಿ ಸಂಘದ ಸಂಚಾಲಕರಾದ ಶ್ರೀ ನಾಗಪ್ಪ ಮರಾಠಿ ಉಪಸ್ಥಿತರಿದ್ದರು.

ವಿವಿಧ ಕೊಂಕಣಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀ ರಮಾನಾಥ ಮೇಸ್ತ ಶಿರೂರು, ಶ್ರೀಕಾಂತ್ ಕಾಮತ್ ಶಿರೂರು, ಶ್ರೀ ಭಾತ್ಯ ಮೀರಾ ಇವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಾಗಿ ಶ್ರೀ ನಾಗೇಂದ್ರ ಕಾಮತ್ ಶಿರೂರು ಮತ್ತು ಸೌಂದಳೆ ಜುನೇದ್ ಶಿರೂರು ಇವರನ್ನು ಅಭಿನಂದಿಸಲಾಯಿತು. ಶ್ರೀ ರಮಾನಾಥ ಮೇಸ್ತ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸಂಚಾಲಕ ಸದಸ್ಯರಾದ ಮಾಮ್ದು ಇಬ್ರಾಹಿಂ ಧನ್ಯವಾದವಿತ್ತರು. ಶಿರೂರಿನ ಕೊಂಕಣಿ ಭಾಷಿಕರ ಪರವಾಗಿ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಹಾಗೂ ಸಂಚಾಲಕ ಸದಸ್ಯರಾದ ಶ್ರೀ ಮಾಮ್ದು ಇಬ್ರಾಹಿಂ ಇವರನ್ನು ಅಭಿನಂದಿಸಲಾಯಿತು. ಕೊಂಕಣಿ ಮಾತನಾಡುವ ಶಿರೂರಿನ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಕಾಡೆಮಿಯ ಸದಸ್ಯರಾದ ಶ್ರೀ ನವೀನ್ ಲೋಬೊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

