ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 13, 14, 21 ಮತ್ತು 22 ಫೆಬ್ರುವರಿ 2026ರಂದು (ಶನಿವಾರ ಮತ್ತು ಭಾನುವಾರ) ಸಂಜೆ 8-00 ಗಂಟೆಯಿಂದ 9-15ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ವಿದುಷಿ ಲಕ್ಷ್ಮೀ ನಾಗರಾಜ್ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ವಿವಿಧ ಸಂಯೋಜಕರ ದಾಸರ ಪದಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

