Subscribe to Updates

    Get the latest creative news from FooBar about art, design and business.

    What's Hot

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026

    ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಗಾನ ಕೇಂದ್ರದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’
    Yakshagana

    ಯಕ್ಷಗಾನ ಕೇಂದ್ರದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’

    February 14, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ದೊಂದಿ (ಪಂಜು) ಬೆಳಕಿನ ಯಕ್ಷಗಾನವು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆ. ಇದು ಆಧುನಿಕ ವಿದ್ಯುತ್ ದೀಪಗಳಿಲ್ಲದೆ ಕೇವಲ ಪಂಜಿನ ಬೆಳಕಿನಲ್ಲಿ ನಡೆಯುವ ಅಪರೂಪದ ಪ್ರದರ್ಶನ. ಇಂತಹ ಪ್ರದರ್ಶನವು ಮಾಹೆಯ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾದ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ದಿನಾಂಕ 06 ಫೆಬ್ರವರಿ 2026ರಂದು ಮಾಸಿಕ ಕಾರ್ಯಕ್ರಮದ ಅಂಗವಾಗಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಚಕ್ರವ್ಯೂಹ’ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

    ಕೇಂದ್ರದ ಗುರುಗಳ ಮುತುವರ್ಜಿಯಿಂದ ಅದ್ಭುತವಾಗಿ ಮೂಡಿಬಂತು. ಭಾಗವತರ ರಾಗಭರಿತ ಗಾಯನ, ಚಂಡೆ ಮದ್ದಲೆಗಳ ಘೋಷದಿಂದ ರಂಗಭೂಮಿ ಜೀವಂತವಾಯಿತು. ಪಾತ್ರಧಾರಿ ವಿದ್ಯಾರ್ಥಿಗಳು ಅದ್ಭುತ ವೇಷಭೂಷಣ, ಮುಖವರ್ಣಿಕೆ ಮತ್ತು ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ಭಾಗವತರಾಗಿ ಗೋಪಾಡಿ ಉಮೇಶ್ ಸುವರ್ಣ, ಚಂಡೆಯಲ್ಲಿ ಕೃಷ್ಣಮೂರ್ತಿ ಭಟ್ ಬಗ್ವಾಡಿ, ಮದ್ದಳೆಯಲ್ಲಿ ಬಸವ ಮರಕಾಲ ಮುಂಡಾಡಿ ಸಹಕರಿಸಿದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಸುರೇಶ್ ಮರಕಾಲ ಮುಂಡಾಡಿ ದೊಂದಿ ಬೆಳಕನ್ನು ಆಯೋಜಿಸಿದರು. ಕೇಂದ್ರದ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಒಟ್ಟಿನಲ್ಲಿ ದೊಂದಿ ಬೆಳಕಿನ ಯಕ್ಷಗಾನ ಪ್ರಸಂಗವು ಯಶಸ್ವಿಯಾಗಿ ನೆರವೇರಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀ ಮಂಜುನಾಥ ಮಯ್ಯ, ಶ್ರೀ ವಿ.ಜಿ. ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ‘ದ್ವಿದಿನ ಸಂಕೀರ್ತನಾ ಆರಾಧನೋತ್ಸವ’
    Next Article ಬೆಂಗಳೂರು ವಿ.ವಿ.ಯಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ | ಫೆಬ್ರವರಿ 15
    roovari

    Add Comment Cancel Reply


    Related Posts

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026

    ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

    February 14, 2026

    ಬೆಂಗಳೂರು ವಿ.ವಿ.ಯಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ | ಫೆಬ್ರವರಿ 15

    February 14, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.