ಕಾಸರಗೋಡು : ತುಲುವೆರೆ ಜಾಲ್ ಕಣ್ವತೀರ್ಥ ಇದರ ಆಶ್ರಯದಲ್ಲಿ ತುಳುನಾಡ ಮಕ್ಕಳ ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವಾ ಕೂಟ ಹಾಗೂ ಶ್ರೀ ಮಾತಾ ಕಲಾ ಮಂದಿರ ವೈಶಾಲಿ ಕುಂಜತ್ತೂರು ತೂಮಿನಾಡು ಇವರ ಸಹಯೋಗದಲ್ಲಿ ‘ಮಕ್ಕಳ ಬಹುಭಾಷಾ ಕವಿಗೋಷ್ಠಿ’ ಮತ್ತು ‘ಕವಿತೆ ಹುಟ್ಟುವ ಗುಟ್ಟು’ ಕಾರ್ಯಾಗಾರವನ್ನು ದಿನಾಂಕ 22 ಫೆಬ್ರವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ವೈಶಾಲಿ ತೂಮಿನಾಡು ಶ್ರೀ ಮಾತಾ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
16 ವರ್ಷದ ಒಳಗಿನ ಮಕ್ಕಳಿಂದ ‘ಬಹುಭಾಷಾ ಕವಿಗೋಷ್ಠಿ’ ನಡೆಯಲಿದ್ದು, ಜಿಲ್ಲಾ ಮಟ್ಟದ ಪ್ರತಿಭೆ ಕುಮಾರಿ ರಶ್ಮಿತಾ ಕುಲಾಲ್ ಇವರು ಅಧ್ಯಕ್ಷತೆ ವಹಿಸಲಿರುವರು. ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಇವರು ಕಾರ್ಯಾಗಾರ ನಡೆಸಿಕೊಡಲಿದ್ದು, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಿಕಾ ಶುಭಾಶಂಸನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ಅಂಗನವಾಡಿ ಜೋಕ್ಲೆನ ಪದ ಪಂತೊ ಇದರ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.

