ಬೆಂಗಳೂರು : ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್, ಬೆಂಗಳೂರು ಲೀಜನ್ ಇವರ ವತಿಯಿಂದ ದಿನಾಂಕ 07 ಮತ್ತು 08 ಮಾರ್ಚ್ 2026ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ವಿಜಯೋತ್ಸವ 2026 ಸಂಬಂಧ ಉದಯೋನ್ಮುಖ ಕವಿ-ಕವಯತ್ರಿಯರಿಗೆ ಕವನ ಸ್ಪರ್ಧೆ ಏರ್ಪಡಿಸಿದೆ.
‘ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆ’ ಕುರಿತು 16 ಸಾಲುಗಳಿಗೆ ಮೀರದಂತೆ ಒಂದು ಕವನವನ್ನು ರಚಿಸಿ ಸ್ಪರ್ಧೆಗೆ ಕಳುಹಿಸಿಕೊಡಬಹುದಾಗಿದೆ. ಪ್ರಥಮ ಬಹುಮಾನ ರೂ.3000/-, ದ್ವಿತೀಯ ಬಹುಮಾನ ರೂ.2000/-, ತೃತೀಯ ಬಹುಮಾನ ರೂ.1000/- ಆಗಿದ್ದು, ಆಸಕ್ತರು ತಮ್ಮ ಕವನವನ್ನು ಸಿ.ಎಸ್. ಚಂದ್ರಶೇಖರ್, ಅಧ್ಯಕ್ಷರು, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, 114, 4ನೇ ಮೇನ್, ಗಿರಿಧಾಮ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು 560098 ಈ ವಿಳಾಸಕ್ಕೆ ದಿನಾಂಕ 28 ಫೆಬ್ರವರಿ 2026ರೊಳಗೆ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಕಳುಹಿಸಬೇಕು. ದಿನಾಂಕ 07 ಮಾರ್ಚ್ 2026ರಂದು ಬಂಟರ ಸಂಘ, ಅತ್ತಿಗುಪ್ಪೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು.
