Subscribe to Updates

    Get the latest creative news from FooBar about art, design and business.

    What's Hot

    ಸುಳ್ಯದಲ್ಲಿ ಡಾ. ಪೂವಪ್ಪ ಕಣಿಯೂರು ಇವರ ಕೃತಿ ಬಿಡುಗಡೆ

    February 17, 2026

    ಡಾ. ಬಿ. ಜನಾರ್ದನ ಭಟ್ ಇವರ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಲೋಕಾರ್ಪಣೆ

    February 17, 2026

    ಬೆಂಗಳೂರಿನ ವಾಡಿಯ ಸಭಾಂಗಣದಲ್ಲಿ ‘ಜ್ಞಾನ ದೇಗುಲ’ ನಾಟಕ ಪ್ರದರ್ಶನ | ಫೆಬ್ರವರಿ 20

    February 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಸ್ತ್ರೀ ಶಕ್ತಿ’ ಸಂಗೀತ ಕಾರ್ಯಕ್ರಮ
    Music

    ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಸ್ತ್ರೀ ಶಕ್ತಿ’ ಸಂಗೀತ ಕಾರ್ಯಕ್ರಮ

    February 17, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ದಿನಾಂಕ 22 ಫೆಬ್ರವರಿ 2026ರಂದು ಭಾನುವಾರ ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ. ಉತ್ಕೃಷ್ಟ ಮಟ್ಟದ ‘ಶಾಸ್ತ್ರೀಯ ಗಾಯನ ಜುಗಲ್‌ಬಂಧಿ’ ಮತ್ತು ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ.
    ಪೂರ್ವಾರ್ಧದಲ್ಲಿ ಯಲ್ಲಾಪುರದ ಕುಮಾರಿ ವಿಭಾ ಹೆಗ್ಡೆ ಮತ್ತು ಬೆಂಗಳೂರಿನ ಕುಮಾರಿ ಶಿವಾನಿ ಮಿರ್ಜಾಕಾರ್‌ ಇವರಿಂದ ‘ಶಾಸ್ತ್ರೀಯ ಗಾಯನ ಜುಗಲ್‌ಬಂಧಿ’ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಕುಮಾರಿ ಮೇಧಾ ಜಿ. ಭಟ್ ಮತ್ತು ಭೋಪಾಲ್‌ನ ಕುಮಾರಿ ವಿಜೇತಾ ಹೆಗ್ಡೆಯವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ. ಉತ್ತಾರಾರ್ಧದಲ್ಲಿ ಮುಂಬೈನ ಡಾ. ಸಂಗೀತ ಶಂಕರ್, ರಾಗಿಣಿ ಶಂಕರ್ ಮತ್ತು ನಂದಿನಿ ಶಂಕರ್‌ ಇವರಿಂದ ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬ್ಲಾದಲ್ಲಿ ಮುಂಬೈನ ಅನುರಾಧ ಪಾಲ್‌ ಇವರು ಸಾಥ್ ನೀಡಲಿದ್ದಾರೆ.
    ಈ ‘ಸ್ತ್ರೀ ಶಕ್ತಿ’ ಕಾರ್ಯಕ್ರಮವನ್ನು ನಗರದ ಪ್ರಖ್ಯಾತ ಸಂಗೀತಾ ಗುರುಗಳಾದ ಶ್ರೀಮತಿ ಬಸ್ತಿ ಕವಿತಾ ಶೆಣೈ, ಶ್ರೀಮತಿ ವಿಭಾ ನಾಯಕ್ ಹಾಗೂ ಶ್ರೀಮತಿ ಶ್ರೀಲತಾ ಪ್ರಭು ಇವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್. ನಾಯಕ್‌ರವರು ಕೋರಿದ್ದಾರೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಉದಯೋನ್ಮುಖ ಕವಿಗಳಿಗೆ ಕವನ ಸ್ಪರ್ಧೆ | ಕೊನೆಯ ದಿನಾಂಕ ಫೆಬ್ರವರಿ 28
    Next Article ಬೆಂಗಳೂರಿನ ವಾಡಿಯ ಸಭಾಂಗಣದಲ್ಲಿ ‘ಜ್ಞಾನ ದೇಗುಲ’ ನಾಟಕ ಪ್ರದರ್ಶನ | ಫೆಬ್ರವರಿ 20
    roovari

    Add Comment Cancel Reply


    Related Posts

    ಸುಳ್ಯದಲ್ಲಿ ಡಾ. ಪೂವಪ್ಪ ಕಣಿಯೂರು ಇವರ ಕೃತಿ ಬಿಡುಗಡೆ

    February 17, 2026

    ಡಾ. ಬಿ. ಜನಾರ್ದನ ಭಟ್ ಇವರ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಲೋಕಾರ್ಪಣೆ

    February 17, 2026

    ಬೆಂಗಳೂರಿನ ವಾಡಿಯ ಸಭಾಂಗಣದಲ್ಲಿ ‘ಜ್ಞಾನ ದೇಗುಲ’ ನಾಟಕ ಪ್ರದರ್ಶನ | ಫೆಬ್ರವರಿ 20

    February 17, 2026

    ಉದಯೋನ್ಮುಖ ಕವಿಗಳಿಗೆ ಕವನ ಸ್ಪರ್ಧೆ | ಕೊನೆಯ ದಿನಾಂಕ ಫೆಬ್ರವರಿ 28

    February 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.