ದುಬೈ : ಕಥಾಬಿಂದು ಪ್ರಕಾಶನ ಇದರ ವತಿಯಿಂದ ಸಂಸ್ಥಾಪಕರಾದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕನ್ನಡ ಕಂಪು ಸರಣಿ -9’ ಕಾರ್ಯಕ್ರಮವು ದಿನಾಂಕ 18 ಫೆಬ್ರುವರಿ 2026ರಂದು ದುಬೈಯಲ್ಲಿ ಹಮ್ಮಿಕೊಳ್ಳಲಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ ಇವರ ‘ಆಪ್ತ ಸಂಗಾತಿ’ ವ್ಯಕ್ತಿತ್ವ ವಿಕಸನ ಲೇಖನ, ರೇಖಾ ಸುರೇಶ್ ರಾವ್ ಇವರ ‘ಸುಷುಮ್ನ’ ಕವನ ಸಂಕಲನ ಹಾಗೂ ಹರಿಶ್ಚಂದ್ರ ಪಿ. ಸಾಲಿಯನ್ ಇವರ ‘ತುಳುನಾಡ ತುಳು ಗಾದೆಲು’ ಕೃತಿಗಳು ಬಿಡುಗಡೆಯಾಗಲಿವೆ. ವಿಕ್ಟರಿ ಗೋಡ್ಸನ್, ಆಶಾ, ಯುರೋ ಜಗದೀಶ್ ಪೈ. ಬೋಡರ ಶೋಭಾವತಿ, ಬಿಂದು ಗ್ಲಾರ್ಸನ್, ಗಂಗಾಧರ ಅಮೀನ್, ಗೀತಾ ಮಧುಕರ್, ಹರಿಶ್ಚಂದ್ರ ಪಿ. ಸಾಲಿಯನ್, ಕಲ್ಲಾರೆ ಚಿತ್ರಲೇಖ, ಲತಾ ಜಗದೀಶ, ಪಿ.ವಿ. ಪ್ರದೀಪ್ ಕುಮಾರ್, ಸಹನಾ ಮಧುಕರ್, ವಿಜಯ ಸಾಲಿಯಾನ್ ಇವರನ್ನು ಒಳಗೊಂಡ 25 ಜನರ ತಂಡ ಈ ಪ್ರವಾಸದಲ್ಲಿ ಇರುತ್ತಾರೆ. ಈ ಸಾಹಿತ್ಯ ಪ್ರವಾಸಕ್ಕೆ ಸಾಹಿತ್ಯ ಪರಿಚಾರಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಮತ್ತು ಹಿತೈಷಿಗಳು ಶುಭ ಕೋರಿದ್ದಾರೆ.

