ಸೋಮೇಶ್ವರ : ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ದಿನಾಂಕ 15 ಫೆಬ್ರವರಿ 2026ರಂದು ಆಯ್ದ ಹಿರಿಯ ಕವಿಗಳ ಕವಿಗೋಷ್ಠಿ ಜರಗಿತು. ಅರ್ಚಕ ಶ್ರೀಶ ದೀಪ ಬೆಳಗಿಸಿದರು. ಸೋಮೇಶ್ವರ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ನಾಯ್ಕರು ಸಮಾಜದ ಮುಖಂಡ ಹರಿಶ್ಚಂದ್ರ ಗಟ್ಟಿ ಉಪಸ್ಥಿತರಿದ್ದರು. ಕವಿಗೋಷ್ಠಿ ಸಂಯೋಜಕ ಎಂ.ಎಸ್. ವೆಂಕಟೇಶ ಗಟ್ಟಿ ಸ್ವಾಗತಿಸಿದರು.
ಈ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ರೇಮಂಡ್ ಡಿ.ಕುನ್ಹಾ ತಾಕೊಡೆ ಮಾತನಾಡಿ “ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ. ಜಾನಪದ, ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಬದ್ಧತೆಯ ವಿಷಯಗಳು ಕವಿತೆಗಳಿಗೆ ಪ್ರೇರಣೆಯಾಗುತ್ತವೆ” ಎಂದು ಹೇಳಿದರು.

ಡಾ. ಸುರೇಶ್ ನೆಗಳಗುಳಿ ಕವಿಗೋಷ್ಠಿಗೆ ಚಾಲನೆ ನೀಡುತ್ತಾ ‘ಹರನೊಲಿದರೆ ಕೊರಡು ಕೊನರುವುದು’ ಎಂಬಂತೆ ಶಿವರಾತ್ರಿ ಕಾಲದ ಜಾಗರಣೆ ಮನಸ್ಸನ್ನು ಜಾಗೃತ ಮಾಡುತ್ತದೆ ಎನ್ನುತ್ತಾ ಶಿವರಾತ್ರಿಯ ಮಹತ್ವ ಸಾರುವ ಭಕ್ತಿಗೀತೆ ಹಾಗೂ ಗಝಲ್ ಓದಿದರು. ಕವಿಗಳಾದ ವಿಜಯಲಕ್ಷ್ಮೀ ಕಟೀಲು, ಅನಾರ್ಕಲಿ ಸಲೀಂ, ಸುಮಂಗಲ ದಿನೇಶ್, ಗಣೇಶ್ ಪ್ರಸಾದ್ ಜೀ, ಹರಿ ಪ್ರಸಾದ್ ಶೆಟ್ಟಿಗಾರ್, ವೆಂಕಟೇಶ ಗಟ್ಟಿ, ರಶ್ಮಿ ಸನಿಲ್, ರೇಮಂಡ್ ಡಿ.ಕೂನಾ ತಾಕೊಡೆ ಕವನ ವಾಚನ ಮಾಡಿದರು. ರಶ್ಮಿ ಸನಿಲ್ ನಿರೂಪಣೆ ಮಾಡಿದರು.
