ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2025-26ನೆಯ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ರಂಗ ಪ್ರಯೋಗವನ್ನು ದಿನಾಂಕ 20 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಸಾಣೇಹಳ್ಳಿಯ ಶ್ಯಾಮನೂರು ಶಿವಶಂಕರಪ್ಪ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಪೂಜ್ಯಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರಸ್ತುತಗೊಳ್ಳುವ ‘ಕಾಯಕ ಯೋಗಿ ನುಲಿಯಚಂದಯ್ಯ’ ನಾಟಕ ಪರಿಕಲ್ಪನೆ ಮತ್ತು ನಿರ್ದೇಶನ ಮಹಾಂತೇಶ್ ರಾಮದುರ್ಗಾ ಇವರದ್ದು. ಚಂದ್ರಶೇಖರ್ ವಸ್ತ್ರದ ಮತ್ತು ಜೆ.ಹೆಚ್. ಹನ್ನೆರಡುಮಠ ಇವರು ರಚಿಸಿದ್ದು, ಶರಣ್ ಕುಮಾರ್ ಇವರು ಸಂಗೀತ ನೀಡಿರುತ್ತಾರೆ.

