ಮೂಲ್ಕಿ : ಕಟೀಲು ದೇಗುಲದ ನಂದಿನಿ ನದಿಯ ಕುದ್ರುವಿನಲ್ಲಿ ದಿನಾಂಕ 01 ಮಾರ್ಚ್ 2026ರಂದು ನಡೆಯಲಿರುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಲು ಮೂಲ್ಕಿ ತಾಲೂಕಿನ ಕವಿಗಳಿಗೆ ಹಾಗೂ ಕಥಾಗೋಷ್ಟಿಯಲ್ಲಿ ಭಾಗವಹಿಸಿ, ಸ್ವರಚಿತ ಕಥೆಯನ್ನು ಓದಲು ಮೂಲ್ಕಿ ತಾಲೂಕಿನ ಕಥಾಗಾರರಿಗೆ ಮುಕ್ತ ಅವಕಾಶ ನೀಡಲಾಗಿದೆ.
ಮೂಲತಃ ಮೂಲ್ಕಿ ತಾಲೂಕಿನವರಾಗಿದ್ದು, ಬೇರೆ ಕಡೆ ವಾಸವಾಗಿರುವ ಅಥವಾ ಬೇರೆ ತಾಲೂಕಿನವರಾಗಿದ್ದು, ಪ್ರಸ್ತುತ ಮೂಲ್ಕಿ ತಾಲೂಕಿನಲ್ಲಿರುವ ಕವಿಗಳು, ಕಥಾಗಾರರು ಈ ಗೋಷ್ಟಿಗಳಲ್ಲಿ ಭಾಗವಹಿಸಬಹುದಾಗಿದೆ. ಪಾಲ್ಗೊಂಡವರಿಗೆ ಪ್ರಮಾಣಪತ್ರ, ಪುಸ್ತಕದ ಗೌರವ ಇದೆ. ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ಹೆರಿಕ್ ಪಾಯಸ್ 9449913995 ಅಥವಾ ದೇವದಾಸ ಮಲ್ಯ 9448623247 ಇವರಲ್ಲಿ ನೋಂದಾಯಿಸಬಹುದು.

