Subscribe to Updates

    Get the latest creative news from FooBar about art, design and business.

    What's Hot

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್
    Music

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಗೆ ಈಗ ನಲ್ವತ್ತರ ಹರಯ. 1986ರಲ್ಲಿ ಕೊಂಕಣಿ ಸಂಸ್ಕೃತಿಯನ್ನು ದೇಸಿಯ ಅಸ್ಮಿತೆಯಿಂದ ಶೃಂಗರಿಸಲು ಆರಂಭಗೊಂಡ ಈ ಸಂಸ್ಥೆ ನಂತರ ಭಾಷೆ, ಕಲೆ, ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ಶ್ರಮಿಸಿ, 35 ಪ್ರಯೋಗಗಳ 2200ಕ್ಕೂ ಮಿಕ್ಕಿ ಪ್ರದರ್ಶನಗಳ ಮೂಲಕ, ಜಗದ ಕೊಂಕಣಿ ಜನರಲ್ಲಿ ಭಾಷಾಭಿಮಾನವನ್ನು ಉದ್ದೀಪನಗೊಳಿಸಿ, ಕೊಂಕಣಿ ಸಂಸ್ಕೃತಿಯ ರಕ್ಷಕ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.

    2008ರಲ್ಲಿ, 1711 ಗಾಯಕರ ಮೂಲಕ 645 ಹಾಡುಗಳಿಂದ, 40 ಗಂಟೆಗಳಷ್ಟು ಸುದೀರ್ಘ ಅವಧಿಯ ಸಮೂಹ ಗಾಯನದ ಒಂದು ಗಿನ್ನೆಸ್ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡ ಮಾಂಡ್ ಸೊಭಾಣ್ ಈಗ ಇನ್ನೊಂದು ದಾಖಲೆಗೆ ಸಜ್ಜಾಗುತ್ತಿದೆ. ದಿನಾಂಕ 03 ನವೆಂಬರ್ 2026ರಿಂದ – 15 ನವೆಂಬರ್ 2026ರವರೆಗೆ ಮಂಗಳೂರಿನಲ್ಲಿ, ಉದ್ದೇಶಿತ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮಾವೇಶದಲ್ಲಿ 12 ದಿನ, 12 ಗಂಟೆ ಮತ್ತು 12 ನಿಮಿಷಗಳ (ಸುಮಾರು 300 ಗಂಟೆ 12 ನಿಮಿಷ) ನಿರಂತರ ಸಮೂಹ ಗಾಯನದ ನೂತನ ದಾಖಲೆಗಾಗಿ ಭರದ ತಯಾರಿ ನಡೆಯುತ್ತಿದೆ. ಈ ದಾಖಲೆಗಾಗಿ 5400ಕ್ಕೂ ಮಿಗಿಲು ಗಾಯಕರು ಹಾಗೂ 5400 ಕೊಂಕಣಿ ಹಾಡುಗಳು ಬೇಕಾಗುತ್ತವೆ. ತನ್ನ ಜೀವಿತಾವಧಿಯ ಕೆಲಸಗಳಿಂದ ಕೊಂಕಣಿಯ ಬಾಳ್ವಿಕೆಯನ್ನು ಹೆಚ್ಚಿಸಿದ ದಿ. ಎರಿಕ್ ಒಝೇರಿಯೊ ಇವರ ಗೌರವಾರ್ಥ ಈ ದಾಖಲೆಯ ಪ್ರಯತ್ನ ನಡೆಯಲಿದೆ. ಇದಲ್ಲದೇ ಕೊಂಕಣಿ ಸಂಗೀತ ನಡೆದು ಬಂದ ದಾರಿಯ ಬಗ್ಗೆ, ವಿವಿಧ ಸಂಗೀತ ಸಂಪ್ರದಾಯಗಳ ಬಗ್ಗೆ ವಿಷಯ ಪರಿಣಿತರು ಪ್ರಬಂಧ ಮಂಡಿಸಲಿರುವರು. ಕೊಂಕಣಿ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸಲಾಗುವುದು.

    ದಾಖಲೆಯ ಸಂದರ್ಭದಲ್ಲಿ, 16 ವರ್ಷ ಮೀರಿದ 18 ಜನರನ್ನೊಳಗೊಂಡ ಒಂದು ತಂಡವು ಒಂದು ಗಂಟೆಯ ಅವಧಿಯಲ್ಲಿ ಸುಮಾರು 16ರಿಂದ 18 ಹಾಡುಗಳನ್ನು ಹಾಡಲಿದೆ. ಈ ರೀತಿ 300 ತಂಡಗಳು ಒಂದರ ನಂತರ ಒಂದು ನಿರಂತರವಾಗಿ ಹಾಡಿ ಈ ದಾಖಲೆಯನ್ನು ರಚಿಸಲಿವೆ. ಹಾಡುಗಾರರು ಯಾವುದೇ ಭಾಷೆಯವರಾಗಿರಬಹುದು ಆದರೆ ಹಾಡುಗಳು ಮಾತ್ರ ಕೊಂಕಣಿಯದ್ದಾಗಿರಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಕೊಂಕಣಿಯ ಎಲ್ಲಾ ಭಾಷಾ ಪ್ರಬೇಧಗಳ ದೇಶ ವಿದೇಶಗಳ ಎಲ್ಲಾ ಮೂಲೆಗಳ ಜನರು ಭಾಗವಹಿಸಬಹುದು. ನೋಂದಾಯಿಸಿದ ತಂಡಗಳಿಗೆ ತರಬೇತಿ ಮತ್ತು ಇತರೆ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ತಂಡಕ್ಕೆ ಸೂಕ್ತ ಹೆಸರನ್ನಿಟ್ಟು, ತಂಡದ ಮುಖ್ಯಸ್ಥರ ಹೆಸರು ಮತ್ತು ದೂರವಾಣಿ ಸಂಖ್ಯೆಯೊಡನೆ ದಿನಾಂಕ 28 ಫೆಬ್ರವರಿ 2026ಯೊಳಗೆ 81052 26626 ಈ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮೂಲಕ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ www.manddsobhann.org ಭೇಟಿ ನೀಡಿ.

    baikady Music roovari workshop World Record
    Share. Facebook Twitter Pinterest LinkedIn Tumblr WhatsApp Email
    Previous Articleಕೊಡವ ಸಾಹಿತ್ಯ ಅಕಾಡೆಮಿಯಿಂದ 15 ಸಾಧಕರಿಗೆ ಗೌರವ ಪ್ರಶಸ್ತಿ
    Next Article ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು
    roovari

    Add Comment Cancel Reply


    Related Posts

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ

    February 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.