Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ
    Awards

    ಶಿಲ್ಪಕಲಾ ಅಕಾಡೆಮಿಯ ‘ಗೌರವ’ ಮತ್ತು ‘ಶಿಲ್ಪಶ್ರೀ’ ಪ್ರಶಸ್ತಿ ಪ್ರಕಟ

    February 21, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024, 2025ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು 2024ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ಯನ್ನು ಪ್ರಕಟಿಸಿದೆ. ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಗೌರವ ಪ್ರಶಸ್ತಿಗೆ ಹತ್ತು ಶಿಲ್ಪಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ತಲಾ ರೂ.50,000/- ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಬೀದ‌ರ್ ಅಥವಾ ಚಾಮರಾಜನಗರದಲ್ಲಿ ಸಮಾರಂಭ ಆಯೋಜಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಸಿ. ರಮೇಶ್ ತಿಳಿಸಿದ್ದಾರೆ.

    ಅಲ್ಲದೇ, 2024ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ಗೆ ಹತ್ತು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ತಲಾ ರೂ.25,000/- ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ. ಅಕಾಡೆಮಿಯ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2025ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಆರು ಶಿಲ್ಪ ಕಲಾಕೃತಿಗಳನ್ನು ಅಕಾಡೆಮಿಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.

    2024ನೇ ಸಾಲಿನ ಗೌರವ ಪ್ರಶಸ್ತಿ : ಎ.ಪಿ. ಶ್ರೀಕಂಠಾಚಾರ್ಯ (ಸಂಪ್ರದಾಯ ಶಿಲ್ಪ) ದಾವಣಗೆರೆ, ಸಾಯಿನಾಥ ಭೀಮರಾಯಪ್ಪ (ಸಂಪ್ರದಾಯ ಶಿಲ್ಪ) ಧಾರವಾಡ, ಸೋಮಚಾರಿ (ಸಂಪ್ರದಾಯ ಶಿಲ್ಪ) ಹಾವೇರಿ, ಎಂ.ಕೆ. ಗಿರೀಶ್ ಕುಮಾರ್ (ಸಮಕಾಲೀನ ಶಿಲ್ಪ) ವಿಜಯನಗರ ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ : ಸಾಯಬಣ್ಣ ಕಂಬಾರ (ಸಂಪ್ರದಾಯ ಶಿಲ್ಪ) ಕಲಬುರಗಿ, ರವೀಂದ್ರ ವಿ. ಬಡಿಗೇರ (ರಥ ಶಿಲ್ಪ) ರಾಯಚೂರು, ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ (ಸಂಪ್ರದಾಯ ಶಿಲ್ಪ) ಗದಗ, ಅರುಣ ಬುಕ್ಕಾ ಗುಡಿಗಾರ (ಸಂಪ್ರದಾಯ ಶಿಲ್ಪ) ಉತ್ತರ ಕನ್ನಡ, ಕೆ. ರಾಘವೇಂದ್ರ (ಸಮಕಾಲೀನ ಶಿಲ್ಪ) ಮೈಸೂರು.

    2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ : ಬಸ್ತಿ ಸವಾಶಿವ ಶೆಣೈ (ದಕ್ಷಿಣ ಕನ್ನಡ), ದೇವಿಪ್ರಸಾದ್ ಎಂ. ಮಾಯಾಚಾರ್ಯ (ಬಾಗಲಕೋಟೆ), ಮಂಜುನಾಥ ಡಿ. ಬಾರ್ಕಿ (ಹಾವೇರಿ), ರಾಜೇಶ್ ಎಂ. ಪತ್ತಾರ (ಗದಗ). ಆನಂದ ಹಾವನೂರು (ಬೆಳಗಾವಿ), ನವೀನ್ ಕಡ್ಲಾಸ್ಕರ್ (ಧಾರವಾಡ), ಕೆ.ಎನ್. ಕೃಷ್ಣಮೂರ್ತಿ ಆಚಾರ್ (ಚಿತ್ರದುರ್ಗ), ವಿಪಿನ್ ಭದೌರಿಯಾ (ಬೆಂಗಳೂರು), ಸಿ.ಪಿ. ವಿಶ್ವನಾಥ್ (ತುಮಕೂರು), ಎಂ. ಶರಣ್ (ಬೆಂಗಳೂರು ದಕ್ಷಿಣ) ಹಾಗೂ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿಜೇತರು : ಬಿ. ಬ್ರಹ್ಮಚಾರಿ (ವಿಜಯನಗರ), ಎಲ್. ಪುರುಷೋತ್ತಮ್ (ಶಿವಮೊಗ್ಗ). ಎಸ್. ರಾಘವೇಂದ್ರ (ಶಿವಮೊಗ್ಗ), ಡಿ.ಎಂ. ಪ್ರದೀಪ್ ಕುಮಾರ್‌ (ದಾವಣಗೆರೆ), ವಿಶ್ವೇಶ್ವರ ಪರ್ಕಳ (ಉಡುಪಿ), ಕೆ.ಎಸ್. ಸ್ವಾತೀಶ್ (ಮಂಡ್ಯ)

    ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಬಹುಮಾನಕ್ಕೆ ಈರಣ್ಣ (ರಾಯಚೂರು) ಅವರ ಶಿಲ್ಪಕಲಾಕೃತಿ, ಅದೇ ರೀತಿ ವಿಜಯಪುರದ ಮನೋಹರ ಕಾಳಪ್ಪ ಪತ್ತಾರ ದತ್ತಿ ಬಹುಮಾನಕ್ಕೆ ವಾದಿರಾಜ ಎಂ. ಬಡಿಗೇರ (ಕಲಬುರಗಿ), ಉಡುಪಿ ಜಿಲ್ಲೆ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಬಹುಮಾನಕ್ಕೆ ರೂಪ ಖಂಗೋವಿ (ಬೆಂಗಳೂರು), ಪಿ.ಎಸ್. ಕೃಷ್ಣಮೂರ್ತಿ (ಬೆಂಗಳೂರು ದಕ್ಷಿಣ) ಮತ್ತು ಅರೇನಾ ಅನಿಮೇಷನ್ ಮಲ್ಲೇಶ್ವರಂ ಹಾಗೂ ವೇದಾತ್ಮ ಕಾಲೇಜ್ ಆಫ್ ಡಿಸೈನ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಬಹುಮಾನಕ್ಕೆ ಆನಂದ ಬಿಳಗಿ (ಬಾಗಲಕೋಟೆ) ಅವರ ಶಿಲ್ಪಕಲಾಕೃತಿ ಆಯ್ಕೆಯಾಗಿದೆ.

    award baikady roovari sculpture
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು
    Next Article ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ
    roovari

    Add Comment Cancel Reply


    Related Posts

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.