Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’
    Drama

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 23, 2026Updated:February 28, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ರಂಗಹಬ್ಬ ನಾಟಕೋತ್ಸವವು ದಿನಾಂಕ 22 ಫೆಬ್ರವರಿ 2026ರಂದು ಉದ್ಘಾಟನೆಗೊಂಡಿತು.

    ಈ ನಾಟಕೋತ್ಸವವನ್ನು ಉದ್ಘಾಟಿಸಿದ ರಂಗಕರ್ಮಿ ಸಂಜೀವ ದಂಡೆಕೇರಿಯವರು ಮಾತನಾಡಿ “ಕಲಾವಿದ ಕಲಾ ಪ್ರದರ್ಶನ ನೀಡಿದರೆ ಪೂರ್ಣನಾಗುವುದಿಲ್ಲ. ಸಹೃದಯನಾಗಬೇಕು, ವಿಶಾಲ ಹೃದಯಿ ಆಗಿರಬೇಕು. ಆಗ ಮಾತ್ರ ಪೂರ್ಣಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ. ನಾಟಕಗಳನ್ನು ನೋಡುವವರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ವೇದಿಕೆಯಲ್ಲಿ ಇರುವಷ್ಟು ವೀಕ್ಷಕರು ಇಲ್ಲದ ಪರಿಸ್ಥಿತಿ ಕೆಲವು ಕಡೆಗಳಲ್ಲಿ ಉಂಟಾಗಿದೆ. ಧಾರಾವಾಹಿಗಳು, ಮೊಬೈಲ್ ಇದಕ್ಕೆ ಕಾರಣ ಇರಬಹುದು. ರಂಗಚಟುವಟಿಕೆ ಜಾಸ್ತಿಯಾಗುತ್ತಾ ಹೋಗಬೇಕು. ನಾವು ಮಾಡುವ ಒಳ್ಳೆಯ ಕಾರ್ಯ ಮತ್ತು ಜನರ ಪ್ರೀತಿ ಮಾತ್ರ ಶಾಶ್ವತ. ನಾವು ಬದುಕಿ ಸಾಯುವುದಕ್ಕಿಂತ ಸತ್ತ ಮೇಲೂ ಬದುಕುವಂತೆ ಸಾಧನೆ ಮಾಡಬೇಕು. ನಾನು ಬರೆದ ಬಯ್ಯಮಲ್ಲಿಗೆ ನಾಟಕವು ತುಳು, ಕನ್ನಡ, ಹಿಂದಿ, ಕೊಂಕಣಿ, ಮರಾಠಿ, ಇಂಗ್ಲೀಷ್ ಭಾಷೆಗಳಲ್ಲಿ ಪ್ರದರ್ಶನಗೊಂಡಿದೆ. 28 ಸಾವಿರ ಪ್ರದರ್ಶನಗಳವರೆಗೆ ನಾನು ಲೆಕ್ಕ ಇಟ್ಟಿದ್ದೆ. ಆನಂತರ ಲೆಕ್ಕ ಇಟ್ಟಿಲ್ಲ. ಇದೇ ಬಯ್ಯಮಲ್ಲಿಗೆ ಸಿನಿಮಾ ಕೂಡ ಆಯಿತು” ಎಂದು ನೆನಪು ಮಾಡಿಕೊಂಡರು.

    ರಂಗಸಾಧಕ ಸನ್ಮಾನ ಸ್ವೀಕರಿಸಿದ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಮಾತನಾಡಿ, “ರಂಗಭೂಮಿಯು ಆಯಾ ಕಾಲಘಟ್ಟದ ಅನಿವಾರ್ಯತೆಗೆ, ತಲ್ಲಣಗಳಿಗೆ ಸ್ಪಂದಿಸುವ ಪ್ರಬಲ ಮಾಧ್ಯಮ. ಮನರಂಜನೆ ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿ. ಕಲಾವಿದ ತನ್ನೊಳಗೆ ಬಗೆದು ನೋಡುವ ಪ್ರಕ್ರಿಯೆ. ಸಮಾಜವನ್ನು ಕಟ್ಟುವ ಪ್ರಕ್ರಿಯೆಯೂ ಹೌದು. ರಂಗಭೂಮಿಗೆ ಪ್ರಶ್ನಿಸುವ ಮನೋಭಾವ ಇರುವುದರಿಂದ ಅದು ಆಗಾಗ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗುತ್ತದೆ. ಆದರೆ ಇತ್ತೀಚೆಗೆ ಪ್ರಪಗಾಂಡ ನಾಟಕಗಳೂ ಬರುತ್ತಿರುವುದರಿಂದ ಎಲ್ಲ ನಾಟಕಗಳು ಒಳ್ಳೆಯವು ಎಂದು ಅದರ ಸ್ವರೂಪದ ಕಾರಣಕ್ಕಷ್ಟೇ ಗುರುತಿಸಲು ಸಾಧ್ಯವಿಲ್ಲ. ನಾಟಕ ರಚನೆಕಾರರ, ನಿರ್ದೇಶಕರ, ನಾಟಕ ಮಾಡಿಸುವವರ ಮನಸ್ಥಿತಿಯನ್ನು ಅವಲಂಬಿಸಿದೆ. ಉಡುಪಿಯಲ್ಲಿ ಸಹೃದಯತೆಯ ಮತ್ತು ಸೌಹಾರ್ದದ ಪರಂಪರೆ ಇದೆ. ಯು.ಎಸ್. ಪಣಿಯಾಡಿ, ಡಾ. ಟಿ.ಎಂ.ಎ ಪೈ, ಹಾಜಿ ಅಬ್ದುಲ್ಲ ಸಾಹೇಬ್ ಇದಕ್ಕೆ ಉದಾಹರಣೆ. ಅವರು ಹಾಕಿಕೊಟ್ಟ ಮೇಲ್ಪಂಕ್ತಿ, ವರ್ತಮಾನ ಮತ್ತು ಭವಿಷ್ಯದ ಹಾದಿಗೆ ಬೆಳಕಾಗಬಲ್ಲದು” ಎಂದು ಅಭಿಪ್ರಾಯಪಟ್ಟರು.

    ಅಧ್ಯಕ್ಷತೆ ವಹಿಸಿದ್ದ ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಶೇರಿಗಾರ್ ಮಾತನಾಡಿ, “ಸುಮನಸಾ ಮುಂದಿನ ಪೀಳಿಗೆಯನ್ನು ಸದೃಡಗೊಳಿಸುತ್ತಿದೆ. ಇತ್ತೀಚಿನ ನಾಟಕಗಳಲ್ಲಿ ಯುವ ಪೀಳಿಗೆಗೆ ಅವಕಾಶ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಸುಮನಸಾ ಸಂಸ್ಥೆಯ ಸ್ವಂತ ನಿವೇಶನ, ಸ್ವಂತ ಕಟ್ಟಡದ ಕನಸು ಈಡೇರಲಿ” ಎಂದು ಹಾರೈಸಿದರು.

    ಸಾಕಾರ್ ಕನ್ಸ್ಟ್ರಸಕ್ಷನ್ ಪ್ರವರ್ತಕ ರಾಕೇಶ್ ಜೋಗಿ, ಉದ್ಯಮಿ ನಾಗರಾಜ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಸದಸ್ಯೆ ಅಂಬಿಕಾ ವಂದಿಸಿ, ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ಜರ್ನಿ ಥೇಟರ್ ಗೂಪ್ ತಂಡದವರಿಂದ ಚೇತನ್ ಗಣೇಶಪುರ ಇವರ ನಿರ್ದೇಶನದಲ್ಲಿ ‘ಸಾಹೇಬರು ಬರುತ್ತಾರೆ’ ಕನ್ನಡ ನಾಟಕ ಪ್ರದರ್ಶನಗೊಂಡಿತು.

    baikady drama felicitation roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24
    Next Article ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ‘ವಿಚಾರ ಸಂಕಿರಣ’ | ಫೆಬ್ರವರಿ 26
    roovari

    Add Comment Cancel Reply


    Related Posts

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕಾಜಾಣ ನಾಟಕೋತ್ಸವ’ 2026 | ಏಪ್ರಿಲ್ 30

    April 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.