Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ‘ಪ್ರೇರಣಾ 5’ ಸಂಗೀತ ಕಛೇರಿ ಮತ್ತು ಭರತನಾಟ್ಯ ಪ್ರದರ್ಶನ | ಫೆಬ್ರವರಿ 28

    February 27, 2026

    ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

    February 27, 2026

    ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ‘ನಾಟ್ಯಾಂಜಲಿ ಉತ್ಸವ’

    February 27, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’ರ ಐದನೇ ದಿನದ ಕಾರ್ಯಕ್ರಮ
    Drama

    ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’ರ ಐದನೇ ದಿನದ ಕಾರ್ಯಕ್ರಮ

    February 27, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ‘ರಂಗಹಬ್ಬ-14’ರ ಐದನೇ ದಿನದ ಕಾರ್ಯಕ್ರಮವು ದಿನಾಂಕ 26 ಫೆಬ್ರವರಿ 2026ರಂದು ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲ ಎಚ್‌.ಪಿ.ಆರ್‌. ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್‌ ರೈ “ನಡಿಗೆ, ಓಟಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಂತನನ್ನಾಗಿ ಮಾಡಿದರೆ, ರಂಗಚಟುವಟಿಕೆಗಳು ಸೃಜನಶೀಲ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಮಾಡಿ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ಉಡುಪಿಯ ಶ್ರೀಮಂತ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಸುಮನಸಾ ಕೊಡವೂರು ಸಂಘಟನೆ ಮಾಡುತ್ತಾ ಬಂದಿದೆ” ಎಂದು ಶ್ಲಾಘಿಸಿದರು.

    ರಂಗಸಾಧಕ ಸನ್ಮಾನ ಸ್ವೀಕರಿಸಿದ ಬಹುಕ್ಷೇತ್ರದ ಸಾಧಕಿ ಕುಸುಮಾ ಕಾಮತ್‌ ಮಾತನಾಡಿ “ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಈ ಸನ್ಮಾನ ಸಲ್ಲಲಿದೆ. ಸುಂದರ ಮನಸ್ಸುಗಳು ನಳನಳಿಸುವ ಸಂಘಟನೆ. ಕಠಿಣ ಪರಿಶ್ರಮ, ಶಿಸ್ತು, ಹೊಂದಾಣಿಕೆ ಇದ್ದಾಗ ಮಾತ್ರ ಮುಂದುವರಿಯಲು ಸಾಧ್ಯ. ಅವೆಲ್ಲ ಗುಣಗಳನ್ನು ಸುಮನಸಾ ಕೊಡವೂರು ತಂಡ ಹೊಂದಿದೆ. ಕಲಾವಿದರಿಗೆ ಅನೇಕ ನೋವುಗಳಿರುತ್ತವೆ. ಆದರೆ, ರಂಗದ ಮೇಲೆ ಬಂದಾಗ ಎಲ್ಲ ನೋವುಗಳನ್ನು ಮರೆತು ಪ್ರದರ್ಶನ ನೀಡುತ್ತಾರೆ. ಕಲೆಗೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಯಾದರೂ ಕಲೆ ಅರ್ಥವಾಗುತ್ತದೆ” ಎಂದು ವಿಶ್ಲೇಷಿಸಿದರು.

    ಕೊಡವೂರು ಶಿರಿಡಿ ಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ್ ಶೆಟ್ಟಿ ತೋಟದಮನೆ, ಬೊಳ್ಜೆ ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅಧ್ಯಕ್ಷ ದಿನೇಶ್ ಸಾಲಿಯಾನ್, ಸಿತಾರ ಎಂಟರ್ ಪ್ರೈಸಸ್ ಪಾಲುದಾರ ಪ್ರಭಾಕರ್ ತಿಂಗಳಾಯ, ಮಲ್ಪೆ ಬೋಟ್ ಸಾಯಿಶ್ಯಾಮ್ ಉದ್ಯಮಿ ಹರೀಶ್ ಪೂಜಾರಿ, ಉಡುಪಿ ವ್ಯಾಸ ಮುದ್ರಣ ಮಾಲೀಕ ರಾಮಚಂದ್ರ ಪೂಜಾರಿ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್‌ ಕಲ್ಮಾಡಿ ಉಪಸ್ಥಿತರಿದ್ದರು. ಪ್ರಜ್ಞಾಶ್ರೀ ಸ್ವಾಗತಿಸಿ, ಪ್ರಜ್ಞಾ ವಂದಿಸಿ, ಶ್ರೀವತ್ಸ ರಾವ್‌ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಾಂಡಿಚೇರಿಯ ಅದಿಶಕ್ತಿ ಥೇಟರ್ ಸದಸ್ಯರಿಂದ ವಿನಯ ಕುಮಾರ್ ಇವರ ನಿರ್ದೇಶನದಲ್ಲಿ ‘ಎ ಉಮೆನ್ ಆರ್ ನಾಟ್ ಟು ಬಿ’ ಇಂಗ್ಲೀಷ್‌ ನಾಟಕ ಪ್ರದರ್ಶನಗೊಂಡಿತು.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’ರ ನಾಲ್ಕನೇ ದಿನದ ಕಾರ್ಯಕ್ರಮ
    Next Article ಕದ್ರಿ ಗೋಕುಲ್ ರೆಸಿಡೆನ್ಸಿಯಲ್ಲಿ ‘ನಾದಾಲಯ’ ಗೃಹ ಸಂಗೀತ ಕಛೇರಿ | ಮಾರ್ಚ್ 01
    roovari

    Add Comment Cancel Reply


    Related Posts

    ಮಂಗಳೂರಿನಲ್ಲಿ ‘ಪ್ರೇರಣಾ 5’ ಸಂಗೀತ ಕಛೇರಿ ಮತ್ತು ಭರತನಾಟ್ಯ ಪ್ರದರ್ಶನ | ಫೆಬ್ರವರಿ 28

    February 27, 2026

    ಐವರು ಸಾಹಿತಿಗಳಿಗೆ ಬ್ಯಾರಿವಾರ್ತೆ ಗೌರವ ಪ್ರಶಸ್ತಿ

    February 27, 2026

    ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ‘ನಾಟ್ಯಾಂಜಲಿ ಉತ್ಸವ’

    February 27, 2026

    ಸವಿತಾ ಮಾಧವ ಶಾಸ್ತ್ರಿ ಮಹಿಳಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ

    February 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.