Subscribe to Updates

    Get the latest creative news from FooBar about art, design and business.

    What's Hot

    ಸಿವಗಂಗ ರಂಗಮಂದಿರದಲ್ಲಿ ಯಕ್ಷಗಾನ ತರಬೇತಿ ಶಿಬಿರ ಮತ್ತು ತಾಲೀಮು | ಜುಲೈ 09

    July 6, 2026

    ಸುಜ್ಞಾನ ಮಂಟಪದಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ | ಜುಲೈ 7 ಮತ್ತು 8

    July 6, 2026

    ಕೊಂಕಣಿ ಅಕಾಡೆಮಿ ಮುದ್ರಿತ ಕಾದಂಬರಿ ಪುಸ್ತಕಗಳ ಲೋಕಾರ್ಪಣೆ

    July 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ-23’
    Yakshagana

    ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ-23’

    July 6, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಆನೆಗುಡ್ಡೆ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಹಕಾರದೊಂದಿಗೆ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ (ರಿ.) ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಸಂಕಷ್ಟ ಹರ ಚತುರ್ಥಿಯಂದು ‘ಅರ್ಥಾಂಕುರ-23’ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ದಿನಾಂಕ 03 ಜುಲೈ 2026ರಂದು ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಇವರು ಮಾತನಾಡಿ “ಯಕ್ಷಗಾನ ತಾಳಮದ್ದಳೆಗೆ ಹೊಸ ಕಲಾವಿದರು ರಂಗದಲ್ಲಿ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ‘ಅರ್ಥಾಂಕುರ’ ಕಾರ್ಯಕ್ರಮ ನಿಜಕ್ಕೂ ಶ್ಲಾಘ್ಯಾಯೋಗ್ಯವಾದದ್ದು. ಪ್ರತೀ ತಿಂಗಳು ಕೆಲವು ದೇವಸ್ಥಾನಗಳ ಸಹಕಾರವನ್ನು ಕೋರಿ ನೀಡುವ ಕಾರ್ಯಕ್ರಮ ಸಾಂಸ್ಕೃತಿಕವಾಗಿ ಪುರಾಣ ಕಥೆಯನ್ನು ಆಸ್ವಾದಿಸುವ ಕಾರ್ಯಕ್ರಮವನ್ನು ದೇಗುಲದಲ್ಲಿ ನೆರವೇರಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮ ಇನ್ನಷ್ಟು ಹೆಚ್ಚು ಹೆಚ್ಚು ಮಾಡುವ ಶಕ್ತಿ ಸಂಸ್ಥೆಗೆ ಒದಗಿ ಬರಲಿ” ಎಂದು ಹಿರಿಯ ಕಲಾವಿದರನ್ನು ಗೌರವಿಸಿ ಶುಭ ಹಾರೈಸಿದರು.

    ಹಿರಿಯ ಅರ್ಥದಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ವೈಕುಂಠ ಹೇರ್ಳೆ, ಕೂಡ್ಲಿ ದೇವದಾಸ್ ರಾವ್, ರಾಜಾರಾಮ ಉಪಾಧ್ಯಾಯ, ಚಂದ್ರಯ್ಯ ಆಚಾರ್, ನಂದೀಶ್ ಶೆಟ್ಟಿ, ಶ್ರೀನಾಥ ಉರಾಳ, ವಾಗ್ವಿಲಾಸ್ ಭಟ್, ಅನಂತಕೃಷ್ಣ ನಾವಡ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ತಾಳಮದ್ದಳೆ ‘ಅಂಗದ ಸಂಧಾನ’ ರಂಗ ಪ್ರಸ್ತುತಿಗೊಂಡಿತು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಗ್ರಾಮದಲ್ಲಿ ರಾಜ್ಯಮಟ್ಟದ ಕನ್ನಡ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ
    Next Article ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ‘ಅಭಿನಯ ಕಾರ್ಯಾಗಾರ’ಕ್ಕೆ ಚಾಲನೆ
    roovari

    Add Comment Cancel Reply


    Related Posts

    ಸಿವಗಂಗ ರಂಗಮಂದಿರದಲ್ಲಿ ಯಕ್ಷಗಾನ ತರಬೇತಿ ಶಿಬಿರ ಮತ್ತು ತಾಲೀಮು | ಜುಲೈ 09

    July 6, 2026

    ಸುಜ್ಞಾನ ಮಂಟಪದಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ | ಜುಲೈ 7 ಮತ್ತು 8

    July 6, 2026

    ಕೊಂಕಣಿ ಅಕಾಡೆಮಿ ಮುದ್ರಿತ ಕಾದಂಬರಿ ಪುಸ್ತಕಗಳ ಲೋಕಾರ್ಪಣೆ

    July 6, 2026

    ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ‘ಅಭಿನಯ ಕಾರ್ಯಾಗಾರ’ಕ್ಕೆ ಚಾಲನೆ

    July 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.