ಬೆಂಗಳೂರು : ರಂಗಮಂಡಲ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಶುಭದ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರ ಹಾಗೂ ದೇವಿ ಮಹಾತ್ಮೆ ಪ್ರಸಂಗದ ತಾಲೀಮು ಇದರ ಉದ್ಘಾಟನೆಯನ್ನು ದಿನಾಂಕ 09 ಜುಲೈ 2026ರಂದು ಮಧ್ಯಾಹ್ನ 3-30 ಗಂಟೆಗೆ ಸಿವಗಂಗ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಸಿವಗಂಗ ರಂಗಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿ ಈ ವರ್ಷಕ್ಕೆ ಹತ್ತು ವರ್ಷಗಳು ಸಂದಿವೆ. ಆ ನೆನಪಿಗೆ ಪ್ರತಿ ತಿಂಗಳ ಕಾರ್ಯಕ್ರಮ ಸಾಗಿದೆ. ಮೂಡಲಪಾಯ ಯಕ್ಷಗಾನ ತರಬೇತಿ ಶಿಬಿರ ಹಾಗೂ ದೇವಿ ಮಹಾತ್ಮೆ ಪ್ರಸಂಗದ ತಾಲೀಮು ಉದ್ಘಾಟನೆ – ತಿಂಗಳ 2ನೇ ಕಾರ್ಯಕ್ರಮವಾಗಿದೆ. ಮೂಡಲಪಾಯ ಯಕ್ಷಗಾನದಂತ ಶ್ರೀಮಂತ ಕಲೆಯನ್ನು ನಮ್ಮದಾಗಿಸಿಕೊಳ್ಳೋಣ. ಆಸಕ್ತರಿಗೆ ತರಬೇತಿ ಶಿಬಿರಕ್ಕೆ ಉಚಿತ ಪ್ರವೇಶವಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಜನಪದ ಹಾಗೂ ಯಕ್ಷಗಾನ ಕ್ಷೇತ್ರದ ಗಣ್ಯರನ್ನು ಮತ್ತು ತಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ. ಮಹಾಮನೆ ಮತ್ತು ಪ್ರಶಾಂತ್ ಶುಭದ.

