Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮವು ದಿನಾಂಕ 07 ಸೆಪ್ಟೆಂಬರ್ 2025ರಂದು ವಿರಾಜಪೇಟೆಯ ಪ್ರಗತಿ ಶಾಲಾ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಉದ್ಘಾಟಿಸಿ ಮಾತನಾಡಿ “ಮಕ್ಕಳು ಸಮಾಜದ ಭವಿಷ್ಯದ ಅಸ್ತಿಯಾಗಿದ್ದು, ಅವರನ್ನು ಸಮರ್ಥ ಮತ್ತು ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲೆಯಲ್ಲೂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದ್ದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಂಘಟನೆಯು ನಡೆಸುವ ಸೃಜನಾತ್ಮರ ಮಕ್ಕಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು”. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, “ಅತ್ಯಂತ ಪ್ರಾಮಾಣಿಕ ಮತ್ತು ನೈಜತೆಗೆ ಹತ್ತಿರವಾಗಿ ಮಕ್ಕಳ ಸೇವೆಯನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅತ್ಯಂತ…
ಬೆಂಗಳೂರು : ಸೈಡ್ ವಿಂಗ್ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಶೈಲೇಶ್ ಕುಮಾರ್ ಎಂ.ಎಂ. ಇವರ ರಚನೆ, ನಿರ್ಮಾಣ ಮತ್ತು ನಿರ್ದೇಶನದಲ್ಲಿ ‘ಸಡನ್ನಾಗ್ ಸತ್ಹೋದ್ರೆ’ ನಾಟಕ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಲಾಗಿದೆ. ಟಿಕೆಟ್ ದರ ರೂ.150/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9845087901 ಸಂಖ್ಯೆಯನ್ನು ಸಂಪರ್ಕಿಸಿರಿ.
ಪುತ್ತೂರು : ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಸಂಶೋಧನ ಕೇಂದ್ರ ಮತ್ತು ಐಕ್ಯೂಎಸಿ ಘಟಕ, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ “ವಿವೇಕ ಸ್ಮೃತಿ” ಉಪನ್ಯಾಸ ಮಾಲಿಕೆ ಕಾರ್ಯಕ್ರಮವು ದಿನಾಂಕ 12 ಸೆಪ್ಟೆಂಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಖ್ಯಾತ ವಾಗ್ಮಿ, ಚಿಂತಕ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ “ಎಲ್ಲರೊಳಗೆ ಒಳಗೊಳ್ಳುವ ಮಾನಸಿಕತೆ ಭಾರತೀಯರಿಗಿದೆ. ಅದನ್ನು ವಿಶ್ವದೆಲ್ಲೆಡೆ ಪಸರಿಸಿದ ಸ್ವಾಮಿ ವಿವೇಕಾನಂದರು ಶಾಂತಿ ಸಹಿಷ್ಣುತೆಗೆ ಹೊಸ ಆಯಾಮವನ್ನು ನೀಡಿದ್ದಾರೆ. ದೇಶಕ್ಕಾಗಿ, ಸಮಾಜಕ್ಕಾಗಿ ಪ್ರಾಣವನ್ನು ಮುಡಿಪಾಗಿಡುವ ಸಾವಿರಾರು ಯುವಕರಿಗೆ ವಿವೇಕಾನಂದರೇ ಪ್ರೇರಣೆ. ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದ ಮೂಲಕ ಭಾರತೀಯ ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದರು. ಅವರ ಭಾಷಣ ಪಾಶ್ಚಿಮಾತ್ಯ ದೇಶಗಳಿಗೆ ಭಾರತದ ಮೇಲಿರುವ ದೃಷ್ಟಿಕೋನ ಬದಲಿಸುತ್ತದೆ. ವಿವೇಕಾನಂದರು ನಾಯಕರಿಗೆ ನಾಯಕ. ಭಾರತದ ಋಷಿ ಪರಂಪರೆಯ ಪ್ರತಿನಿಧಿ ವಿವೇಕಾನಂದರು. ಮುಂದಿನ ಪೀಳಿಗೆಗೆ ವಿವೇಕಾನಂದರ ಚಿಂತನೆಗಳು ಹೊಸ ಬೆಳಕಾಗಲಿದೆ” ಎಂದು ಹೇಳಿದರು. ವಿವೇಕಾನಂದ…
ಮೈಸೂರು : ಜಗತ್ತಿನ ಸುಪ್ರಸಿದ್ಧ ಮೈಸೂರು ದಸರಾ ಉತ್ಸವ ಪ್ರತೀ ವರ್ಷ ಅದ್ದೂರಿಯಾಗಿ ಆಚರಿಸಲ್ಪಡುತ್ತಿದೆ. ಈ ವರ್ಷ ಕೂಡ ದಿನಾಂಕ 22 ಸೆಪ್ಟೆಂಬರ್ 2025ರಿಂದ 01 ಅಕ್ಟೋಬರ್ 2025ರವರೆಗೆ ‘ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ – 2025’ವನ್ನು ಮೈಸೂರಿನ ಹಳೆ ಡಿ.ಸಿ. ಕಚೇರಿ ಎದುರು ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಲು ಉದ್ದೇಶಿಸಿದೆ. ಈ ಪುಸ್ತಕ ಮೇಳದಲ್ಲಿ ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ ಸೇರಿದಂತೆ ಅನೇಕ ಸಾಹಿತ್ಯಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ರಾಜ್ಯದ ಆಸಕ್ತ ಲೇಖಕರು ಹಾಗೂ ಪ್ರಕಾಶಕರು ತಮ್ಮ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಬಯಸಿದ್ದಲ್ಲಿ ಪುಸ್ತಕ ಬಿಡುಗಡೆ ಮಾಡಲು ಸಹ ಉದ್ದೇಶಿಸಲಾಗಿದೆ. ನಾಡಿನ ಖ್ಯಾತ ಸಾಹಿತಿಗಳು ಪುಸ್ತಕ ಮೇಳದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡುವರು. 1. ಪುಸ್ತಕ ಬಿಡುಗಡೆ ಮಾಡಲು ಆಸಕ್ತರು ಮೊದಲು ನೋಂದಾಯಿಸಬೇಕು. 2. ಬಿಡುಗಡೆ ಮಾಡಲು ಬಯಸುವ ಪುಸ್ತಕದ ಎರಡು ಪ್ರತಿಯೊಂದಿಗೆ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು.…
ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಹಾಗೂ ದಸರಾ ಉತ್ಸವ ಸಮಿತಿ ವತಿಯಿಂದ ‘ದಸರಾ ಉತ್ಸವ-2025’ ದಿನಾಂಕ 30 ಸೆಪ್ಟೆಂಬರ್ 2025ರಂದು ಬಾಗಲಕೋಟೆ ಜಿಲ್ಲೆಯ ಕಮತಗಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕವಿಗಳು, ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ ಆಯೋಜನೆ ಮಾಡುತ್ತಿದ್ದು, ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಗಜಲ್ ಗೋಷ್ಠಿ, ವಿಚಾರ ಸಂಕಿರಣ, ಜಾನಪದ ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ, ಯುವ ಬರಹಗಾರರ ಪುಸ್ತಕಗಳಿಗೆ ‘ಮೇಘಮೈತ್ರಿ ಪುಸ್ತಕ ಪ್ರಶಸ್ತಿ’ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ‘ದಸರಾ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ವೇದಿಕೆಯಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದು, ತಾವುಗಳು ಈ ಉತ್ಸವದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರನ್ನು ಈ ಕೆಳಗಿನ ಮೊಬೈಲ್ ನಂಬರ್ ಗೆ ಕರೆಮಾಡಿ ನೊಂದಣಿ ಮಾಡಿಕೊಳ್ಳಬೇಕು. ಎಂ. ರಮೇಶ ಕಮತಗಿ : 9686782774 ವಿಶೇಷ ಸೂಚನೆ : *ಉತ್ಸವದಲ್ಲಿ ಭಾಗವಹಿಸುವ ಕವಿ-ಕಲಾವಿದರಿಗೆ ಊಟದ ವ್ಯವಸ್ಥೆ. *ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ಹಾಗೂ ಒಂದು…
ಶಿವಮೊಗ್ಗ : ಪ್ರಯೋಗಶೀಲ ಯುವ ಕವಿ, ಎಲ್ಲರು ಪ್ರೀತಿಯಿಂದ ‘ನಂಕು’ ಎಂದೇ ಕರೆಯುವ ನಂದನ ಕುಪ್ಪಳಿ (32) ದಿನಾಂಕ 11 ಸೆಪ್ಟೆಂಬರ್ 2025ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈಚೆಗೆ ಎಂ.ಎನ್.ಡಿ. ಕಾಯಿಲೆಗೆ ತುತ್ತಾಗಿ ದೈಹಿಕ ಸ್ವಾಧೀನ ಕಳೆದುಕೊಂಡಿದ್ದ ನಂದನ್ ಕುರಿತು ನೂರಾರು ಸಾಹಿತ್ಯ ಮನಸ್ಸುಗಳು ಮರುಗಿದ್ದವು. ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿಯೂ ಕುಪ್ಪಳಿಯ ಹೇಮಾಂಗಣದಲ್ಲಿ ವರ್ಷಗಳ ಹಿಂದೆ ‘ಭಾವರೇಖೆ’ ಎಂಬ ಕವನ ಸಂಕಲವನ್ನು ಹೊರ ತಂದಿದ್ದರು. ಇನ್ನೇನು ಎರಡನೇಯ ಕೃತಿ ಹೊರತರುವ ಪ್ರಯತ್ನದಲ್ಲಿದ್ದರು. ಕುವೆಂಪು ಪ್ರಕೃತಿ ಆರಾಧನೆ, ಕಾರಂತರ ಪ್ರಕೃತಿ ಚರ್ಯಟನೆ, ತೇಜಸ್ವಿ ಪ್ರಕೃತಿಯ ಅನ್ವೇಷಣೆಗಳಿಂದ ಪ್ರಭಾವಿತರಾಗಿ ಇವರು ತಮ್ಮ ಬದುಕು, ಆಲೋಚನೆ, ಬರವಣಿಗೆ, ನಡೆಯಲ್ಲಿ ಅವುಗಳನ್ನು ಮೈಗೂಡಿಸಿಕೊಂಡಿದ್ದರು. ಕವಿತೆ, ಕತೆ, ಪ್ರಬಂಧಗಳ ರಚನೆಯಲ್ಲಿ ತೊಡಗಿರುವ ಇವರ ಬರವಣಿಗೆಯ ಪ್ರಧಾನ ಅಂಶ ಪ್ರಕೃತಿ ಪ್ರೇಮವೆ ಆಗಿದೆ. ಓದು, ಬರಹ, ಫೋಟೋಗ್ರಫಿ, ಚಾರಣ, ಅಧ್ಯಾಪನ, ಕೃಷಿ ಇವು ಇವರ ಆಸಕ್ತಿಯ ಕ್ಷೇತ್ರಗಳು. ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿಯ ಶಾಲೆಗಳಲ್ಲಿ ಕೆಲಕಾಲ ಶಿಕ್ಷಕರಾಗಿ, ಮೂಡಿಗೆರೆಯ ತೇಜಸ್ವಿ ಪ್ರತಿಷ್ಠಾನದ…
ಬೆಂಗಳೂರು : ಆಕೃತಿ ಪುಸ್ತಕ ಮತ್ತು ಜೀರುಂಡೆ ಪುಸ್ತಕ ಇವರ ಸಹಯೋಗದಲ್ಲಿ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಇವರು ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ, ಎಚ್.ಎಸ್. ಶ್ರೀಮತಿ ಇವರ ‘ಸ್ತ್ರೀವಾದೀ ಸಾಹಿತ್ಯ ವಿಮರ್ಶೆ’ ಹಾಗೂ ಕೆ.ವಿ. ನಾರಾಯಣ ಇವರ ‘ಹೊಸ ಓದುಗರಿಗೆ ಕುವೆಂಪು’ ಮತ್ತು ‘ಕನ್ನಡ ನುಡಿ ರಚನೆ – ಕೆಲವು ನೆಲೆಗಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಪುಸ್ತಕ ಪರಿಚಯವನ್ನು ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ, ನಾಟಕಕಾರರಾದ ಕೆ.ವೈ. ನಾರಾಯಣಸ್ವಾಮಿ ಮತ್ತು ಪ್ರಾಧ್ಯಾಪಕರಾದ ಶಶಿಕಲಾ ಎಚ್. ಇವರು ಮಾಡಲಿದ್ದಾರೆ.
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 20, 21, 27 ಮತ್ತು 28 ಸೆಪ್ಟೆಂಬರ್ 2025ರಂದು (ಶನಿವಾರ ಮತ್ತು ಭಾನುವಾರ) ಸಂಜೆ 7-00 ಗಂಟೆಯಿಂದ 8-30ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ಸಂಗೀತ ಕಲಾ ಆಚಾರ್ಯ ವಿದುಷಿ ಗೀತಾ ರಾಜಾ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ವಿವಿಧ ಸಂಯೋಜಕರ ಜಾವಳಿಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.
ಬೆಂಗಳೂರು : ರಂಗಮಂಡಲ ಇದರ ವತಿಯಿಂದ ‘ಯಕ್ಷಯಾತ್ರೆ’ ಮೂಡಲಪಾಯ ಯಕ್ಷಗಾನ ರೆಪರ್ಟರಿ ಪ್ರಾರಂಭಗೊಳ್ಳಲಿದೆ. ಯಾವುದೇ ರಂಗ ಶಿಕ್ಷಣ ಕೇಂದ್ರಗಳಲ್ಲಿ ರಂಗ ತರಬೇತಿ ಹೊಂದಿರದ, ಅಭಿನಯಿಸಲು ಇಚ್ಚಿಸುವ 20ರಿಂದ 30 ವರ್ಷದೊಳಗಿನ ಕುಣಿತ, ಹಾಡುಗಾರಿಕೆ ಬಲ್ಲಂತಹ ನಟಿಸಲು ಆಸಕ್ತಿ ಇರುವ ಯುವಕ, ಯುವತಿಯರು ಈ ಯಕ್ಷಯಾತ್ರೆ ರೆಪರ್ಟರಿಗೆ ಸೇರಬಹುದು. * ಕನ್ನಡ ಭಾಷೆ ಬಲ್ಲವರಾಗಿರಬೇಕು. * ಹಿರಿಯ ಕಲಾವಿದರಿಂದ ಶಿಫಾರಸ್ಸು ಪತ್ರ ತರಬೇಕು. * ಆಧಾರ್ ಕಾರ್ಡ್ ಮತ್ತು ತಂದೆ ತಾಯಿಗಳ ಒಪ್ಪಿಗೆ ಪತ್ರ ಅಗತ್ಯವಿರುತ್ತದೆ * ಗುರುಕುಲ ಮಾದರಿಯ ಮೂಡಲಪಾಯ ಯಕ್ಷಗಾನ ಶಿಬಿರ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದವರು ಪ್ರಸಂಗದ ತಾಲೀಮೂ ಸೇರಿ 4 ತಿಂಗಳವರೆಗೆ ಯಕ್ಷಯಾತ್ರೆಯೊಡನೆ ಇರಬೇಕಾಗುತ್ತದೆ. * ನೋಂದಾವಣೆಯ ಕೊನೆಯ ದಿನಾಂಕ 21 ಸೆಪ್ಟೆಂಬರ್ 2025. * ಕಲಾವಿದರ ಆಯ್ಕೆಯನ್ನು ಆನ್ಲೈನ್ ಆಡಿಶನ್ ಮುಖಾಂತರ ದಿನಾಂಕ 05 ನವೆಂಬರ್ 2025 ಭಾನುವಾರ ನಡೆಸಲಾಗುವುದು. * ನಿಮ್ಮ ಪ್ರತಿಭೆ ಹಾಗೂ ರಂಗ ಕಾಯಕವನ್ನು ಗಮನಿಸಿ ತಿಂಗಳ ಸಂಭಾವನೆ ನೀಡಲಾಗುವುದು ಆಸಕ್ತರು ಫೋನ್…
ಉಡುಪಿ : ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬ್ರಹ್ಮಾವರ ವಲಯದ ಕೆ.ಪಿ.ಎಸ್. ಕೊಕ್ಕರ್ಣೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕ ಮೊದಲ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ದಿನಾಂಕ 10 ಸೆಪ್ಟೆಂಬರ್ 2025ರಂದು ನಡೆದ ಈ ಸ್ಪರ್ಧೆಯಲ್ಲಿ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದಲ್ಲಿ ಅಭಿನಯಿಸಿದ ‘ಕ್ಯೂರಿ-US’ ನಾಟಕದ ರಚನೆ ವರದರಾಜ್ ಬಿರ್ತಿ ಮಾಡಿದ್ದು, ಸಂಗೀತ – ಶುಭಕರ್ ಪುತ್ತೂರು, ರಂಗಸಜ್ಜಿಕೆ – ಹರೀಶ್ ಮತ್ತು ಪ್ರಸಾಧನ – ಶ್ರೀಶ ತೆಕ್ಕಟ್ಟೆ ಇವರದು.