Subscribe to Updates
Get the latest creative news from FooBar about art, design and business.
Author: roovari
ಕುಪ್ಪಳ್ಳಿ : ಶ್ರೀ ಬಿ. ನಾಗೇಶ್ ನೇತೃತ್ವದ ಜಾಗೃತಿ ಟ್ರಸ್ಟ್ ಬೆಂಗಳೂರು ಸಂಸ್ಥೆ ಹಾಗೂ ರೋಟರಿ ಕ್ಲಬ್ ರಿಚ್ಮಂಡ್ ಟೌನ್ ಬೆಂಗಳೂರು ಜಂಟಿಯಾಗಿ ದಿನಾಂಕ 28 ಜುಲೈ 2024 ಆದಿತ್ಯವಾರದಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳ್ಳಿಯ ಪುಣ್ಯ ಮಣ್ಣಿನಲ್ಲಿನ ಕುವೆಂಪು ಶತಮಾನೋತ್ಸವ ಭವನದಲ್ಲಿ ಗುರುವಂದನಾ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ಅದ್ದೂರಿಯಾಗಿ ನಡೆಯಿತು. ಸಮಾಜ ಸೇವಕಿ ಶ್ರೀಮತಿ ಲಕ್ಷ್ಮೀದೇವಿ ಅವರು ದೀಪ ಬೆಳಗುವುದರ ಮೂಲಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಯುತ ಸದಾಶಿವಯ್ಯ ಅವರು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಯುತರಾದ ಸುರೇಶ ಕುಮಾರ್ ಮತ್ತು ಶ್ರೀಕಾಂತ್ ಮಂಗಳಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಈ ವೇದಿಕೆಯಲ್ಲಿ ಡಾ. ಬಿ.ಎಸ್. ಮಂಜುನಾಥ್ ಅವರ ‘ಭಾವಜೀವಿಯ ಅನುಭಾವ ಲಹರಿ’ ಕವನ ಸಂಕಲನವನ್ನು ಕಾಸರಗೋಡಿನ ಆಯುರ್ವೇದ ವೈದ್ಯೆ, ಕವಯತ್ರಿ ಮತ್ತು ಸಂಘಟಕಿಯಾದ ಡಾ. ವಾಣಿಶ್ರೀ ಕಾಸರಗೋಡು ಇವರು ಲೋಕಾರ್ಪಣೆ ಮಾಡಿದರು. ಜಾಗೃತಿ ಟ್ರಸ್ಟಿನ…
ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 2 ಆಗಸ್ಟ್ 2024ರಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6-00 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀ ರವಿ ಅಲೆವೂರಾಯ ನೇತೃತ್ವದ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಮೇಳ ಸರಯೂ ಬಾಲ ಯಕ್ಷ ವೃಂದ (ರಿ.) ಕೋಡಿಕಲ್ ಇವರಿಂದ ‘ವೀರ ಶತಕಂಠ’ (ಶೂರ್ಪನಖ ವಧಾ) ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಬಂಟಕಲ್ಲು : ನಾಗರಿಕ ಸಮಿತಿ ಬಂಟಕಲ್ಲು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ ಬಂಟಕಲ್ಲಿನ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷರಾದ ಕೆ.ಆರ್. ಪಾಟ್ಕರ್ ಇವರಿಗೆ ಉಡುಪಿ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀ ರವಿರಾಜ್ ಎಚ್.ಪಿ. ಇವರು ದಿನಾಂಕ 31 ಜುಲೈ 2024ರಂದು ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ರವಿರಾಜ್ ಎಚ್.ಪಿ. ಮಾತನಾಡುತ್ತಾ “ಉಡುಪಿ ತಾಲೂಕಿನಲ್ಲಿ ಈಗಾಗಲೇ 65 ಗ್ರಂಥಾಲಯಗಳು ಮನೆ, ಅಂಗಡಿ, ಆಸ್ಪತ್ರೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣಗೊಂಡಿದೆ. 100 ದಿನಗಳಲ್ಲಿ ನೂರು ಗ್ರಂಥಾಲಯ ನಿರ್ಮಾಣಗೊಳ್ಳುವ ಆಶಯವನ್ನು ಹೊಂದಿದ್ದು, ಕ.ಸಾ.ಪ. ಕಾಪು ತಾಲೂಕು ಘಟಕ ಈ ಅಭಿಯಾನದಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ” ಎಂದರು. ಈ ಸಂದರ್ಭದಲ್ಲಿ ಕ.ಸಾ.ಪ. ಕಾಪು ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೊಶಾಧಿಕಾರಿ ಜಗದೀಶ ಆಚಾರ್ಯ, ಸದಸ್ಯರಾದ…
ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಬೈಕಾಡಿ ಪ್ರತಿಷ್ಠಾನ (ರಿ.) ಮಂಗಳೂರು ಇವರ ವತಿಯಿಂದ ಕೆನರಾ ಕಲ್ಚರಲ್ ಅಕಾಡೆಮಿಯ ಸಹಯೋಗದೊಂದಿಗೆ ಬೈಕಾಡಿ ಜನಾರ್ದನ ಆಚಾರ್ ಸ್ಮರಣಾರ್ಥ ಮಕ್ಕಳ ನಾಟಕೋತ್ಸವವನ್ನು ದಿನಾಂಕ 3 ಆಗಸ್ಟ್ 2024ರಂದು ಸಂಜೆ ಗಂಟೆ 6-00ಕ್ಕೆ ಮಂಗಳೂರು ಡೊಂಗರಗೇರಿ ಕೆನರಾ ಹೆಮ್ಮಕ್ಕಳ ಪ್ರೌಢ ಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ವೈದೇಹಿ ರಚನೆಯ ಹಾಗೂ ಡಾ. ಜೀವನ್ ರಾಂ ಸುಳ್ಯ ಇವರ ನಿರ್ದೇಶನ ಮತ್ತು ರಂಗವಿನ್ಯಾಸದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ‘ನಾಯಿ ಮರಿ’ ನಾಟಕ ಪ್ರದರ್ಶನ ನಡೆಯಲಿದೆ. ಆಸಕ್ತರಿಗೆ ಉಚಿತ ಪ್ರವೇಶವಿದೆ. ಓರ್ವ ಶಿಕ್ಷಕರಾಗಿ, ಕಲಾರಾಧಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಬಹುಮುಖ ವ್ಯಕ್ತಿತ್ವದ ಶ್ರೀ ಬೈಕಾಡಿ ಜನಾರ್ದನ ಆಚಾರ್ ಇವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ. ಪ್ರಬುದ್ಧ ಶಿಕ್ಷಕರಾಗಿದ್ದ ಶ್ರೀಯುತರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಿ, ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಲ್ಲಿ ಪ್ರೇರಣೆ…
ಉಡುಪಿ : ಮಂದಾರ್ತಿ,ಮಡಾಮಕ್ಕಿ, ಅಮೃತೇಶ್ವರಿ,ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು 30 ಜುಲೈ 2024 ರಂದು ನಿಧನ ಹೊಂದಿದರು. ಅವರಿಗೆ 26 ವರ್ಷ ವಯಸ್ಸಾಗಿತ್ತು. ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಯಕ್ಷಗಾನ ನೃತ್ಯಾಭ್ಯಾಸ ಮಾಡಿ ಭರವಸೆಯ ಕಲಾವಿದರಾಗಿದ್ದ ಇವರು ಮುಂದಿನ ತಿರುಗಾಟಕ್ಕೆ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಶ್ರೀಯುತರು ತಾಯಿ, ತಮ್ಮ ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವತಿಯಿಂದ ನೀಡಲಾಗುವ ‘ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ’ಗೆ ಕತೆಗಾರ ದಯಾನಂದ ಅವರ ‘ಬುದ್ಧನ ಕಿವಿ’ ಕಥಾ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು ರೂ.15,000/- ನಗದು, ಬೆಳ್ಳಿ ಫಲಕ ಒಳಗೊಂಡಿದೆ. ಈ ಸಮಿತಿಗೆ ಲೇಖಕರಾದ ಎಚ್.ಆರ್. ಸುಜಾತ, ಪ್ರೊ. ಕೆ. ಫಣಿರಾಜ್, ಟಿ.ಎಸ್. ಗೊರವರ ನಿರ್ಣಾಯಕರಾಗಿದ್ದರು. ದಯಾನಂದ : 14 ಏಪ್ರಿಲ್ 1988ರಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಜನಿಸಿದ ಇವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿರುವ ಇವರು ‘ಸಮಯ ಟಿ.ವಿ.’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಮುಂತಾದ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕಗಳ ಕಾಲ ಪತ್ರಿಕೋದ್ಯಮದ ಅನುಭವ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2017ರಲ್ಲಿ ಪ್ರಕಟಗೊಂಡ ‘ದೇವರು ಕಚ್ಚಿದ ಸೇಬು’ ಇವರ ಪ್ರಥಮ ಕಥಾ ಸಂಕಲನ. 2005ರಲ್ಲಿ ಪ್ರಕಟಗೊಂಡ ‘ಬಾಳಪೂರ್ಣ’ ನಾಟಕ ‘ಛಂದಪುಸ್ತಕ’ ಬಹುಮಾನ ಪಡೆದಿದೆ. ಶ್ರೀಯುತರು ರಚಿಸಿದ ಕತೆಗಳಿಗ ಗುಲ್ಬರ್ಗ ವಿಶ್ವವಿದ್ಯಾಲಯದ ‘ಚಿನ್ನದ ಪದಕ’,…
ಮಂಗಳೂರು : ಕುಡ್ಲ ಆರ್ಟ್ಸ್ ಫೆಸ್ಟಿವಲ್ ಮತ್ತು ರಾಮಕೃಷ್ಣ ಮಠ ಪ್ರಸ್ತುತ ಪಡಿಸುವ ವಿಶ್ವವಿಖ್ಯಾತ ರಂಜನಿ ಮತ್ತು ಗಾಯತ್ರಿ ಇವರಿಂದ ‘ರಾಗ ಲಹರಿ’ ಕರ್ನಾಟಕ ಸಂಗೀತ ಗಾಯನ ಕಛೇರಿಯು ದಿನಾಂಕ 4 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ನಡೆಯಲಿದೆ. ರಂಜನಿ-ಗಾಯತ್ರಿ (RaGa sisters) ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುಗರಿಗೆ ಈ ಸಿರಿಕಂಠದ ಜೋಡಿಯ ಹೆಸರು ಚಿರಪರಿಚಿತ. ಇವರ ಯುಗಳ ಗಾಯನ ಜಗತ್ಪಸಿದ್ದ. ಇವರು ರಾಗಗಳ ಸ್ವರಮಾಲೆ ಪೋಣಿಸಿದರೆಂದರೆ ಕಛೇರಿ ಮುಗಿದರೂ ಮನದಲ್ಲಿ ರಾಗಗಳದ್ದೇ ಗುಂಗು. ರಾಗ-ತಾನ-ಪಲ್ಲವಿ ಹಾಡುವುದನ್ನು ಕೇಳುವುದೇ ಪರಮಾನಂದ. ಚೆನ್ನೈಯಲ್ಲಿ ನೆಲೆಸಿರುವ ಈ ಸಹೋದರಿಯರು, ಎಳೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಪಕ್ವತೆ ಸಾಧಿಸಿದವರು. ಈ ಯುಗಳ ಸಹೋದರಿಯರು ವಿಶ್ವವೇದಿಕೆವರೆಗೆ ಹೋದದ್ದು ಗಾಯಕಿಯರಾಗಿ, ಗಾಯನ ಕಲಿಕೆಗೂ ಮುನ್ನ ಇಬ್ಬರೂ ಪಿಟೀಲು ವಾದಕಿಯರಾಗಿದ್ದರು. ಹದಿಹರೆಯದಲ್ಲೇ ಘಟಾನುಘಟಿ ಕಲಾವಿದರಾಗಿದ್ದ ಡಿ.ಕೆ. ಪಟ್ಟಮ್ಮಾಳ್, ಬಾಲಮುರಳಿಕೃಷ್ಣ, ಟಿ. ವಿಶ್ವನಾಥನ್ನಂಥವರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಸೈ ಎನಿಸಿಕೊಂಡವರು. ದೇಶ ವಿದೇಶಗಳಲ್ಲಿ ಸಂಗೀತದ ಕಂಪನ್ನು ಪಸರಿಸಿದ…
ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ. ಪನ್ನಗಾ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಪಿ.ಜಿ. ಪನ್ನಗಾ ರಾವ್ ಇವರು ಉಡುಪಿಯ ಶ್ರೀ ಗಣೇಶ್ ರಾವ್ ಹಾಗೂ ಶ್ರೀಮತಿ ಸುಮನಾ ಜಿ. ರಾವ್ ದಂಪತಿಗಳ ಸುಪುತ್ರಿ. ಉಡುಪಿಯ ಸೃಷ್ಟಿ ನೃತ್ಯಕಲಾ ಕುಟೀರ ಸಂಸ್ಥೆಯ ನಿರ್ದೇಶಕಿಯಾಗಿರುವ ಡಾ. ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿರುತ್ತಾರೆ. ಈವರೆಗೆ 600ಕ್ಕೂ ಮಿಕ್ಕಿ ಭರತನಾಟ್ಯ ಪ್ರದರ್ಶನವನ್ನು ನೀಡಿರುವ ಈಕೆ ವಿದ್ಯಾರ್ಜನೆಯಲ್ಲಿಯೂ ಉನ್ನತ ಸಾಧನೆಯನ್ನು ಮಾಡಿರುತ್ತಾರೆ. ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ ನಡೆಸುವ ಭರತನಾಟ್ಯ ಜ್ಯೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ದೇಶದಾದ್ಯಂತ ನಡೆಯುವ ಪ್ರತಿಷ್ಠಿತ ಭರತನಾಟ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ‘ಶ್ರೇಷ್ಠಕಲಾಯಶಸ್ವಿ’, ‘ನಾಟ್ಯ ಪ್ರವೀಣೆ, ‘ನಟವಾರ್ ಗೋಪಾಲಕೃಷ್ಣ ನ್ಯಾಷನಲ್ ಅವಾರ್ಡ್’, ‘ಕಲಾ ಸೌರಭ’, ‘ನೃತ್ಯ ವೃಂದ 2020’, ‘ನಾಟ್ಯ ಪ್ರಿಯ’, ‘ನಾದನಂ ಶೋಭನಮ್ 2020’, ‘ನಾಟ್ಯ ಮಯೂರಿ’ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿರುತ್ತಾರೆ.
ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಆಶ್ರಯದಲ್ಲಿ ಏಳನೇ ವರ್ಷದ ‘ಯಕ್ಷ ವೈಭವ’ ಕಾರ್ಯಕ್ರಮವನ್ನು ದಿನಾಂಕ 03 ಆಗಸ್ಟ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಜೆ 4-00 ಗಂಟೆಗೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಯಕ್ಷ ಛಾಯಾಚಿತ್ರ ಪ್ರದರ್ಶನ, ಪ್ರಶಸ್ತಿ ಪ್ರದಾನ ಮತ್ತು ಯಕ್ಷ ವೈಭವಗಳು ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಬಣ್ಣದ ವೇಷಧಾರಿ ಶ್ರೀ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಇವರಿಗೆ ‘ಭ್ರಾಮರೀ ಯಕ್ಷ ಮಣಿ ಪ್ರಶಸ್ತಿ’ ಹಾಗೂ ಅಪೂರ್ವ ಯಕ್ಷ ಛಾಯಾಚಿತ್ರಗಳ ಸಂಗ್ರಹಕರಾದ ಶ್ರೀ ಮನೋಹರ ಯಸ್. ಕುಂದರ್ ಎರ್ಮಾಳ್ ಬಡ ಇವರ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ (ರಿ.) ಕೈರಂಗಳ ಇವರಿಗೆ ‘ಭ್ರಾಮರೀ ಯಕ್ಷ ಸೇವಾ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಸಂಜೆ 4-00 ಗಂಟೆಗೆ ಶ್ರೀ ಮನೋಹರ ಯಸ್. ಕುಂದರ್ ಎರ್ಮಾಳ್ ಬಡ ಇವರ ಸಂಗ್ರಹದ ಅಪೂರ್ವ ಯಕ್ಷ ಛಾಯಾಚಿತ್ರಗಳ ಪ್ರದರ್ಶನ ಮತ್ತು ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಪಂಚವಟಿ’, ‘ಕಂಸ ವಿವಾಹ’ ಸುಧನ್ವ ಮೋಕ್ಷ’ ಹಾಗೂ…
ಮಂಗಳೂರು: ಕೊಂಕಣಿ ಸಾಹಿತಿ, ಕಲಾವಿದರು ಹಾಗೂ ಸಂಘ ಸಂಸ್ಥೆಗಳು ತಮ್ಮ ಮಾಹಿತಿ, ವಿಳಾಸ ಮತ್ತಿತರ ವಿವರಗಳನ್ನು ಅಕಾಡೆಮಿಯ ಕಚೇರಿಗೆ ಕಳುಹಿಸುವಂತೆ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮನವಿ ಮಾಡಿದೆ. ವಿವರಗಳನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆಯ ಕಟ್ಟಡ, ಲಾಲ್ಬಾಗ್, ಮಂಗಳೂರು 575003 ಈ ವಿಳಾಸಕ್ಕೆ ಕಳುಹಿಸಬೇಕೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0824 2453167